ನವದೆಹಲಿ: Systematic Way Of Profitable Investment - ಮಾರುಕಟ್ಟೆಯಲ್ಲಿ ಕಂಡು ಬರುವ ಏರಿಳಿತಗಳು ಹೂಡಿಕೆದಾರರನ್ನು ಸಾಮಾನ್ಯವಾಗಿ ಚಿಂತೆಗೀಡು ಮಾಡುತ್ತವೆ. ಮಾರುಕಟ್ಟೆಯಲ್ಲಿನ ಏರಿಕೆ ಹೂಡಿಕೆದಾರರಲ್ಲಿ ಸಂತಸಕ್ಕೆ ಕಾರಣವಾದರೆ, ಮಾರುಕಟ್ಟೆಯ ಇಳಿಮುಖ ಹೂಡಿಕೆದಾರರಿಗೆ ಸ್ವಲ್ಪ ಚಿಂತೆಗೆ ಕಾರಣವಾಗುತ್ತವೆ. ಆದರೆ ಹೂಡಿಕೆದಾರರನ್ನು ಈ ಚಿಂತೆಯಿಂದ ಕಾಪಾಡಲು ಹಾಗೂ ಮಾರುಕಟ್ಟೆಯ ಏರಿಳಿತಗಳನ್ನು ಲಾಭವಾಗಿ ಪರಿವರ್ತಿಸಲು ತುಂಬಾ ಸರಳ ಉಪಾಯ ಅಸ್ತಿತ್ವದಲ್ಲಿದೆ. ಹಲವಾರು ವರ್ಷಗಳಿಂದ ಪರಿಶೀಲಿಸಲಾಗಿರುವ ಈ ಉಪಾಯ ಎಂದರೆ, ಹೂಡಿಕೆ ಮತ್ತು ಹಿಂಪಡೆತದ ಸಿಸ್ಟಮ್ಯಾಟಿಕ್ ಪ್ಲಾನ್. ಹೂಡಿಕೆಯ ಈ ಸಿಸ್ಟಮ್ಯಾಟಿಕ್ ಅಂದರ ಸೂವ್ಯವಸ್ಥಿತ ತಂತ್ರಗಾರಿಕೆಯನ್ನು ಪ್ರಮುಖವಾಗಿ ಮೂರು ಭಾಗಗಳಲ್ಲಿ ವಿಂಗಡಿಸಬಹುದು.
1. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್, (SIP)
2. ಸಿಸ್ಟಮ್ಯಾಟಿಕ್ ಟ್ರಾನ್ಸ್ಫರ್ ಪ್ಲಾನ್ (STP) ಹಾಗೂ
3. ಸಿಸ್ಟಮ್ಯಾಟಿಕ್ ವಿಥ್ ಡ್ರಾವಲ್ ಪ್ಲಾನ್(SWP)
1. Systematic Investment Plan(SIP) - ಹೆಸರೇ ಸೂಚಿಸುವಂತೆ, ಇದು ಮಾರುಕಟ್ಟೆಯಲ್ಲಿ ಹಣ ಹೂಡಿಕೆಗಾಗಿ ಇರುವ ಒಂದು ಸುವ್ಯವಸ್ಥಿತ ಯೋಜನೆ ಅಂದರೆ ಅದು ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ನಿಮ್ಮ ಎಲ್ಲಾ ಹೂಡಿಕೆಯನ್ನು ಮಾರುಕಟ್ಟೆಯಲ್ಲಿ ಏಕಕಾಲಕ್ಕೆ ಹೂಡಿಕೆ ಮಾಡುವ ಬದಲು, ಅದನ್ನು ವಿವಿಧ ಭಾಗಗಳನ್ನಾಗಿ ವಿಂಗಡಿಸಿ ವಿವಿಧ ಸಮಯದಲ್ಲಿ ಹೂಡಿಕೆ ಮಾಡುವುದು ಎಂದರ್ಥ. ನೀವು ಬೇಕಾದರೆ ನಿಮ್ಮ ಡಿಮ್ಯಾಟ್ ಖಾತೆಯ ಮೂಲಕ ಕೂಡ ನಿಮ್ಮ ನೆಚ್ಚಿನ ಷೇರುಗಳಲ್ಲಿ ಹಣ ಹೂಡಿಕೆ ಮಾಡಲು ಕೂಡ ಈ SIP ತಂತ್ರಗಾರಿಕೆಯನ್ನು ಅನುಸರಿಸಬಹುದು. ಆದರೆ ಸಾಮಾನ್ಯವಾಗಿ SIP ಉಲ್ಲೇಖ ಮ್ಯೂಚವಲ್ ಫಂಡ್ (Mutual Funds) ಗಳ ಸಂದರ್ಭಗಳಲ್ಲಿ ಮಾತ್ರ ಮಾಡಲಾಗುತ್ತದೆ. ಈ ತಂತ್ರಗಾರಿಕೆಯ ಮೂಲಕ ಪ್ರತಿತಿಂಗಳು ಅಥವಾ ಪ್ರತಿವಾರ ಅಥವಾ ಪ್ರತಿ ದಿನ ಒಂದು ನಿಶ್ಚಿತ ಪ್ರಮಾಣದ ಹೂಡಿಕೆಯನ್ನು ನೀವು ನಿಮ್ಮ ನೆಚ್ಚಿನ ಮ್ಯೂಚವಲ್ ಫಂಡ್ ನಲ್ಲಿ ಮಾಡಬಹುದು. SIP ಹೂಡಿಕೆಯ ಇನ್ನೊಂದು ಲಾಭ ಎಂದರೆ, ಇದರಲ್ಲಿ ನೀವು ಹೂಡಿಕೆ ಮಾಡಲು ದೊಡ್ಡ ಪ್ರಮಾಣದ ಹಣದ ಅವಶ್ಯಕತೆ ಇರುವುದಿಲ್ಲ. ನೀವು ನಿಮ್ಮ ಆದಾಯಕ್ಕೆ ಅನುಗುಣವಾಗಿ ಪ್ರತಿ ತಿಂಗಳು ಸ್ವಲ್ಪ-ಸ್ವಲ್ಪ ಹಣವನ್ನು ಇದರಲ್ಲಿ ಹೂಡಿಕೆ ಮಾಡಬಹುದು ಮತ್ತು ಭವಿಷ್ಯದಲ್ಲಿ ಒಂದು ನಿಶ್ಚಿತ ಪ್ರಮಾಣದ ನಿಧಿ ಜಮಾವಣೆಗೊಂಡಾಗ ಅದರಲ್ಲಿ ಏಕಕಾಲಕ್ಕೆ ದೊಡ್ಡ ಪ್ರಮಾಣದ ಮೊತ್ತವನ್ನು ಸೇರಿಸಬಹುದು. ಈ ತಂತ್ರಗಾರಿಕೆಯ ಎಲ್ಲಕ್ಕಿಂತ ಹೆಚ್ಚು ಲಾಭ ಇಕ್ವಿಟಿ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಸಿಗುತ್ತದೆ. ಇದನ್ನು ನಾವು ಮುಂದೆ ತಿಳಿದುಕೊಳ್ಳೋಣ
SIP ಮೂಲಕ ಹೂಡಿಕೆ ಲಾಭದಾಯಕವಾಗಿದೆಯೇ?
