ಜೋಹಾನ್ಸ್ಬರ್ಗ್: ಅಮೆರಿಕದ ನಂತರ, ದಕ್ಷಿಣ ಆಫ್ರಿಕಾ ಸಹ ಜಾನ್ಸನ್ ಮತ್ತು ಜಾನ್ಸನ್ರ COVID-19 ಲಸಿಕೆ ಬಳಕೆಯನ್ನು ನಿಷೇಧಿಸಲು ನಿರ್ಧರಿಸಿದೆ. ಕಂಪನಿಯ ಲಸಿಕೆ ಪಡೆದ ಆರು ಮಹಿಳೆಯರ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Blood Clot) ಮತ್ತು ಪ್ಲೇಟ್ಲೆಟ್ನಲ್ಲಿ ಇಳಿಕೆಯಾಗಿರುವ ವರದಿಗಳು ಬಂದವು. ಇದನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಆಫ್ರಿಕಾ ಸರ್ಕಾರ ಜಾನ್ಸನ್ ಅಂಡ್ ಜಾನ್ಸನ್ (Johnson & Johnson) ಲಸಿಕೆ ಬಳಕೆಯನ್ನು ನಿಷೇಧಿಸಲು ನಿರ್ಧರಿಸಿದೆ.
ಆರೋಗ್ಯ ಸಚಿವರು ಈ ವಿಷಯ ತಿಳಿಸಿದರು:
ಲಸಿಕೆಯಿಂದ ಮಹಿಳೆಯರ ಅನಾರೋಗ್ಯದ ಬಗ್ಗೆ ಮಾಹಿತಿ ಪಡೆದ ಕೂಡಲೇ ನಾನು ವಿಜ್ಞಾನಿಗಳೊಂದಿಗೆ ತಕ್ಷಣದ ಚರ್ಚೆ ನಡೆಸಿದ್ದೇನೆ ಎಂದು ಆರೋಗ್ಯ ಸಚಿವ ಜ್ವೆಲಿ ಮಿಜೆ ಮಂಗಳವಾರ ಸಂಜೆ ಹೇಳಿಕೆ ನೀಡಿದ್ದಾರೆ. ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ನಿರ್ಧಾರವನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿರುವ ಮಿಜೆ, ಲಸಿಕೆ ಪಡೆದ ನಂತರ ರಕ್ತ ಹೆಪ್ಪುಗಟ್ಟುವಿಕೆ (Blood Clot)ಗೆ ಕಾರಣ ತಿಳಿಯುವವರೆಗೂ ನಾವು ಜಾನ್ಸನ್ ಅಂಡ್ ಜಾನ್ಸನ್ (Johnson & Johnson) ಲಸಿಕೆಯನ್ನು ಬಳಸುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ - Foreigner Vaccine: ಭಾರತದಲ್ಲಿ ಎಲ್ಲಾ ವಿದೇಶಿ ಲಸಿಕೆಗಳಿಗೆ ಅನುಮತಿ ನೀಡಲು ಮುಂದಾದ ಕೇಂದ್ರ ಸರ್ಕಾರ
ಯುಎಸ್ನಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ:
ಆದರೆ, ದಕ್ಷಿಣ ಆಫ್ರಿಕಾದಲ್ಲಿ ಲಸಿಕೆ ಹಾಕಿದ ನಂತರ ರಕ್ತ ಹೆಪ್ಪುಗಟ್ಟುವ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ ಎಂದು ಮಿಜೆ ಹೇಳಿದ್ದಾರೆ. 289,787 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ. ರಕ್ತ ಹೆಪ್ಪುಗಟ್ಟುವಿಕೆಯ ಎಲ್ಲಾ ಪ್ರಕರಣಗಳು ಅಮೆರಿಕದಲ್ಲಿ (America) ಬಂದಿವೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶಗಳ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ 1,561,559 ಜನರು ಕರೋನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು 53,498 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ - WHO Chief: ವೇಗವಾಗಿ ಹರಡುತ್ತಿರುವ 'ಕೊರೋನಾ' ಕಾರಣಗಳನ್ನು ವಿವರಿಸಿದ WHO ಮುಖ್ಯಸ್ಥ!
68 ಲಕ್ಷ ಡೋಸ್ಗಳನ್ನು ನೀಡಲಾಗಿದೆ
ಈ ಮೊದಲು, ಅಮೇರಿಕನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಜಂಟಿ ಹೇಳಿಕೆಯಲ್ಲಿ ಜಾನ್ಸನ್ ಮತ್ತು ಜಾನ್ಸನ್ ಲಸಿಕೆ ಬಳಕೆಯು ಕೆಲವು ಗಂಭೀರ ಬೆದರಿಕೆಗಳನ್ನು ಒಡ್ಡಿದೆ ಎಂದು ಹೇಳಿದರು. ಈ ಸಿಂಗಲ್ ಡೋಸ್ ಲಸಿಕೆ ನೀಡಿದ ನಂತರ, ಅಮೆರಿಕದ ಆರು ಮಹಿಳೆಯರಿಗೆ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಕಂಡು ಬಂದಿದೆ. ಲಸಿಕೆ ತೆಗೆದುಕೊಂಡ ಕೆಲವು ದಿನಗಳ ನಂತರ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಪ್ರಾರಂಭವಾಯಿತು. ತನಿಖೆಯ ನಂತರ, ರಕ್ತ ಹೆಪ್ಪುಗಟ್ಟುವಿಕೆಯ ನಂತರ ಈ ಮಹಿಳೆಯರಲ್ಲಿ ಪ್ಲೇಟ್ಲೆಟ್ ಎಣಿಕೆ ಕೂಡ ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸಿರುವ ಅಂಶ ಬೆಳಕಿಗೆ ಬಂದಿದೆ. ಅಮೆರಿಕದಲ್ಲಿ ಜಾನ್ಸನ್ ಮತ್ತು ಜಾನ್ಸನ್ರ 68 ಲಕ್ಷ ಡೋಸ್ಗಳನ್ನು ನೀಡಲಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.