ನವದೆಹಲಿ : ಹಿಂದೂ ಪಂಚಾಂಗದ ಪ್ರಕಾರ 2021 ಏಪ್ರಿಲ್ 28 ರಿಂದ ವೈಶಾಖ ಮಾಸ ಆರಂಭವಾಗಿದೆ. ಧಾರ್ಮಿಕ ಕಾರ್ಯಗಳಿಗೆ ವೈಶಾಖ ಮಾಸ ಬಹಳ ಪ್ರಶಸ್ತ್ಯ ಎನ್ನಲಾಗಿದೆ. ವೈಶಾಕ ಮಾಸದಲ್ಲಿ ವಿಷ್ಣವಿಗೆ (Lord Vishnu) ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದರೊಂದಿಗೆ ಈ ಮಾಸದಲ್ಲಿ ಬ್ರಹ್ಮ ಮತ್ತು ಶಿವನ ಪೂಜೆ ಮಾಡಿದರೂ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. ಇನ್ನು ಶನಿದೇವನನ್ನು (Shani Dev) ಶಾಂತವಾಗಿಡಲು ಕೂಡಾ ವೈಶಾಖ ಮಾಸದ ಪೂಜೆ ಪರಿಣಾಮಕಾರಿ ಎಂ ಬುದು ನಂಬಿಕೆ. .
ವೈಶಾಖ ಮಾಸದಲ್ಲಿ ಶನಿದೇವನಿಗೆ (Shani Dev) ಸಲ್ಲಿಸುವ ಈ ಪೂಜೆಯಿಂದ ಏಳೂವರೆ ಶನಿ, ಮತ್ತು ಎರಡೂವರೆ ವರ್ಷದ ಶನಿ ದೋಷದಿಂದ ಮುಕ್ತಿ ಪಡೆಯಬಹುದಂತೆ. ಶನಿದೇವನನ್ನು ಶಾಂತವಾಗಿರಿಸಲು ಕೆಲವೊಂದು ವಿಧಾನಗಳಿವೆ. ಅದನ್ನು ಅನುಸರಿಸಿದರೆ ಶನಿದೇವ ತನ್ನ ವಕ್ರ ದೃಷ್ಟಿಯನ್ನು ಬೀರುವುದಿಲ್ಲವಂತೆ.
ಇದನ್ನೂ ಓದಿ : ಹಣಕಾಸಿನ ಸಮಸ್ಯೆಯಾಗಲಿ, ಸಂಬಂಧದ ನಡುವಿನ ಬಿಕ್ಕಟ್ಟಾಗಲಿ ಚಿಟಿಕೆ ಅರಶಿನದಲ್ಲಿದೆ ಎಲ್ಲದಕ್ಕೂ ಪರಿಹಾರ..!
- ಇದು ಬೇಸಿಗೆ ಕಾಲ (Summer) , ಹೊರಗೆ ರಣರಣ ಬಿಸಿಲು. ಹಾಗಾಗಿ ಈ ಸಮಯದಲ್ಲಿ, ಪ್ರಾಣಿಗಳು ಮತ್ತು ಪಕ್ಷಿಗಳಿಗೆ (Birds) ಕುಡಿಯಲು ನೀರು ಇಡಿ.
- ಅಗತ್ಯವಿರುವವರಿಗೆ ಆಹಾರ (Food) ಇತ್ಯಾದಿಗಳನ್ನು ದಾನ ಮಾಡಿ.
- ಈ ಸಮಯದಲ್ಲಿ, ಜನರಿಗೆ ಕಪ್ಪು ಕೊಡೆಯನ್ನು (Umbrella) ದಾನವಾಗಿ ನೀಡಿ.
- ಈ ಸಮಯದಲ್ಲಿ, ದಾರಿಹೋಕರಿಗೆ ಬಾಯಾರಿಕೆ ಕಡಿಮೆ ಮಾಡಲು ನೀರಿನ (Water) ವ್ಯವಸ್ಥೆ ಮಾಡಿ
- ದಿವ್ಯಾಂಗರ ಸೇವೆ ಮಾಡಿ ಮತ್ತು ಅವರಿಗೆ ಸಹಾಯ ಮಾಡಿ
ಇದನ್ನೂ ಓದಿ : Chandra Grahan 2021: ಈ ದಿನ ಸಂಭವಿಸಲಿದೆ ವರ್ಷದ ಮೊಟ್ಟಮೊದಲ ಚಂದ್ರಗ್ರಹಣ, ಯಾವ ರಾಶಿಯ ಮೇಲೆ ಹೆಚ್ಚು ಪ್ರಭಾವ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.