SIP ಹೂಡಿಕೆಯ ಅತಿ ದೊಡ್ಡ ಲಾಭ ಎಂದರೆ, ಇದರಿಂದ ನೀವು ಮಾರುಕಟ್ಟೆಯಲ್ಲಿ ಸರಿಯಾದ ಸಮಯಕ್ಕೆ ಹಣ ಹೂಡಿಕೆ ಮಾಡಬೇಕು ಎಂಬ ಪೆಚಿನಿಂದ ಪಾರಾಗುತ್ತಿರಿ. ಅಂದರೆ, ನಾವು ತಪ್ಪಾದ ಸಮಯಕ್ಕೆ ಹಣವನ್ನು ಹೂಡಿಕೆ ಮಾಡುತ್ತಿಲ್ಲವಲ್ಲ? ಎಂಬ ಪ್ರಶ್ನೆ ನಿಮಗೆ ಕಾಡುವುದಿಲ್ಲ. ಏಕೆಂದರೆ ನೀವು ಇದರಲ್ಲಿ ಒಂದೇ ಸಮಯಕ್ಕೆ ಅತಿಯಾಗಿ ಹೂಡಿಕೆ ಮಾಡದೆ, ಹಂತ ಹಂತವಾಗಿ ಹೂಡಿಕೆ ಮಾಡುತ್ತಿರಿ ಮತ್ತು ವಿವಿಧ ಸಮಯಗಳಲ್ಲಿ ಹೂಡಿಕೆ ಮಾಡುತ್ತಿರಿ. ಹೀಗಾಗಿ ಈ ಮಾರುಕಟ್ಟೆಯ ಏರಿಳಿತಗಳು ನಿಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಋಣಾತ್ಮಕ ಪ್ರಭಾವ ಬೀರುವುದಿಲ್ಲ.
ಪ್ರತಿ ತಿಂಗಳಿಗೆ ಅಥವಾ ಪ್ರತಿ ವಾರಕ್ಕೆ ಒಂದು ವೇಳೆ ನೀವು ಹಣವನ್ನು ದೀರ್ಘಾವಧಿಗೆ ಹೂಡಿಕೆ ಮಾಡಿದರೆ, ನಿಮ್ಮ ಹೂಡಿಕೆ ಕಾಸ್ಟ್ ಆಫ್ ಎವರೆಜಿಂಗ್ ಆಗಿ ಮಾರ್ಪಡುತ್ತದೆ. ಹೂಡಿಕೆಯ ಸಮಯದಲ್ಲಿ ಒಂದು ವೇಳೆ ಮಾರುಕಟ್ಟೆ ಕುಸಿದಿದ್ದರೆ, ನೀವು ಕಡಿಮೆ ಹಣದಲ್ಲಿ ಹೆಚ್ಚಿನ ಸಂಖ್ಯೆಯ ಯುನಿಟ್ ಗಳನ್ನು ಅಥವಾ ಷೇರುಗಳನ್ನು ಖರೀದಿಸಬಹುದು. ಮಾರುಕಟ್ಟೆ ಒಂದು ವೇಳೆ ಗಗನ ಮುಖಿಯಾಗಿದ್ದರೆ, ಕಡಿಮೆ ಯುನಿಟ್ ಅಥವಾ ಷೇರುಗಳನ್ನು ನೀವು ಖರೀಸಬಹುದು. ಇದರಿಂದ ನಿಮ್ಮ ರಿಸ್ಕ್ ಕೂಡ ಕಡಿಮೆಯೇ ಇರಲಿದೆ.
ಈ ಕುರಿತಾದ ಅಂಕಿ ಅಂಶಗಳ ಪ್ರಕಾರ SIP ಮೂಲಕ ಸುವ್ಯವಸ್ಥಿತವಾಗಿ ಮತ್ತು ದೀರ್ಘ ಕಾಲ ಹಣ ಹೂಡಿಕೆ ಮಾಡುವುದರಿಂದ ರಿಸ್ಕ್ ಕೂಡ ಕಡಿಮೆಯಾಗಿ ಉತ್ತಮ ಆದಾಯ ಬರುವ ಎಲ್ಲಾ ರೀತಿಯ ಸಾಧ್ಯತೆ ಇರುತ್ತದೆ ಎನ್ನಲಾಗುತ್ತದೆ. ಈ ತಂತ್ರಗಾರಿಕೆಯ ಅತಿ ಹೆಚ್ಚು ಲಾಭ ಇಕ್ವಿಟಿ ಫಂಡ್ ಗಳಲ್ಲಿದೆ ಎನ್ನಲು ಕಾರಣ ವೆಂದರೆ, ಅವುಗಳಲ್ಲಿಯೇ ಹೆಚ್ಚು ಏರಿಳಿತಗಳು ಕಂಡುಬರುತ್ತದೆ ಹಾಗೂ ಎವರೇಜ್ ರಿಟರ್ನ್ ಅಥವಾ ಸರಾಸರಿ ಆದಾಯ ಅಲ್ಲಿಯೇ ಹೆಚ್ಚಾಗಿ ಸಿಗುತ್ತದೆ. ಹೀಗಾಗಿ ಇವುಗಳಲ್ಲಿ ಹೂಡಿಕೆಗೆ SIP ಅವಶ್ಯಕತೆ ಬೀಳುವುದಿಲ್ಲ.
