Indian Railways IRCTC Latest News : ರೈಲು ಪ್ರಯಾಣಿಕರಿಗೆ ಇನ್ನು ಮುಂದೆ ಈ ಸೌಲಭ್ಯ ಸಿಗುವುದಿಲ್ಲ

ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 'ಭಾರತೀಯ ರೈಲ್ವೆ  ರಾತ್ರಿ ವೇಳೆಯಲ್ಲಿ ಚಾರ್ಜಿಂಗ್ ಪಾಯಿಂಟ್ ಗಳ   ಬಳಕೆಯನ್ನು ನಿಷೇಧಿಸಿದೆ. ಮಾರ್ಚ್ 13 ರಂದು ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್‌ಪ್ರೆಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Written by - Ranjitha R K | Last Updated : Mar 31, 2021, 09:10 AM IST
  • ರೈಲಿನಲ್ಲಿ ರಾತ್ರಿ ಪ್ರಯಾಣ ಬೆಳಸುವ ಮುನ್ನ ತಿಳಿದುಕೊಳ್ಳಲೇಬೇಕಾದ ವಿಷಯ
  • ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಚಾರ್ಜ್ ಮಾಡುವ ಸೌಲಭ್ಯ ಸಿಗುವುದಿಲ್ಲ.
  • ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರೈಲುಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ ಆಫ್ ಇರುತ್ತದೆ
Indian Railways IRCTC Latest News : ರೈಲು ಪ್ರಯಾಣಿಕರಿಗೆ ಇನ್ನು ಮುಂದೆ ಈ ಸೌಲಭ್ಯ ಸಿಗುವುದಿಲ್ಲ  title=
ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರೈಲುಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ ಆಫ್ (file photo)

ನವದೆಹಲಿ : Indian Railways/IRCTC News : ಸಾಮಾನ್ಯವಾಗಿ ರೈಲು ಪ್ರಯಾಣ ಅಂದರೆ ರಾತ್ರಿ ಹೊತ್ತು ಪ್ರಯಾಣವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು ಕೂಡಾ ರೈಲಿನಲ್ಲಿ (Train) ಸಂಚರಿಸುವವರಾಗಿದ್ದು, ಅದರಲ್ಲೂ ರಾತ್ರಿ ಪ್ರಯಾಣವನ್ನು ಕೈಗೊಳ್ಳುವವರಾದರೆ ಈ ಸುದ್ದಿಯನ್ನೊಮ್ಮೆ ಖಂಡಿತಾ ಓದಿ.   ನೀವು ರೈಲಿನಲ್ಲಿ ರಾತ್ರಿ ಪ್ರಯಾಣ ಬೆಳಸುವ ಮುನ್ನ ತಿಳಿದುಕೊಳ್ಳಲೇಬೇಕಾದ ವಿಷಯ ಇದು. ನೀವು ರಾತ್ರಿ ಪ್ರಯಾಣಿಸುತ್ತಿದ್ದರೆ, ನಿಮ್ಮ ಮೊಬೈಲ್ (Mobile) , ಲ್ಯಾಪ್‌ಟಾಪ್ ಮತ್ತು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಮೊದಲೇ ಚಾರ್ಜ್ (Charge) ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ.  ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಚಾರ್ಜ್ ಮಾಡುವ ಸೌಲಭ್ಯ ಸಿಗುವುದಿಲ್ಲ. ಅಂದರೆ, ಮನೆಯಿಂದ ಹೊರಡುವ ಮೊದಲು ನಿಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಅನ್ನು  ಚಾರ್ಜ್ ಮಾಡಿಕೊಂಡಿರಬೇಕು.  

ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 'ಭಾರತೀಯ ರೈಲ್ವೆ  (Indian Railway) ರಾತ್ರಿ ವೇಳೆಯಲ್ಲಿ ಚಾರ್ಜಿಂಗ್ ಪಾಯಿಂಟ್ ಗಳ ಬಳಕೆಯನ್ನು ನಿಷೇಧಿಸಿದೆ. ಮಾರ್ಚ್ 13 ರಂದು ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್‌ಪ್ರೆಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೋಗಿಯಲ್ಲಿ ಬೆಂಕಿ (Fire) ಕಾಣಿಸಿಕೊಂಡು ಇತರ ಏಳು ಬೋಗಿಗಳಿಗೆ ಹರಡಿತ್ತು. 

ಇದನ್ನೂ ಓದಿ : Fact Check: ಗುಮಾಸ್ತ ಹುದ್ದೆಗಳಿಗೆ ಐಆರ್‌ಸಿಟಿಸಿ ಆಫರ್ ಲೆಟರ್ ನೀಡಿದೆಯೇ? ಇಲ್ಲಿದೆ ಸತ್ಯಾಸತ್ಯತೆ

ಇದೇ  ವೇಳೆ, ಧೂಮಪಾನಿಗಳನ್ನು ನಿಗ್ರಹಿಸುವ ಬಗ್ಗೆಯು ರೈಲ್ವೆ (Railway) ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಲು ಇಂತಹ ಅಪರಾಧಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ರೈಲ್ವೆ ಚಿಂತನೆ ನಡೆಸಿದೆ. ರೈಲ್ವೆ ಕಾಯ್ದೆಯ ಸೆಕ್ಷನ್ 167 ರ ಅಡಿಯಲ್ಲಿ ರೈಲಿನಲ್ಲಿ ಧೂಮಪಾನ ಮಾಡಿದರೆ  ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ರೈಲಿನಲ್ಲಿ ಧೂಮಪಾನ ಮಾಡಿದರೆ  ಪ್ರಸ್ತುತ 100 ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ. 

ಪ್ರಯಾಣಿಕರ (Passengers) ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರೈಲುಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು (Charging Point) ಆಫ್ ಮಾಡಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡುವ ಕಾರಣದಿಂದಾಗಿಯೇ ಅನೇಕ ರೈಲಿನಲ್ಲಿ ಬೆಂಕಿ ಅವಘಡಗಳು ನಡೆದಿವೆ. ಈ ಹಿನ್ನೆಲೆಯಲ್ಲಿ, ಎಲ್ಲಾ ರೈಲ್ವೆ ವಲಯಗಳಲ್ಲಿ ಈ ನಿರ್ದೇಶನವನ್ನು ಜಾರಿಗೆ ತರಲಾಗುತ್ತಿದೆ. 

ಇದನ್ನೂ ಓದಿ : ರೈಲಿನಲ್ಲಿ ಆಹಾರ ಗುಣಮಟ್ಟದ ಮೇಲ್ವಿಚಾರಣೆಗೆ ಪ್ರತೀ ಬೋಗಿಯಲ್ಲಿಯೂ ಫುಡ್ ಇನ್ಸ್ ಪೆಕ್ಟರ್

ಎಸಿ ಮೆಕ್ಯಾನಿಕ್ ಸೇರಿದಂತೆ ಎಲ್ಲಾ ಉದ್ಯೋಗಿಗಳಿಗೆ ರಾತ್ರಿಯಲ್ಲಿ ಚಾರ್ಜಿಂಗ್ ಪಾಯಿಂಟ್ ಆಫ್ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಅಧಿಕಾರಿಗಳ ಇನ್ಸ್ಪೆಕ್ಷನ್ ವೇಳೆ ಈ ವಿಚಾರದಲ್ಲಿ ಸಿಬ್ಬಂದಿಯ ದೋಷ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News