ನವದೆಹಲಿ: Hanuman Temple - ಸಂಕಟ ಮೋಚನ ಎಂದೇ ಕರೆಯಲಾಗುವ ಶ್ರೀ ಆಂಜನೇಯನಿಗೆ ದೇಶಾದ್ಯಂತ ಹಲವು ಮಂದಿರಗಳಿವೆ ಮತ್ತು ಈ ದೇವಸ್ಥಾನಗಳು ವಿವಿಧ ಕಾರಣಗಳಿಂದ ಪ್ರಸಿದ್ಧಿ ಪಡೆದು ವಿಶಿಷ್ಟವಾಗಿವೆ (Famous Hanuman Temple). ಯಾವುದೇ ಒಂದು ದೇವಸ್ಥಾನದಲ್ಲಿ ಶಯನಾಸನದಲ್ಲಿರುವ ಹನುಮನ ಮೂರ್ತಿ ಇದ್ದರೆ, ಮತ್ತೊಂದು ದೇವಸ್ಥಾನದಲ್ಲಿ ಹನುಮನ ತಿರುಗಿನಿಂತಿರುವ ಮೂರ್ತಿ ಇದೆ. ವಿಶೇಷ ಎಂದರೆ ರಾಜಸ್ಥಾನದ ಬಾಲಾಜಿ ಹನುಮ ದೇವಸ್ಥಾನದಲ್ಲಿ ಆಂಜನೇಯನ ಯಾವ ಮೂರ್ತಿಯೂ ಇಲ್ಲ ಎಂದು ಹೇಳಿದರೆ ನೀವು ಬೆರಗಾಗುವಿರಿ. ಹೌದು, ಏಕೆಂದರೆ ಇಲ್ಲಿ ದೊಡ್ಡ ಗಾತ್ರದ ಬಂಡೆಗಲ್ಲಿನ ಮೇಲೆ ಕೇವಲ ಹನುಮನ ಆಕೃತಿ ಮೂಡಿದೆ ಹಾಗೂ ಅದನ್ನೇ ಹನುಮನ ಸ್ವರೂಪ ಎಂದು ಭಾವಿಕರು ಭಾವಿಸುತ್ತಾರೆ. ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಒಂದು ಆಜನೆಯಸ್ವಾಮಿ ದೇವಸ್ಥಾನದ ಕುರಿತು ನೀವು ಹಿಂದೆಂದೂ ಬಹುಶಃ ಕೇಳಿರದೇ ಇರುವ ಸಾಧ್ಯತೆ ಇದೆ.
ಸ್ತ್ರೀರೂಪದಲ್ಲಿ ಆಂಜನೇಯ ಪ್ರತಿಮೆ
ಇಂದು ನಾವು ನಿಮಗೆ ಹೇಳಲು ಹೊರಟಿರುವ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಆಂಜನೇಯನ ಪುರುಷ ರೂಪ ಅಲ್ಲ ಸ್ತ್ರೀ ರೂಪದಲ್ಲಿ ಪೂಜೆ ಸಲ್ಲಿಸಲಾಗುತ್ತದೆ (Lord Hanuman being worshipped as Woman). ಆಂಜನೇಯ ಸ್ವಾಮಿಯ ಈ ದೇವಷ್ಟಾನ ಛತ್ತಿಸ್ಗಡ್ ಖ್ಯಾತ ನಗರವಾಗಿರುವ ಬಿಲಾಸ್ಪುರ್ ನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ರತನಪುರ್ ಎಂಬ ಪಟ್ಟಣದಲ್ಲಿದೆ. ಗಿರಿಜಾಬಂದ್ ಹನುಮಾನ್ ಮಂದಿರ ಎಂದೇ ಇದಕ್ಕೆ ಕರೆಯಲಾಗುತ್ತದೆ. ಹನುಮನ ನಾರಿ ರೂಪದ ಮೂರ್ತಿ ಇರುವ ವಿಶ್ವದ ಏಕಮಾತ್ರ ದೇವಸ್ಥಾನ ಇದಾಗಿದೆ. ಅಷ್ಟೇ ಅಲ್ಲ ಇಲ್ಲಿರುವ ಸ್ತ್ರೀರೂಪದ ಹನುಮನಿಗೆ ಭಕ್ತಾದಿಗಳು ಪೂಜೆ ಸಲ್ಲಿಸುತ್ತಾರೆ. ನಾರಿ ರೂಪದ ಈ ಆಂಜನೇಯ ಸ್ವಾಮಿಯ ಈ ಮೂರ್ತಿ 10 ಸಾವಿರ ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗುತ್ತದೆ.