2. Systematic Transfer Plan - SIP ರೀತಿಯ STP ಕೂಡ ಮಾರುಕಟ್ಟೆಯಲ್ಲಿನ ಹೂಡಿಕೆಯ ತಂತ್ರಗಾರಿಗ್ಕೆಯ ಒಂದು ಮಹತ್ವದ ಭಾಗವಾಗಿದೆ. ಆದರೆ, ನಿಮ್ಮ ಬಳಿ ಹೂಡಿಕೆಗಾಗಿ ಒಂದು ನಿಶ್ಚಿತ ಪ್ರಮಾಣದ ರಾಶಿ ಇದ್ದರೆ ಮಾತ್ರ ನೀವು ಇದನ್ನು ಉಪಯೋಗಿಸಬಹುದು. ಆದರೆ, ನೀವು ಎವರೆಜಿಂಗ್ ನ ಲಾಭ ಪಡೆಯಲು SIP ಮೂಲಕವೇ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವು ನಿಮ್ಮ ಸಂಪೂರ್ಣ ಹಣವನ್ನು ಋಣಾತ್ಮಕ ರಿಟರ್ನ್ ನೀಡುವ ಉಳಿತಾಯ ಖಾತೆಯಲ್ಲಿ ಇದುವ ಬದಲು ಸುರಕ್ಷಿತ ಡೆಟ್ ಫಂಡ್ ಗಳಲ್ಲಿ ಇಡಬಹುದು. ನಂತರ ನೀವು ಡೆಟ್ ಫಂಡ್ ನಲ್ಲಿರುವ ಈ ಹಣವನ್ನು ನಿಮ್ಮ ನೆಚ್ಚಿನ ಇಕ್ವಿಟಿ ಫಂಡ್ ಗಳಲ್ಲಿ ಪ್ರತಿ ತಿಂಗಳು ಸಿಸ್ಟಮ್ಯಾಟಿಕ್ ಪದ್ಧತಿಯಲ್ಲಿ ಟ್ರಾನ್ಸ್ ಫರ್ ಮಾಡಬಹುದು. ಇದರ ಬಹುದೊಡ್ಡ ಲಾಭ ಎಂದರೆ, ಇದರಲ್ಲಿ ನಿಮ್ಮ ಹಣಕ್ಕೆ SIP ಲಾಭ ಕೂಡ ಸಿಗುತ್ತದೆ ಹಾಗೂ ಸಿಸ್ಟಮ್ಯಾಟಿಕ್ ಟ್ರಾನ್ಸಫರ್ ಅವಧಿಯಲ್ಲಿ ಡೆಟ್ ಫಂಡ್ ನಲ್ಲಿ ಸಿಗುವ ಆದಾಯ ಕೂಡ ಸಿಗುತ್ತದೆ
3. Systematic Withdrawal Plan - SIP ನಿಮಗೆ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಒಂದು ಉತ್ತಮ ಹಾಗೂ ಅಪಕ್ಷಿತ ಕಡಿಮೆ ಅಪಾಯದ ದಾರಿ ಮಾಡಿ ಕೊಡುತ್ತದೆ. ಆದರೆ, ಅಪಾಯ ಎನ್ನುವುದು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಲ್ಲಿ ಮಾತ್ರ ಇರದೇ, ಮಾರುಕಟ್ಟೆಯಿಂದ ಹಣ ಹಿಂಪಡೆದ ವೇಳೆಯೂ ಕೂಡ ಇರುತ್ತದೆ.
