ನವದೆಹಲಿ: ಹಿರಿಯ ನಾಗರಿಕರಿಗಾಗಿ SBI, HDFC, ICICI , ಬ್ಯಾಂಕ್ ಆಫ್ ಬರೋಡಾ Special Fixed Deposit Scheme ಅನ್ನು ಜಾರಿಗೆ ತಂದಿದೆ. ಕರೋನಾ ಸಾಂಕ್ರಾಮಿಕದ (Coronavirus) ದೃಷ್ಟಿಯಿಂದ, ಈ ಯೋಜನೆಯನ್ನು ಈಗಾಗಲೇ ಎರಡು ಬಾರಿ ಮೊದಲೇ ವಿಸ್ತರಿಸಲಾಗಿತ್ತು. ಈಗ ಬ್ಯಾಂಕುಗಳು ಮತ್ತೆ ಈ ಯೋಜನೆಯ ಗಡುವನ್ನು ವಿಸ್ತರಿಸಿದೆ.
ಹಿರಿಯ ನಾಗರಿಕರಿಗಾಗಿ Special Fixed Deposit Scheme :
ಹಿರಿಯ ನಾಗರಿಕರಿಗಾಗಿ Special Fixed Deposit Scheme ಅನ್ನು ಜೂನ್ ವರೆಗೆ ಪಡೆಯಬಹುದು. ಕಳೆದ ವರ್ಷ ಮೇ 2020 ರಲ್ಲಿ ಬ್ಯಾಂಕುಗಳು ಈ ವಿಶೇಷ ಎಫ್‌ಡಿ ಯೋಜನೆಯನ್ನು ಪರಿಚಯಿಸಿತ್ತು. ಈ FD ಯೋಜನೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಬಡ್ಡಿ (Interset) ನೀಡಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ (Bank of Baroda)ಹಿರಿಯ ನಾಗರಿಕರಿಗಾಗಿ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಈ ಸ್ಪೆಶಲ್ ಎಫ್ ಡಿ ಸ್ಕೀಂ ಅನ್ನು ಜಾರಿಗೆ ತಂದಿತ್ತು.
ಇದನ್ನೂ ಓದಿ : Gold Hallmarking: ಜೂನ್ 1 ರಿಂದ ಚಿನ್ನದ ಆಭರಣಗಳ ಮೇಲೆ 'ಹಾಲ್ ಮಾರ್ಕಿಂಗ್' ಕಡ್ಡಾಯ!
ಎಸ್‌ಬಿಐನ ವಿ-ಕೇರ್ ವಿಶೇಷ ಎಫ್‌ಡಿ ಯೋಜನೆ
ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ SBI WECARE ಸ್ಪೆಶಲ್ ಎಫ್ ಡಿ ಯೋಜನೆಯ ಕಳೆದ ಮೇ ತಿಂಗಳಲ್ಲಿ ಘೋಷಿಸಿತು. ಇದರಲ್ಲಿ ಹಿರಿಯ ನಾಗರಿಕರು 5 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಎಫ್‌ಡಿ ಇಟ್ಟರೆ, 0.80% ಹೆಚ್ಚಿನ ಬಡ್ಡಿದರವನ್ನು ಪಡೆಯುತ್ತಾರೆ. ಪ್ರಸ್ತುತ, ಸಾಮಾನ್ಯ ಜನರಿಗೆ 5 ವರ್ಷದ ಎಫ್‌ಡಿ ಮೇಲೆ ಶೇ 5.40 ದರದಲ್ಲಿ ಬಡ್ಡಿ ನೀಡಲಾಗುತ್ತದೆ. ಅದೇ ವಿಶೇಷ ಯೋಜನೆಯಡಿಯಲ್ಲಿ, ಹಿರಿಯ ನಾಗರಿಕರು 5 ವರ್ಷಗಳಿಗಿಂತ ಹೆಚ್ಚು ಅವಧಿಗೆ ಎಫ್‌ಡಿ ಮೇಲೆ 6.20% ದರದಲ್ಲಿ ಬಡ್ಡಿ ಪಡೆಯುತ್ತಾರೆ.
HDFC ಬ್ಯಾಂಕಿನ Senior Citizen Care ಸ್ಕೀಮ್ :
ಎಚ್‌ಡಿಎಫ್‌ಸಿ ಬ್ಯಾಂಕ್ HDFC Senior Citizen Care ಸ್ಕೀಮನ್ನು ತಂದಿದೆ. ಈ ಎಫ್‌ಡಿಯಲ್ಲಿ ಬ್ಯಾಂಕ್ 0.25% ಹೆಚ್ಚುವರಿ ಪ್ರೀಮಿಯಂ ಆಫರ್ ಮಾಡುತ್ತಿದೆ. ಇದರಲ್ಲಿ ಹಿರಿಯ ನಾಗರಿಕರಿಗೆ ಒಟ್ಟು 0.75 ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತದೆ. ಈ ಯೋಜನೆ 5 ವರ್ಷದಿಂದ 10 ವರ್ಷಗಳವರೆಗೆ ಇರುತ್ತದೆ. HDFC ಸೀನಿಯರ್ ಸಿಟಿಜನ ಕೇರ್ FD ಮೇಲೆ ಸಿಗುವ ಬಡ್ಡಿದರ 6.25% ಆಗಿರುತ್ತದೆ.
ಇದನ್ನೂ ಓದಿ : PM Jandhan Account: ಜನ ಧನ್ ಖಾತೆದಾರರೇ ಗಮನಿಸಿ, ಈ ಬಗ್ಗೆ ನಿಮಗೂ ತಿಳಿದಿದೆಯೇ
ಬ್ಯಾಂಕ್ ಆಫ್ ಬರೋಡಾದ ಸ್ಪೆಶಲ್ ಎಫ್‌ಡಿ ಸ್ಕೀಂ:
ಬ್ಯಾಂಕ್ ಆಫ್ ಬರೋಡಾ (BoB) ಹಿರಿಯ ನಾಗರಿಕರಿಗೆ 1% ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡಾದ ಈ ನಿರ್ದಿಷ್ಟ ಎಫ್‌ಡಿ ಯಲ್ಲಿ ಹಿರಿಯ ನಾಗರಿಕರಿಗೆ ಶೇಕಡಾ 6.25 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಇದರ ಅವಧಿ 5ರಿಂದ 10 ವರ್ಷಗಳವರೆಗೆ ಇರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.