ಬೆಂಗಳೂರು : ಕನ್ನಡದ ಕಾಶಿನಾಥ ಅಭಿನಯದ ಅನುಭವ ಸಿನಿಮಾ, ಬೆಟ್ಟದ ಹೂ ಸಿನಿಮಾದ ಮೂಲಕ ಕನ್ನಡದ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕನ್ನಡದ ಹಿರಿಯ ನಟ ಶಂಖನಾದ ಅರವಿಂದ್ ಅವರು ಕೊರೋನಾಗೆ ಬಲಿಯಾಗಿ ಅಸುನೀಗಿದ್ದಾರೆ.
ಕಳೆದ 10 ದಿನಗಳಿಂದ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಂಖನಾದ ಅರವಿಂದ್(Shankanada Aravind) ಅವರು ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದರು, ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಇದನ್ನೂ ಓದಿ : #FightAgainstCorona : ಕರೋನಾ ವಿರುದ್ಧ ಹೊಸ ಅಭಿಯಾನ ಆರಂಭಿಸಿದ ವಿರುಷ್ಕಾ
ಶಂಖನಾದ ಅರವಿಂದ್ ಅವರಿಗೆ 70 ವರ್ಷ ವಯಸ್ಸಾಗಿತ್ತು, ಕನ್ನಡದ ಬೆಟ್ಟದ ಹೂ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್(Puneeth Rajkumar) ಜೊತೆಗೆ ನಟಿಸಿದ್ದು ಇಂದಿಗೂ ಕೂಡ ಕನ್ನಡ ಸಿನಿಮಾ ರಂಗದವರು ಮರೆತಿಲ್ಲ. ಕಾಡಿನ ಬೆಂಕಿ, ಪ್ರಥಮ ಉಷಾಕಿರಣ, ಅನುಭವ, ಅನುಭವ, ಸಿನಿಮಾದಲ್ಲಿ ಅಭಿನಯಸಿದ್ದ ಅವರು ಶಂಖನಾದ ಸಿನಿಮಾದಲ್ಲಿ ದಾಸಯ್ಯನ ಪಾತ್ರದ ಮೂಲಕ ಅಭಿನಯಿಸಿದ ಸಲುವಾಗಿ ಅವರ ಹೆಸರಿನ ಮುಂದೆ ಶಂಖನಾದ ಎನ್ನುವ ಹೆಸರು ಬಂದಿದೆ.
ಇದನ್ನೂ ಓದಿ : ತನ್ನ ಚಿಕ್ಕಮ್ಮನಿಗೆ ಆಕ್ಸಿಜನ್ ಸಿಲಿಂಡರ್ ಕೋರಿದ ರೈನಾ ನೆರವಿಗೆ ಧಾವಿಸಿದ ಸೋನು ಸೂದ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.