Food Storage Tips: ಬೇಸಿಗೆಯಲ್ಲಿ ಆಹಾರ ಪದಾರ್ಥಗಳು ಬೇಗನೆ ಹಾಳಾಗುತ್ತವೆ. ಅನೇಕ ಬಾರಿ ಕೆಲವು ಆಹಾರಗಳನ್ನು ಫ್ರಿಜ್ನಲ್ಲಿ ಇಟ್ಟ ನಂತರವೂ ಅವು ಬೇಗ ಕೆಡುವುದನ್ನು ನೀವು ಗಮನಿಸಿರಬಹುದು. ಹಾಗಾಗಿ ಬೇಸಿಗೆಯಲ್ಲಿ ನಿಮ್ಮ ಡಯಟ್ ಜೊತೆಗೆ ಫ್ರಿಜ್ನಲ್ಲಿ ಸಂಗ್ರಹಿಸುವ ವಸ್ತುಗಳ ಬಗ್ಗೆಯೂ ವಿಶೇಷ ಗಮನ ಹರಿಸಬೇಕಾಗುತ್ತದೆ.
ಚಳಿಗಾಲದಲ್ಲಿ ಶೀತ ಆಗದಂತೆ ನಿಗಾ ವಹಿಸಲು ಯಾವ ಆಹಾರ ಪದಾರ್ಥಗಳನ್ನು ಸೇವಿಸಿದರೆ ಉತ್ತಮ ಎನ್ನುವ ಬಗ್ಗೆ ಕಾಳಜಿ ವಹಿಸಿದರೆ, ಬೇಸಿಗೆಯಲ್ಲಿ ಯಾವ ಆಹಾರ ಪದಾರ್ಥ ಬೇಗ ಕೆಡುತ್ತದೆ, ಯಾವ ವಸ್ತುವನ್ನು ಯಾವ ರೀತಿ ಸಂಗ್ರಹಿಸಿದರೆ ಅದು ದೀರ್ಘ ಸಮಯದವರೆಗೆ ಕೆಡದೆ ಇರುತ್ತದೆ ಎನ್ನುವುದರ ಚಿಂತೆ ಹಲವರನ್ನು ಕಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ (Summer) ಎಲ್ಲದರ ಬಗ್ಗೆ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಕಾರಣ ಕೆಲವು ವಸ್ತುಗಳನ್ನು ಫ್ರಿಜ್ನಲ್ಲಿ ಸಹ ದೀರ್ಘಕಾಲದವರೆಗೆ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬೇಸಿಗೆಯಲ್ಲಿ ಯಾವ ವಸ್ತುಗಳು ಫ್ರಿಜ್ನಲ್ಲಿಯೂ ಬೇಗ ಹಾಳಾಗುತ್ತವೆ ಎಂಬುದನ್ನು ಮೊದಲು ತಿಳಿಯಿರಿ.
ಇದನ್ನೂ ಓದಿ - Morning Routine: ಬೆಳಗ್ಗೆ ಎದ್ದ ಕೂಡಲೇ ಮಾಡುವ ಸಾಮಾನ್ಯ ತಪ್ಪುಗಳನ್ನು ಇಂದೇ ಬಿಟ್ಟು ಬಿಡಿ
ಬ್ರೆಡ್ ಬೇಗನೆ ಹಾಳಾಗುತ್ತದೆ:
ಕೆಲವರು ಒಟ್ಟಿಗೆ ಹಲವಾರು ಪ್ಯಾಕೆಟ್ ಬ್ರೆಡ್ಗಳನ್ನು ಖರೀದಿಸುತ್ತಾರೆ. ಬ್ರೆಡ್ ಅನ್ನು ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿದರೂ ಅದು ಬೇಗನೆ ಹಾಳಾಗುತ್ತದೆ (Bread Storage Tips) ಎಂಬುದು ಅವರಿಗೆ ತಿಳಿದಿರುವುದಿಲ್ಲ. ಬ್ರೆಡ್ ಅನ್ನು 2-3 ದಿನಗಳವರೆಗೆ ಮಾತ್ರ ಸಂಗ್ರಹಿಸಬೇಕು. ಪ್ಯಾಕೆಟ್ ತೆರೆದ ನಂತರ, ಅದನ್ನು ಮತ್ತೆ ಗಾಳಿಯಾಡದಂತೆ ಪ್ಯಾಕ್ ಮಾಡುವುದು ಸುಲಭವಲ್ಲ. ಇದರಿಂದ ಬ್ರೆಡ್ ಬೇಗನೆ ಹದಗೆಡುತ್ತದೆ.
