ನವದೆಹಲಿ : CBSE Class 10th Result 2021: ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ ಇನ್ನಷ್ಟು ವಿಳಭವಾಗುವ ಸಾಧ್ಯತೆಯಿದೆ. 10 ನೇ ತರಗತಿಯ ಫಲಿತಾಂಶದ ಆಂತರಿಕ ಕಾರ್ಯವನ್ನು ಜೂನ್ 5 ರೊಳಗೆ ಎಲ್ಲಾ ರಾಜ್ಯಗಳ ಎಲ್ಲಾ ಶಾಲೆಗಳು ಸಿದ್ಧಪಡಿಸಬೇಕಾಗಿದೆ. ಆದರೆ, ದೆಹಲಿಯ ಅನೇಕ ಸರ್ಕಾರಿ ಶಾಲೆಗಳ ಶಿಕ್ಷಕರು ಕರೋನಾ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಅಥವಾ ಕರೋನಾ ಪಾಸಿಟಿವ್ (Corona Positive) ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಸಿಬಿಎಸ್ ಇ ಬೋರ್ಡ್ (CBSE Board) ಬಳಿ ಸಮಯಾವಕಾಶ ಕೋರಿದೆ. ಆದ್ದರಿಂದ ಫಲಿತಾಂಶ ವಿಳಂಬವಾಗುವ ಸಾಧ್ಯತೆಯಿದೆ. .
ಕರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಶಿಕ್ಷಣ ಇಲಾಖೆ ಸಿಬಿಎಸ್‌ಇ 10 ನೇ ತರಗತಿ ರಿಸಲ್ಟ್ ಶೀಟ್ (CBSE Class 10th Result 2021 Sheet) ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವಂತೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ (CBSE) ಮನವಿ ಮಾಡಿದೆ. ರಾಜ್ಯದ ಪರಿಸ್ಥಿಯಿಯನ್ನು ವಿವರಿಸಿ, ದೆಹಲಿಯ ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ರೀಟಾ ಶರ್ಮಾ, ಸಿಬಿಎಸ್‌ಇಗೆ ಪತ್ರ ಬರೆದಿದ್ದಾರೆ. ಲಾಕ್‌ಡೌನ್ (Lockdown) ಸಂದರ್ಭದಲ್ಲಿ ಶಿಕ್ಷಕರಿಗೆ ವಿವಿಧ ಕರ್ತವ್ಯಗಳನ್ನು ವಹಿಸಲಾಗಿದೆ. ಹೀಗಾಗಿ, ರಿಸಲ್ಟ್ ಶೀಟ್ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಬೇಕಾಗಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : Air Ambulance- ಟೇಕ್ಆಫ್ ವೇಳೆ ವಿಮಾನದಿಂದ ಬೇರ್ಪಟ್ಟ ಚಕ್ರ, ಮುಂದೆ....
ಫಲಿತಾಂಶವನ್ನು ಅಂತಿಮಗೊಳಿಸಲು ಪ್ರಾಂಶುಪಾಲರು ಮತ್ತು ಏಳು ಶಿಕ್ಷಕರನ್ನೊಳಗೊಂಡ ಫಲಿತಾಂಶ ಸಮಿತಿಯನ್ನು ರಚಿಸುವಂತೆ ಮಂಡಳಿ ಎಲ್ಲಾಶಾಲೆಗಳಿಗೂ ಸೂಚಿಸಿದೆ. ಈ ಸಮಿತಿಯಲ್ಲಿ ಗಣಿತ (Math) , ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಎರಡು ಭಾಷೆಗಳ ಶಿಕ್ಷಕರು ಇರಬೇಕು. ಅಲ್ಲದೆ, ನೆರೆಯ ಶಾಲೆಗಳ ಇಬ್ಬರು ಶಿಕ್ಷಕರನ್ನು ಕೂಡಾ ಈ ಸಮಿತಿಯಲ್ಲಿ ಬಾಹ್ಯ ಸದಸ್ಯರ ರೂಪದಲ್ಲಿ ಸೇರಿಸಿಕೊಳ್ಳಬೇಕು. ಸರ್ಕಾರಿ ಶಾಲಾ ಅಧಿಕಾರಿಗಳ ಪ್ರಕಾರ, ಫಲಿತಾಂಶ ಸಮಿತಿಯಲ್ಲಿ ಶಾಲೆಯ 5 ಶಿಕ್ಷಕರು ಮತ್ತು ಇತರ ಎರಡು ಶಾಲೆಗಳ 2 ಶಿಕ್ಷಕರ ತಂಡವನ್ನು ರಚಿಸುವುದು ಬಹಳ ಕಷ್ಟ ಎಂದು ಹೇಳಲಾಗಿದೆ.
10 ನೇ ಬೋರ್ಡ್ ಫಲಿತಾಂಶವನ್ನು (CBSE Class 10th Result 2021) ಯಾವ ಆಧಾರದಲ್ಲಿ ಪ್ರಕಟಿಸಲಾಗುವುದು ಎನ್ನುವುದಕ್ಕೆ ಸಿಬಿಎಸ್ ಇ ಒಂದು ಸೂತ್ರವನ್ನು ಸಿದ್ದಪಡಿಸಿದೆ. ಇದರ ಆಧಾರದ ಮೇಲೆ ಜೂನ್ 20 ರೊಳಗೆ ಘೋಷಿಸಲಾಗುವುದು ಎಂದು ಸಿಬಿಎಸ್‌ಇ ನಿರ್ಧರಿಸಿದೆ.
ಇದನ್ನೂ ಓದಿ : ತಮಿಳುನಾಡಿನ ನೂತನ ಸಚಿವ ಸಂಪುಟದಲ್ಲಿ ಸ್ಟಾಲಿನ್, ಗಾಂಧಿ, ನೆಹರು...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.