ಇದನ್ನೂ ಓದಿ-SIP ಬಗೆಗಿನ ತಪ್ಪು ಕಲ್ಪನೆಗಳನ್ನು ಬಿಟ್ಟು ಹೂಡಿಕೆ ಮಾಡಿ
ಹೌದು, ಒಂದು ವೇಳೆ ನಿಮಗೆ ಆಕಸ್ಮಿಕವಾಗಿ ಹಣದ ಅವಶ್ಯಕತೆ ಬಿದ್ದರೆ, ನೀವು ಹಿಂದೆ ಮುಂದೆ ಯೋಚಿಸದೆಯೇ ಹಣವನ್ನು ಹಿಂಪಡೆಯುವಿರಿ. ಆದರೆ, ನೀವು ಮೊದಲೇ ಯೋಜಿಸಿದಂತೆ ಮದುವೆ, ಶಿಕ್ಷಣ ಹಾಗೂ ರಿಟೈರ್ಮೆಂಟ್ ಗಳಂತಹ ನಿಶ್ಚಿತ ಉದ್ದೇಶಗಳಿಗಾಗಿ ಹಣವನ್ನು ಹಿಂಪಡೆಯಲು ಬಯಸುತ್ತಿದ್ದರೆ, ಹಣ ಹಿಂಪಡೆಯುವ ವೇಳೆ ನಿಮ್ಮ ಫಂಡ್ ವ್ಯಾಲ್ಯೂ ಉತ್ತಮವಾಗಿರಬೇಕು ಎಂದು ನೀವು ಬಯಸುತ್ತೀರಿ. ಈ ತಾಕಲಾಟ ಸ್ವಾಭಾವಿಕ ಏಕೆಂದರೆ ಮಾರುಕಟ್ಟೆ ಗಗನ ಮುಖಿಯಾಗಿದ್ದಾಗ ನಿರೀಕ್ಷೆಯಲ್ಲಿದ್ದು, ಹಣ ಹಿಂಪಡೆಯುವ ವೇಳೆ ಮಾರುಕಟ್ಟೆ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
ಹೀಗಿರುವಾಗ ಹಣ ಹಿಂಪಡೆಯುವ ಸರಿಯಾದ ಸಮಯ ಯಾವುದು? ಇದನ್ನು ನಿರ್ಧರಿಸುವುದು ಬಹುತೇಕ ಅಸಂಭವಾದ ಮಾತು. ಏಕೆಂದರೆ ಮಾರುಕಟ್ಟೆ ಯಾವಾಗ ಮೇಲಕ್ಕೆ ಹೋಗಲಿದೆ ಮತ್ತು ಯಾವಾಗ ಕೆಳಗೆ ಜಾರಳಿಗೆ ಎಂಬುದನ್ನು ನಿಶ್ಚಿತವಾಗಿ ಊಹಿಸುವುದು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಹಣ ವಿಥ್ ಡ್ರಾ ಮಾಡುವ ಸರಿಯಾದ ಸಯಾಮ ಆಯ್ಕೆ ಮಾಡುವ ಪೇಚಿನಿಂದ ಪಾರಾಗಲು ನೀವು ಸಿಸ್ಟಮ್ಯಾಟಿಕ್ ವಿಥ್ ಡ್ರಾವಲ್ ಪ್ಲಾನ್ ಸಯಾಯ ನೀವು ಪಡೆಯಬಹುದು. SIP ಮೂಲಕ ಯಾವರೀತಿ ಮಾಸಿಕವಾಗಿ ಅಥವಾ ಪ್ರತಿ ವಾರಕ್ಕೆ ಹಣ ಹೂಡಿಕೆ ಮಾಡುವ ರೀತಿಯೇ SWP ಮೂಲಕ ಕೂಡ ತೀವು ಪ್ರತಿ ತಿಂಗಳು ಅಥವಾ ವಾರಕ್ಕೆ ಒಂದು ನಿಶ್ಚಿತ ಪ್ರಮಾಣದ ಹೂಡಿಕೆಯನ್ನು ಹಿಂಪಡೆಯಬಹುದು. ಇದರಲ್ಲಿಯೂ ಕೂಡ ನಿಮಗೆ SIP ರೀತಿಯೇ ಎವರೆಜಿಂಗ್ ಲಾಭ ಸಿಗುತ್ತದೆ ಹಾಗೂ ನೀವು ಸಂಪೂರ್ಣ ಹಣವನ್ನು ಮಾರುಕಟ್ಟೆ ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವಾಗ ಹಣ ಹಿಂಪಡೆಯುವ ಅಪಾಯದಿಂದ ಪಾರಾಗುವಿರಿ.
