ನವದೆಹಲಿ : ನಿಮಗೆ ಪ್ರತಿ ತಿಂಗಳೂ ಪಿಂಚಣಿ (Pension) ಸಿಗುವ ನಿಟ್ಟಿನಲ್ಲಿ ಹಲವು ಆಯ್ಕೆಗಳು ನಿಮ್ಮಲ್ಲಿವೆ. ಇಲ್ಲೊಂದು ವಿಶೇಷ ಪಿಂಚಣಿ ಯೋಜನೆ ಇದೆ. ಇದರಲ್ಲಿ ನಿಮಗೆ ಪಿಂಚಣಿಯೂ ಸಿಗುತ್ತೆ ಜೊತೆಗೆ ಬಡ್ಡಿ ಸಹಿತ ಹೂಡಿಕೆ ಮೊತ್ತ ಕೂಡಾ ಸಿಗುತ್ತದೆ.
Vaya Vandana Yojanaಯಲ್ಲಿ ಹೂಡಿಕೆ ಮಾಡಿ:
ಈ ಅಭೂತಪೂರ್ವ ಸ್ಕೀಮಿನ ಹೆಸರು ಪ್ರಧಾನಮಮಂತ್ರಿ ವಯ ವಂದನ ಯೋಜನೆ (Pradhan Mantri Vaya Vandana Yojana). ಇದು ಕೇಂದ್ರ ಸರ್ಕಾರದ ಯೋಜನೆ. ಇದರಲ್ಲಿ ಎಲ್ಐಸಿ (LIC) ಮೂಲಕ ಹೂಡಿಕೆ ಮಾಡಬಹುದಾಗಿದೆ. ಇದರಲ್ಲಿ 31 ಮಾರ್ಚ್, 2023ರ ತನಕ ಹೂಡಿಕೆ ಮಾಡಬಹುದಾಗಿದೆ. ಇದರಲ್ಲಿ ನಿಮಗೆ ವರ್ಷಕ್ಕೆ ಶೇ. 7.66 ರಷ್ಟು ರಿಟರ್ನ್ ಸಿಗಲಿದೆ. ಹತ್ತು ವರ್ಷದ ವರೆಗೆ ಇದರಲ್ಲಿ ಹೂಡಿಕೆ ಮಾಡಬಹುದಾಗಿದೆ.
ಇದನ್ನೂ ಓದಿ: Punjab National Bank Free Training - ಮಹಿಳಾ ವರ್ಗಕ್ಕೆ PNB ವತಿಯಿಂದ ಉಚಿತ ತರಬೇತಿ, ಇಲ್ಲಿದೆ ಡೀಟೇಲ್ಸ್
ಯಾರು ಹೂಡಿಕೆ ಮಾಡಬಹುದು..?
60 ವರ್ಷ ಮತ್ತು ಮೇಲ್ಪಟ್ಟವರು ಮಾತ್ರ ಈ ಸ್ಕೀಮಿನಲ್ಲಿ (Scheme) ಹೂಡಿಕೆ ಮಾಡಬಹುದಾಗಿದೆ. ಅಂದರೆ ಇದು ಹಿರಿಯ ನಾಗರಿಕರಿಗೆ ಇರುವ ಸ್ಕೀಮ್. ಗರಿಷ್ಠ ವಯೋಮಿತಿಗೆ ಯಾವುದೇ ಮಿತಿ ಇಲ್ಲ. ಒಂದೇ ಸಲ ಈ ಸ್ಕೀಮಿನಲ್ಲಿ ಹೂಡಿಕೆ ಮಾಡಬಹುದು.
ಪಿಂಚಣಿಯ ಆಯ್ಕೆ ಕೂಡಾ ಇದೆ:
ಇದರಲ್ಲಿ ನೀವು ಬೇಕಾದರೆ ಮಾಸಿಕ ಪಿಂಚಣಿಯನ್ನು (Pension)ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ಒಂದು ವರ್ಷದ ಲೆಕ್ಕದಲ್ಲಿ ಪಿಂಚಣಿ ಆಯ್ಕೆ ಮಾಡಬಹುದಾಗಿದೆ. ಇದರಿಂದ ನಿಮಗೆ ವರ್ಷಕ್ಕೆ ಶೇ. 7.66 ರಷ್ಟು ರಿಟರ್ನ್ ಸಿಗುತ್ತದೆ. ಇದರಲ್ಲಿ ಗರಿಷ್ಠ 15 ಲಕ್ಷ ಮೊತ್ತ ಹೂಡಿಕೆ ಮಾಡಬಹುದಾಗಿದೆ.
ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ :
ಖರೀದಿ : ಮಾಸಿಕ ತ್ರೈಮಾಸಿಕ ಅರ್ಧ ವಾರ್ಷಿಕ ವಾರ್ಷಿಕ
ಕನಿಷ್ಠ : 1,62,162 1,61,074 1,59,574 1,56,658
ಗರಿಷ್ಠ : 15,00,000 14,89,933 14,76,064 14,49,086
ಇದನ್ನೂ ಓದಿ: ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ ..!10,000 ರೂಗಳಷ್ಟು ಅಗ್ಗವಾಯಿತು ಚಿನ್ನ..!
ಈ ಪಿಂಚಣಿ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿ ಪಿಂಚಣಿ ಪ್ರತಿ ತಿಂಗಳು ಪಡೆಯಬಹುದಾಗಿದೆ. ತಿಂಗಳಿಗೆ ಸಿಗುವ ಗರಿಷ್ಠ ಪಿಂಚಣಿ 9250 ರೂಪಾಯಿ. ತಿಂಗಳಿಗೆ 1000 ಪಿಂಚಣಿ ಪಡೆಯಬೇಕಾದರೆ, ನೀವು 1.62 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ವರ್ಷಕ್ಕೆ 12,000 ರೂಪಾಯಿ ಪಿಂಚಣಿ ಪಡೆಯಲು 1.56 ಲಕ್ಷ ರೂಪಾಯಿ ಹೂಡಿಕೆ (Investment) ಮಾಡಬೇಕು. ತಿಂಗಳಿಗೆ 9,250 ರೂಪಾಯಿ ಪಿಂಚಣಿ ಪಡೆಯಬೇಕಾದರೆ, 15 ಲಕ್ಷ ಹೂಡಿಕೆ ಮಾಡಬೇಕು.
41500 ರೂ.ಗಳ ಪಿಂಚಣಿ ಪಡೆಯುವುದು ಹೇಗೆ ?
ನೀವು ಈ ಯೋಜನೆಯಲ್ಲಿ ಒಟ್ಟು 5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ನಂತರ ಮಾಸಿಕ ಆಧಾರದ ಮೇಲೆ 3333 ರೂ. ಪಿಂಚಣಿ ಸಿಗುತ್ತದೆ. ಅಂದರೆ ವಾರ್ಷಿಕ ಆಧಾರದ ಮೇಲೆ 41500 ರೂ. ಒಂದು ವೇಳೆ, ನೀವು 3 ಲಕ್ಷ ರೂ. ಠೇವಣಿ ಇಟ್ಟರೆ, ಮಾಸಿಕ ಆಧಾರದ ಮೇಲೆ 2000 ರೂ. ಪಿಂಚಣಿ ಬರುತ್ತದೆ. ಅಂದರೆ ವಾರ್ಷಿಕವಾಗಿ 24900 ರೂ. ಸಿಕ್ಕಿದಂತಾಗುತ್ತದೆ.
ಹಣ ಮರಳಿ ಪಡೆಯುವುದು ಹೇಗೆ ?
ಪಾಲಿಸಿದಾರನು (Policy Holder) ಹೂಡಿಕೆಯ ಅವಧಿ ಮುಗಿಯುವವರೆಗೆ ಜೀವಿತವಾಗಿದ್ದರೆ, ಪಿಂಚಣಿ ಪಡೆಯುವುದನ್ನು ಮುಂದುವರಿಸುವುದರೊಂದಿಗೆ ಪರ್ಚೇಸ್ ಪ್ರೈಸ್ ಅನ್ನು ಪಡೆಯುತ್ತಾರೆ. ಆದರೆ ಒಂದು ವೇಳೆ ಪಾಲಿಸಿದಾರನ ಸಾವು ಸಂಭವಿಸಿದರೆ, ಪರ್ಚೇಸ್ ಪ್ರೈಸ್ ಅನ್ನು ನಾಮಿನಿಗೆ (nominee) ಹಿಂದಿರುಗಿಸಲಾಗುತ್ತದೆ.
ಇದನ್ನೂ ಓದಿ: Covid-19 Vaccine ಹಾಕಿಸಿ, ಎಫ್‌ಡಿ ಮೇಲೆ ಹೆಚ್ಚಿನ ಬಡ್ಡಿ ಪಡೆಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.