Hanuman Jayanti 2021: ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಶ್ರೀ ಆಂಜನೇಯನ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಹನುಮ ಜಯಂತಿ ಎಂದೂ ಕೂಡ ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಹನುಮನ ಜನ್ಮೋತ್ಸವ ಕಾರ್ತಿಕ್ ಕೃಷ್ಣ ಚತುರ್ದಶಿ ಹಾಗೂ ಚೈತ್ರ ಶುಕ್ಲ ಹುಣ್ಣಿಮೆ (Chaitra Purnima April 2021) ಈ ಎರಡೂ ದಿನ ಆಚರಿಸಲಾಗುತ್ತದೆ. ಈ ವರ್ಷ ಚಿತ್ರ ಮಾಸದ ಶುಕ್ಲ ಹುಣ್ಣಿಮೆ ಏಪ್ರಿಲ್ 27, 2021 ರಂದು ಅಂದರೆ ಮಂಗಳವಾರ ಬಂದಿದೆ. ಹನುಮ ಜಯಂತಿಯ (Hanuman Jayanti 2021) ದಿಂದ ಹನುಮನ ಜೊತೆಗೆ ಶ್ರೀ ರಾಮನ ಆರಾಧನೆ ಕೂಡ ಮಾಡಲಾಗುತ್ತದೆ. ಶಾಸ್ತ್ರಗಳಲ್ಲಿ ಶ್ರೀ ರಾಮನನ್ನು ಹನುಮನ ಆರಾಧ್ಯ ದೈವ ಎಂದು ಕರೆಯಲಾಗಿದೆ. ಹೀಗಿರುವಾಗ ಬಜರಂಗಬಲಿ(Lord Hanuman)ಯನ್ನು ಪ್ರಸನ್ನಗೊಳಿಸಲು ಶ್ರೀರಾಮನಿಗೆ (Lord Ram) ಪೂಜೆ ಸಲ್ಲಿಸಲಾಗುತ್ತದೆ.
ಚೈತ್ರ ಹುಣ್ಣಿಮೆ ಹಾಗೂ ಹನುಮಾನ್ ಜಯಂತಿಯ ದಿನ ಏನು ಮಾಡಬೇಕು?
ಈ ದಿನ ಹುಣ್ಣಿಮೆ ಇರುವ ಕಾರಣ ಶ್ರೀ ವಿಷ್ಣುವಿಗೆ ಪೂಜೆ ಸಲ್ಲಿಸಲಾಗುತ್ತದೆ ಹಾಗೂ ಶ್ರೀ ಸತ್ಯನಾರಾಯಣ ಕಥೆಯನ್ನು ಆಲಿಸಲಾಗುತ್ತದೆ. ಈ ದಿನ ಶ್ರೀ ಆಂಜನೇಯನಿಗೆ ಪೂಜೆ ಸಲ್ಲಿಸುವುದು ಶುಭಕರ ಎನ್ನಲಾಗಿದೆ. ಇದರ ಜೊತೆಗೆ ಹನುಮ ಜಯಂತಿಯ ದಿನ ಶ್ರೀ ಆಂಜನೇಯ ಸ್ವಾಮಿಗೆ ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ಇದನ್ನೂ ಓದಿ-Hanuman Jayanti 2021: ಈ ದಿನ ಹನುಮನಿಗೆ ತುಳಸಿ ಮಾಲೆ ಯಾಕೆ ಅರ್ಪಿಸಲಾಗುತ್ತದೆ?
ಚೈತ್ರ ಹುಣ್ಣಿಮೆಯ ಶುಭ ಮುಹೂರ್ತ
ಚೈತ್ರ ಹುಣ್ಣಿಮೆಯ ದಿನಾಂಕ - ಮಂಗಳವಾರ ಏಪ್ರಿಲ್ 27, 2021,
ಹುಣ್ಣಿಮೆ ತಿಥಿ ಆರಂಭ - ಏಪ್ರಿಲ್ 26, 2021 ಅಪರಾಹ್ನ 12.44 ಗಂಟೆಗೆ.