ಇದನ್ನೂ ಓದಿ- WhatsApp ಮೂಲಕ SIP ಹೂಡಿಕೆ, UTI MFನಿಂದ ಹೊಸ ಸೇವೆ ಬಿಡುಗಡೆ
SWP ಜೊತೆಗೆ STP ಲಾಭ ಪಡೆಯಿರಿ
ಇಲ್ಲಿ ಮತ್ತೊಂದು ಮಹತ್ವದ ವಿಷಯ ಎಂದರೆ, ಈ ಅವಧಿಯಲ್ಲಿ ನೀವು ಬೇಕಾದರೆ STP ಬಳಕೆ ಕೂಡ ಮಾಡಬಹುದು. ಆದರೆ ಈ ಮೊದಲು ನೀಡಲಾಗಿರುವ ಉದಾಹರಣೆಗೆ ವಿರುದ್ಧವಾಗಿ ನೀವು ಈ ಲಾಭ ಪಡೆಯುವಿರಿ. ಅಂದರೆ, ಇಕ್ವಿಟಿ ಫಂಡ್ ನಿಂದ ಹಣವನ್ನು ಮೊದಲು ಕಡಿಮೆ ಏರಿಳಿತ ಹಾಗೂ ನಿಶ್ಚಿತ ಮತ್ತು ಉತ್ತಮ ರಿಟರ್ನ್ ನೀಡುವ ಡೆಟ್ ಫಂಡ್ ನಲ್ಲಿ ವರ್ಗಾವಣೆ ಮಾಡಿ ನಂತರ SWP ಮೂಲಕ ವಿಥ್ರ್ ಡ್ರಾ ಮಾಡಿಕೊಳ್ಳಿ. ನಿಮಗೆ ಯಾವ ತಂತ್ರಗಾರಿಕೆ ಸರಿಯಾದ ತಂತ್ರಗಾರಿಕೆ ಎಂಬುದನ್ನು ನೀವು ನಿಮ್ಮ ಅವಶ್ಯಕತೆ ಹಾಗೂ ಗುರಿಗಳ ಅನುಸಾರ ನೀವು ನಿರ್ಧರಿಸಬಹುದು.
ಈ ರೀತಿ ನೀವು SIP, STP ಹಾಗೂ SWP ಈ ಮೂರು ಅಸ್ತ್ರಗಳನ್ನು ಸರಿಯಾಗಿ ಉಪಯೋಗಿಸಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಉತ್ತಮ ಆದಾಯದ ಲಾಭ ಪಡೆಯಬಹುದು ಮತ್ತು ಅದೂ ಕೂಡ ಅತ್ಯಂತ ಕಡಿಮೆ ರಿಸ್ಕ್ ನಲ್ಲಿ. ಆದರೆ, ಈ ಎಲ್ಲಾ ಲಾಭಗಳು ನೀವೂ ಹಣ ಹೂಡಿಕೆ ಮಾಡುವ ಫಂಡ್ ಗಳನ್ನು ಆಧರಿಸಿವೆ. ಹೀಗಾಗಿ ಉತ್ತಮ ಫಂಡ್ ಗಳ ಆಯ್ಕೆ ಮಾಡಲು ಮೊದಲು ಪ್ರಾಧಾನ್ಯತೆ ನೀಡಲು ಮರೆಯದಿರಿ.
ಇದನ್ನೂ ಓದಿ- Mutual Fund ಹೂಡಿಕೆದಾರರಿಗೆ ಭಾರಿ ನೆಮ್ಮದಿಯ ಸುದ್ದಿ ನೀಡಿದ RBI
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.