ವಾಟ್ಸಾಪ್ Status ವೀಡಿಯೊಗಳು ಡೌನ್ಲೋಡ್ ಆಗಬೇಕಾದರೆ ಈ ಟ್ರಿಕ್ ಅನುಸರಿಸಿ. ಸುಲಭವಾಗಿ ಸ್ಟೆಟಸ್ ವಿಡಿಯೋ ಡೌನ್ ಲೋಡ್ ಆಗುತ್ತದೆ.
ನವದೆಹಲಿ : ವಾಟ್ಸಾಪ್ ನಲ್ಲಿ (WhatsApp) ಸ್ಟೇಟಸ್ (status) ಹಾಕುವ ಕ್ರೇಜ್ ವಾಟ್ಸಾಪ್ ಬಳಸುವ ಎಲ್ಲರಿಗೂ ಇದೆ. ಕೆಲವರ ಸ್ಟೇಟಸ್ ಗಳಂತೂ ನಿತ್ಯ ಅಪ್ ಡೆಟ್ ಆಗುತ್ತಲೇ ಇರುತ್ತದೆ. ವಾಟ್ಸಾಪ್ ಸ್ಟೇಟಸ್ ನಲ್ಲಿ (WhatsApp Status) ಫೋಟೋ, ವಿಡಿಯೋ ಎರಡನ್ನೂ ಅಪ್ ಲೋಡ್ ಮಾಡಬಹುದು. ಇದರಲ್ಲಿ ಪೋಟೋವನ್ನು ಸುಲಭವಾಗಿ ಸ್ಕ್ರೀನ್ ಶಾಟ್ ಮೂಲಕ ಪಡೆದುಕೊಳ್ಳಬೇಕು ಆದರೆ ವಿಡಿಯೋ ಬೇಕಿದ್ದಲ್ಲಿ ಏನು ಮಾಡಬೇಕು? ಇದಕ್ಕೂ ಸುಲಭವಾದ ಟ್ರಿಕ್ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವಾಟ್ಸಾಪ್ ಅಂದರೆ ಅದೊಂದು ಬರೀ ಮೆಸೇಜಿಂಗ್ ಅಪ್ಲಿಕೇಶನ್ ಅಲ್ಲ. ಈಗ ಜನರು ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಅಪ್ಲಿಕೇಶನ್ನಲ್ಲಿ ಅಪ್ಲೋಡ್ ಮಾಡುತ್ತಾರೆ.
ಆರಂಭದಲ್ಲಿ ವಾಟ್ಸಾಪ್ನಲ್ಲಿ ಕೇವಲ ಚಾಟ್ ಮಾತ್ರ ಮಾಡಬಹುದಾಗಿತ್ತು. ಆದರೆ ಎಂಗೇಜ್ ಮೆಂಟ್ ರೇಟನ್ನು ಹೆಚ್ಚಿಸಲು ಕಂಪನಿ ಹೊಸ ವಾಟ್ಸಾಪ್ ಸ್ಟೇಟಸ್ ಫೀಚರ್ ಅನ್ನು ಪರಿಚಯಿಸಿದೆ.
ವಾಟ್ಸಾಪ್ ಸ್ಟೇಟಸ್ ನಲ್ಲಿ ಫೋಟೋ ಹಾಕಿದ್ದರೆ ಅದನ್ನು ತೆಗೆದುಕೊಳ್ಳುವುದು ಬಹಳ ಸುಲಭ. ಸ್ಕ್ರೀನ್ಶಾಟ್ ತೆಗೆದುಕೊಳ್ಳುವ ಮೂಲಕ ಫೋಟೋ ಪಡೆದುಕೊಳ್ಳಬಹುದು.
ವಾಟ್ಸಾಪ್ ಸ್ಟೇಟಸ್ ವೀಡಿಯೊಗಳನ್ನು ಡೌನ್ ಲೋಡ್ ಮಾಡುವುದು ಕೂಡಾ ಈಗ ಸುಲಭ. ಇದಕ್ಕಾಗಿ, ಮೊದಲು ಮೊಬೈಲ್ನ ಫೈಲ್ ಮ್ಯಾನೇಜರ್ಗೆ ಹೋಗಿ Show Hidden System File ಅನ್ನು on ಮಾಡಿಕೊಳ್ಳಿ.
ಈಗ ನೀವು ಫೈಲ್ ಮ್ಯಾನೇಜರ್ ಪೇಜ್ ನಲ್ಲಿಯೇ WhtsApp ಫೋಲ್ಡರಿನ ಮೀಡಿಯಾ ಫೋಲ್ಡರ್ ಅನ್ನು ತೆರೆಯಿರಿ. ಈಗ ನೀವು Download ಮಾಡಲು ಬಯಸುವ ವಾಟ್ಸಾಪ್ ವೀಡಿಯೊವನ್ನು ಆಯ್ಕೆ ಮಾಡಿ ಮತ್ತು ಅದನ್ನು ಕಾಪಿ ಮಾಡಿ. ಈಗ ಅದನ್ನು ನಿಮ್ಮ ಫೋನನಿನ ಇಂಟರ್ ನೆಲ್ ಸ್ಟೋರೇಜ್ ನಲ್ಲಿ ಸೇವ್ ಮಾಡಿ.