ಹುಣ್ಣಿಮೆ ತಿಥಿ ಮುಕ್ತಾಯ - ಏಪ್ರಿಲ್ 27, 2021 ಬೆಳಗ್ಗೆ 09.01ಕ್ಕೆ .
ಇದನ್ನೂ ಓದಿ- Hanuman Jayanti 2021: ಹನುಮ ಜಯಂತಿಯ ದಿನ ಸುಂದರ ಕಾಂಡ ಏಕೆ ಪಠಿಸಬೇಕು?
ಹನುಮ ಜಯಂತಿಯ ದಿನ ಹೀಗೆ ಪೂಜೆ ಸಲ್ಲಿಸಿ
ಈಶಾನ್ಯ ದಿಕ್ಕಿನಲ್ಲಿ ಚೌರಂಗದ ಮೇಲೆ ಕೆಂಪು ಬಟ್ಟೆಯನ್ನು ಇರಿಸಿ. ಬಳಿಕ ಅದರ ಮೇಲೆ ಆಂಜನೇಯನ ವಿಗ್ರಹದ ಜೋತೆಗೆ ಶ್ರೀರಾಮನ ವಿಗ್ರಹ ಕೂಡ ಪ್ರತಿಷ್ಠಾಪಿಸಿ. ಬಳಿಕ ಶ್ರೀ ಆಂಜನೇಯನಿಗೆ ಕೆಂಪು ಮತ್ತು ಶ್ರೀ ರಾಮನಿಗೆ ಹಳದಿ ಬಣ್ಣದ ಹೂವುಗಳನ್ನು ತುಳಸಿ ದಳದ ಜೊತೆಗೆ ಅರ್ಪಿಸಿ. ಹೂವುಗಳನ್ನು ಅರ್ಪಿಸುವಾಗ 'ಶ್ರೀ ರಾಮ ರಾಮಾಯನಮಃ' ಮಂತ್ರ ಜಪಿಸಿ ಬಳಿಕ 'ಓಂ ಹನುಮತಯೇನಮಃ' ಮಂತ್ರ ಜಪಿಸಿ. ಆರತಿ ಮಾಡುವ ಮುನ್ನ ಹನುಮನಿಗೆ ಇಷ್ಟವಾದ ಬುಂದಿ ಉಂಡಿಯ ನೈವೇದ್ಯ ತೋರಿಸಿ. ಈಗ ಹನುಮನಿಗೆ ಪ್ರಸನ್ನಗೊಳಿಸಲು ಎಳ್ಳಿನ ಎಣ್ಣೆಯಲ್ಲಿ ಕಿತ್ತಳೆ ಸಿಂಧೂರ ಬೆರೆಸಿ ಅರ್ಪಿಸಿ. ಇದೆ ವೇಳೆ, ಹನುಮನಿಗೆ ಮಲ್ಲಿಗೆ ಪರಿಮಳ ಅಥವಾ ಎಣ್ಣೆ ಮತ್ತು ಕೆಂಪು ಹೂವುಗಳನ್ನು ಅರ್ಪಿಸುವುದನ್ನು ಸಹ ಶುಭವೆಂದು ಪರಿಗಣಿಸಲಾಗುತ್ತದೆ. ಶ್ರೀ ಆಂಜನೇಯನಿಗೆ ಪ್ರಸಾದ ತಯಾರಿಸುವಾಗಲೂ ಕೂಡ ವಿಶೇಷ ಗಮನ ಹರಿಸಿ. ಪ್ರಸಾದ ತಯಾರಿಸುವಾಗ ಸ್ನಾನ ಮಾಡಿ ಸಂಪೂರ್ಣ ಶುದ್ಧರಾಗಿ. ಪ್ರಸಾದವನ್ನು ಕೂಡ ಶುದ್ಧ ಸಾಮಗ್ರಿಗಳಿಂದ ತಯಾರಿಸಿ.
ಇದನ್ನೂ ಓದಿ- Hanuman Jayanti 2021: ಅದ್ಭುತ ಫಲಗಳನ್ನು ಪಡೆಯಲು ಹನುಮಾನ್ ಜಯಂತಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ಈ ಕೆಲಸ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.