Warm Water In Summers: ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿಯೂ ಬಿಸಿ ನೀರು ಸೇವಿಸಿ, ಈ ಸಮಸ್ಯೆಗಳಿಂದ ದೂರವಿರಿ

Warm Water In Summers: ಬೇಸಿಗೆಯಲ್ಲಿಯೂ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.

Written by - Yashaswini V | Last Updated : Apr 6, 2021, 03:18 PM IST
  • ಬೇಸಿಗೆಯಲ್ಲಿ ತಂಪಾದ ಆಹಾರವನ್ನು ಸೇವಿಸುವುದರಿಂದ ಒಂದು ರೀತಿಯ ಆನಂದ, ಉತ್ಸಾಹ ದೊರೆಯುತ್ತದೆ
  • ಆದರೆ ಚಳಿಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲಿಯೂ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಹಲವು ಸಮಸ್ಯೆಗಳಿಂದ ದೂರವಿರಬಹುದು
  • ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಬೇಸಿಗೆಯಲ್ಲಿ ನೀವು ಬಿಸಿ ಅಥವಾ ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು
Warm Water In Summers: ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿಯೂ ಬಿಸಿ ನೀರು ಸೇವಿಸಿ, ಈ ಸಮಸ್ಯೆಗಳಿಂದ ದೂರವಿರಿ title=
Warm Water In Summers

Warm Water In Summers: ಚಳಿಗಾಲದಲ್ಲಿ ಬಿಸಿ ಆಹಾರ, ಬಿಸಿ ನೀರು ಸೇವಿಸಲು ಇಷ್ಟಪಡುವವರು ಬೇಸಿಗೆ ಬಂತೆಂದರೆ ತಣ್ಣನೆಯ ಆಹಾರದ ಮೊರೆ ಹೋಗುತ್ತಾರೆ. ಬೇಸಿಗೆಯಲ್ಲಿ ತಂಪಾದ ಆಹಾರವನ್ನು ಸೇವಿಸುವುದರಿಂದ ಒಂದು ರೀತಿಯ ಆನಂದ, ಉತ್ಸಾಹ ದೊರೆಯುತ್ತದೆ.  ಆದರೆ ಚಳಿಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲಿಯೂ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಹಲವು ಸಮಸ್ಯೆಗಳಿಂದ ದೂರವಿರಬಹುದು ಎಂದು ನಿಮಗೆ ತಿಳಿದಿದೆಯೇ? 

ಹೌದು, ಬೇಸಿಗೆಯಲ್ಲಿ ಬೆಚ್ಚಗಿನ ಅಥವಾ ಬಿಸಿ ನೀರನ್ನು ಸೇವಿಸುವುದರಿಂದ ಹಲವು ರೀತಿಯ ಆರೋಗ್ಯಕರ ಪ್ರಯೋಜನಗಳು ದೊರೆಯುತ್ತದೆ. 

ದೇಹವನ್ನು ನಿರ್ವಿಷಗೊಳಿಸುತ್ತದೆ - ಬಿಸಿ ಅಥವಾ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಜೀವಾಣುಗಳು ದೇಹದಿಂದ ಹೊರಬರುತ್ತವೆ. ಬೆಚ್ಚಗಿನ ನೀರು ಕರುಳಿನಲ್ಲಿರುವ ಆಹಾರ ತ್ವರಿತವಾಗಿ ಅರಗಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ - Skin care : ಈ Scrub ಬಳಸಿದರೆ ಕಲೆ ರಹಿತ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು

ಕಾಲೋಚಿತ ಕಾಯಿಲೆಗಳಿಂದ ದೂರವಿರಲು ಸಹಾಯಕ- ಬೇಸಿಗೆಯಲ್ಲಿ (Summer) ಬೆಚ್ಚಗಿನ ನೀರನ್ನು ಕುಡಿಯುವ ಮೂಲಕ, ನೀವು ಕಾಲೋಚಿತ ಕಾಯಿಲೆಗಳಾದ ಜ್ವರ, ಕೆಮ್ಮು, ಶೀತ ಇತ್ಯಾದಿಗಳಿಂದ ದೂರವಿರುತ್ತೀರಿ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. 

ಮಲಬದ್ಧತೆ ಸಮಸ್ಯೆ- ಬೇಸಿಗೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಸೇವಿಸುವುದರಿಂದ ಮಲ ವಿಸರ್ಜನೆಗೆ ಸುಲಭವಾಗುತ್ತದೆ. 

ಇದನ್ನೂ ಓದಿ - Blood Cancer Signs: ನಿಮಗೂ ಈ ಲಕ್ಷಣಗಳಿದ್ದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ

ತೂಕ ಇಳಿಸಿಕೊಳ್ಳಲು ಪ್ರಯೋಜನಕಾರಿ- ನೀವು ತೂಕ ಇಳಿಸಿ (Weight Loss) ಕೊಳ್ಳಲು ಬಯಸಿದರೆ, ಬೇಸಿಗೆಯಲ್ಲಿ ನೀವು ಬಿಸಿ ಅಥವಾ ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಬಿಸಿನೀರು ದೇಹದ ಉಷ್ಣತೆಯನ್ನು ಸರಿಯಾಗಿ ಇಡುತ್ತದೆ ಮತ್ತು ನಿಮ್ಮ ಮೆಟಾಪೊಲಿಸಮ್ ದರವನ್ನು ಹೆಚ್ಚಿಸುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News