ಮೊಟ್ಟೆಯ ಪೋಷಕಾಂಶಗಳು ನಾಶವಾಗುತ್ತವೆ :
ಅನೇಕ ಜನರು ಒಂದು ಡಜನ್ ಅಥವಾ ಅದಕ್ಕಿಂತ ಹೆಚ್ಚಿನ ಮೊಟ್ಟೆ (Egg)ಯನ್ನು ಒಟ್ಟಿಗೆ ಖರೀದಿಸಿ ಅದನ್ನು ಫ್ರಿಜ್ನಲ್ಲಿ ಸಂಗ್ರಹಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಕಚ್ಚಾ ಮೊಟ್ಟೆಗಳನ್ನು ರೆಫ್ರಿಜರೇಟರ್ನಲ್ಲಿ ಹಲವಾರು ದಿನಗಳವರೆಗೆ ಸಂಗ್ರಹಿಸುವುದು ಆರೋಗ್ಯಕ್ಕೆ ಹಾನಿಕರ ಎಂದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ, ಕಚ್ಚಾ ಮೊಟ್ಟೆಗಳನ್ನು ರೆಫ್ರಿಜರೇಟರ್ನಲ್ಲಿ ಇಡುವುದರಿಂದ ಅದರ ಪೋಷಕಾಂಶಗಳು ನಾಶವಾಗುತ್ತವೆ. ಇದು ಮಾತ್ರವಲ್ಲ, ಮೊಟ್ಟೆಗಳಿಂದ ಮಾಡಿದ ಯಾವುದೇ ಖಾದ್ಯವನ್ನು ಕೂಡ ರೆಫ್ರಿಜರೇಟರ್ನಲ್ಲಿ ಹೆಚ್ಚು ಕಾಲ ಸಂಗ್ರಹಿಸಿ ಸೇವಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ - Watermelon: ಆಲ್ಕೋಹಾಲ್ ಸೇವಿಸುವವರೇ ಕಲ್ಲಂಗಡಿ ತಿನ್ನುವ ಮೊದಲು ಇರಲಿ ಎಚ್ಚರ
ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿದ ಪನ್ನೀರ್ ಕೂಡ ಬೇಗ ಕೆಡುತ್ತದೆ:
ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾಲು, ಮೊಸರು ಕೆಡದಂತೆ ಅದನ್ನು ಫ್ರಿಜ್ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ ಹಾಲಿನ ಉತ್ಪನ್ನವಾದ ಪನ್ನೀರ್ ಅನ್ನು ಕೂಡ ರೆಫ್ರಿಜರೇಟರ್ನಲ್ಲಿ ದೀರ್ಘಕಾಲ ಸಂಗ್ರಹಿಸಬಾರದು. ನೀವು ಪನೀರ್ ಅನ್ನು ರೆಫ್ರಿಜರೇಟರ್ನಲ್ಲಿ ಇಡಲು ಬಯಸಿದರೆ ಗಾಳಿಯಾಡದಂತೆ ಬಿಗಿಯಾದ ಮುಚ್ಚಳವಿರುವ ಡಬ್ಬದಲ್ಲಿ ಅದನ್ನು ಹಾಕಿ ಇರಿಸಿ. ಕಾರಣ ಮುಚ್ಚದೆ ಅಥವಾ ಸರಿಯಾಗಿ ಮುಚ್ಚದೇ ಪನ್ನೀರ್ ಅನ್ನು ರೆಫ್ರಿಜರೇಟರ್ನಲ್ಲಿ ಇಡುವುದರಿಂದ ಅದು ಕೆಡುತ್ತದೆ ಮತ್ತು ನೀವು ಅದನ್ನು ಸೇವಿಸಿದರೆ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.