Latest Viral News - ಖ್ಯಾತ ಆಂಗ್ಲ ಭಾಷೆಯ ಕವಿ ವಿಲಿಯಂ ಶೇಕ್ಸ್ ಪಿಯರ್ ಅವರ 'ಹೆಸರಿನಲ್ಲೇನಿದೆ?' ಎಂಬ ನಾಣ್ನುಡಿ ನಿಮಗೂ ತಿಳಿದಿರಬಹುದು ಹಾಗೂ ಅವರ ಈ ಹೇಳಿಕೆಗೆ ಹಲವರು ಕೂಡ ತಮ್ಮ ಒಪ್ಪಿಗೆ ಸೂಚಿಸುವುದು ನಿಮಗೆ ಗೊತ್ತಿರಬೇಕು. ಆದರೆ, ಫ್ರಾನ್ಸ್ ನ ಒಂದು ಚಿಕ್ಕ ಗ್ರಾಮದ ಜನರಿಗೆ ಈ ನಾಣ್ನುಡಿ ಸರಿ ಅನ್ನಿಸಲಿಲ್ಲ ಎಂಬಂತೆ ಭಾಸವಾಗುತ್ತಿದೆ. ಇದು ಯಾಕೆಂದರೆ ಫೇಸ್ಬುಕ್ ಅವರ ಗ್ರಾಮದ ಪುಟವನ್ನು ಕೇವಲ ಅದರ ಹೆಸರಿನ ಕಾರಣ ಫೇಸ್ ಬುಕ್ ನಿಂದ ತೆಗೆದುಹಾಕಿದೆ.
Facebook ಇತ್ತೀಚೆಗಷ್ಟೇ 'ಬಿಟ್ಚೆ' ಹೆಸರಿನ ಒಂದು ನಗರದ ಫೇಸ್ ಬುಕ್ ಪುಟವನ್ನು ಅದರ ಹೆಸರಿನ ಕಾರಣ ಡೌನ್ ಮಾಡಿದೆ. ಈ ಹೆಸರು 'ಬಿಚ್' ಹೆಸರನ್ನು ಸ್ವಲ್ಪ ಹೋಲುತ್ತದೆ. ಆದರೆ ನಗರದ ಜನರು ಇದರಿಂದ ರೋಸಿಹೋಗಿದ್ದಾರೆ. ಇದರಿಂದ ಫೇಸ್ ಬುಕ್ (Facebook Confused With Name Of The City) ಕಂಪನಿ ಭಾರಿ ಟೀಕೆಯನ್ನೇ ಎದುರಿಸಬೇಕಾಗಿ ಬಂದಿದೆ.
ಸಾಮಾಜಿಕ ಜಾಲತಾಣದ (Social Media) ಸೈಟ್ ನ ಒಂದು ಅಲ್ಗೊರಿಥಂ ಈಶಾನ್ಯ ಫ್ರಾನ್ಸ್ ಗೆ ಸರಿದ ಮೊಸಲೆನ ಒಂದು ನಗರದ ಹೆಸರನ್ನು ಒಂದು ಅವಮಾನಕರ ಶಬ್ದ ಎಂದು ಪರಿಗಣಿಸಿದೆ. ಆದರೆ, ಇದನ್ನು ಕಂಪನಿಯ ನಿದರ್ಶನಕ್ಕೆ ತಂದ ಬಳಿಕ ನಿಬಂಧಕ್ಕೆ ಒಳಗಾದ ಒಂದು ತಿಂಗಳ ಬಳಿಕ ಈ ಪುಟವನ್ನು ಮಂಗಳವಾರ ಮತ್ತೊಮ್ಮೆ ಬಿಡುಗಡೆ ಮಾಡಲಾಗಿದೆ. ಫೇಸ್ ಬುಕ್ ನಿಯಮಗಳ ಪ್ರಕಾರ, ಪುಟಗಳ ಹೆಸರು ಸ್ಫುಟವಾಗಿರಬೇಕು ಹಾಗೂ ಅವು ಅವಮಾನಿಸುವಂತಹ ಶಬ್ದಗಳನ್ನು ಒಳಗೊಂಡಿರಬಾರದು.
ಇದನ್ನೂ ಓದಿ- Viral Video: ಮನುಷ್ಯನ ಮುಖ ಹೋಲುವ ಮೇಕೆ ಮರಿ ಜನನ 'ದೇವರ ಅವತಾರ' ಎಂದು ಪೂಜಿಸುತ್ತಿರುವ ಜನ!
ಬಿಬಿಸಿ ನ್ಯೂಸ್ ಪ್ರಕಟಿಸಿರುವ ಒಂದು ವರದಿಯ (Viral News) ಪ್ರಕಾರ ಸುಮಾರು 5000 ಜನಸಂಖ್ಯೆ ಹೊಂದಿರುವ ಈ ನಗರದ ಹೆಸರನ್ನು ನಿಯಮಗಳ ಉಲ್ಲಂಘನೆ ಹಿನ್ನೆಲೆ ಮಾರ್ಚ್ 19 ರಂದು ಫೇಸ್ ಬುಕ್ ನಿಂದ ತೆಗೆದುಹಾಕಲಾಗಿತ್ತು. ಆದರೆ, ಒಂದು ತಿಂಗಳ ಬಳಿಕ ಫೇಸ್ ಬುಕ್ ಗೆ ತನ್ನ ತಪ್ಪಿನ ಅರಿವಾಗಿದ್ದು, ಏಪ್ರಿಲ್ 13 ರಂದು ಸಂಸ್ಥೆ ಮತ್ತೆ ಈ ನಗರದ ಪುಟದ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದೆ.
ಇದನ್ನೂ ಓದಿ- Pure Gold Paan: ‘ಶುದ್ಧ ಚಿನ್ನದ’ ಪಾನ್ ಬೀಡಾ ನೋಡಿದ್ದೀರಾ? ಅದರ ಬೆಲೆ ಎಷ್ಟು? ಇಲ್ಲಿದೆ ನೋಡಿ!
ಈ ಕುರಿತು ಹೇಳಿಕೆ ನೀಡಿರುವ ನಗರದ ಮೇಯರ್" ಮಾರ್ಚ್ 19 ರಂದು, ಫೇಸ್‌ಬುಕ್ ಪುಟಗಳಿಗೆ ಅನ್ವಯವಾಗುವ ನಿಯಮಗಳ ಉಲ್ಲಂಘನೆಯಿಂದಾಗಿ ನಮ್ಮ ಪುಟ 'ವಿಲ್ಲೆ ಡಿ ಬಿಟ್ಚೆ' (ಸಿಟಿ ಆಫ್ ಬಿಟ್ಚೆ) (Ville De Bitche) ಇನ್ನು ಮುಂದೆ ಆನ್‌ಲೈನ್‌ನಲ್ಲಿಲ್ಲ ಎಂದು ಫೇಸ್‌ಬುಕ್ ನಮಗೆ ತಿಳಿಸಿತ್ತು" ನಮ್ಮ ನಗರದ ಹೆಸರನ್ನು ಅವಹೇಳನಕಾರಿ ಶಬ್ದದ ರೂಪದಲ್ಲಿ ಪರಿಗಣಿಸಲಾಗಿದೆ ಎಂದಿತ್ತು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ- Viral Video : ಹೋಳಿ ಬಣ್ಣ ಹಿಡಿದು ಶೃದ್ಧ ಕಪೂರ್ ಹಿಂದೆ ಬಂದ ಮಕ್ಕಳು..! ಮುಂದೆ ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.