ಇದನ್ನೂ ಓದಿ- Panchamukhi Hanuman ಹನುಮನ ಪೂಜೆಯಿಂದ ಸಿಗುತ್ತೆ ಅಪಾರ ಲಾಭ
ಇಲ್ಲಿ ಭಕ್ತಾದಿಗಳ ಇಷ್ಟಾರ್ಥ ನೆರವೇರುತ್ತದೆ
ಇಲ್ಲಿಗೆ ಭೇಟಿ ನೀಡುವ ಯಾವುದೇ ಭಕ್ತ ಖಾಲಿ ಕೈಯಲ್ಲಿ ತಮ್ಮ ಮನೆಗೆ ತೆರಳುವುದಿಲ್ಲ ಎಂದು ಇಲ್ಲಿನ ಸ್ಥಳೀಯ ಭಾವಿಕರ ನಂಬಿಕೆ. ಅಂದರೆ, ಇದೊಂದು ಜಾಗೃತ ಆಂಜನೇಯ ಸ್ವಾಮಿ ದೇವಸ್ಥಾನ ಎಂದರೆ ತಪ್ಪಾಗಲಾರದು. ಸಂಪೂರ್ಣ ಶೃದ್ಧೆ ಹಾಗೂ ಭಕ್ತಿಯಿಂದ ಈ ವಿಶಿಷ್ಟ ಸ್ವರೂಪದ ಆಂಜನೇಯ ಸ್ವಾಮಿಯ ದರ್ಶನ ಪಡೆಯುವ ಭಕ್ತರ ಮನೋಕಾಮನೆಗಳು ಇಲ್ಲಿ ಪೂರ್ಣಗೊಳ್ಳುತ್ತವೆ. ಹನುಮನ ಈ ಮೂರ್ತಿ ದಕ್ಷಿಣ ಮುಖಿಯಾಗಿದ್ದು, ಇದರಲ್ಲೂ ಕೂಡ ಆಜನೆಯ ಸ್ವಾಮಿಯ ಹೆಗಲ ಮೇಲೆ ರಾಮ-ಲಕ್ಷ್ಮಣರು ಕುಳಿತಿದ್ದಾರೆ.
ಇದನ್ನೂ ಓದಿ- ಅಮೇರಿಕಾದಲ್ಲಿ ಸ್ಥಾಪನೆಯಾದ 25 ಅಡಿ ಎತ್ತರದ ಆಂಜನೇಯ ಮೂರ್ತಿ, ತಯಾರಾಗಿದ್ದು ಎಲ್ಲಿ ಗೊತ್ತಾ?
ಈ ದೇವಸ್ಥಾನದ ಹಿಂದಿನ ಪೌರಾಣಿಕ ಕಥೆ
ಈ ದೇವಸ್ಥಾನದ ಐತಿಹ್ಯದ ಕುರಿತು ಹೇಳುವುದಾದರೆ. ಪ್ರಾಚೀನ ಕಾಲದಲ್ಲಿ ರತನಪುರ್ ರಾಜನಾಗಿದ್ದ ರಾಜಾ ಪೃಥ್ವಿ ದೇವಜು ಹನುಮನ ಪ್ರಚಂಡ ಭಕ್ತನಾಗಿದ್ದ. ಆದರೆ, ರಾಜನಿಗೆ ಕುಷ್ಟರೋಗಕ್ಕೆ ಗುರಿಯಾಗಿ ಜೀವನದಲ್ಲಿ ತುಂಬಾ ನಿರಾಶನಾದ. ಹೀಗಿರುವಾಗ ಒಂದು ರಾತ್ರಿ ರಾಜನ ಕನಸಿನಲ್ಲಿ ಗೋಚರಿಸಿದ ಶ್ರೀಆಂಜನೇಯ ಸ್ವಾಮಿ ರಾಜನಿಗೆ ದೇವಸ್ಥಾನ ನಿರ್ಮಾಣ ಮಾಡುವಂತೆ ಹೇಳುತ್ತಾರೆ. ದೇವಸ್ಥಾನದ ಕಾರ್ಯ ಪೂರ್ಣಗೊಂಡ ಬಳಿಕ ಮತ್ತೆ ರಾಜನ ಕನಸಿನಲ್ಲಿ ಕಾಣಿಸಿಕೊಂಡ ಶ್ರೀಆಂಜನೇಯ, ರಾಜನಿಗೆ ಮಹಾಮಾಯಾ ಕುಂಡದಿಂದ ತನ್ನ ಮೂರ್ತಿಯನ್ನು ಹೊರತೆಗೆದು ಪ್ರತಿಷ್ಠಾಪಿಸಲು ಆದೇಶಿಸುತ್ತಾರೆ. ಹನುಮ ಸೂಚಿಸಿರುವ ಸ್ಥಾನಕ್ಕೆ ಭೇಟಿ ನೀಡಿದ ರಾಜ ಮೂರ್ತಿಯನ್ನು ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸುತ್ತಾನೆ. ಆಂಜನೇಯನ ಆ ವಿಗ್ರಹ ಸ್ತ್ರೀರೂಪದ ವಿಗ್ರಹವಾಗಿತ್ತು ಹಾಗೂ ದೇವಸ್ಥಾನದ ಎಲ್ಲ ವಿಧಿಗಳು ಪೂರ್ಣಗೊಂಡ ಬಳಿಕ ರಾಜನ ಕುಷ್ಠರೋಗ ದೂರವಾಗುತ್ತದೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಸೂಚನೆಗಳು ಸಾಮಾನ್ಯ ಮಾಹಿತಿ ಹಾಗೂ ಮಾನ್ಯತೆಗಳನ್ನು ಆಧರಿಸಿವೆ. Zee Hindustan ಅವುಗಳನ್ನು ಪುಷ್ಟೀಕರಿಸುವುದಿಲ್ಲ)
ಇದನ್ನೂ ಓದಿ- ಭಾರತದಲ್ಲೇ ತಲೆ ಎತ್ತಲಿದೆ ವಿಶ್ವದ ಅತಿ ಎತ್ತರದ ಆಕ್ಟಾ ಮೆಟಲ್ ಹನುಮಾನ್ ಪ್ರತಿಮೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.