ನವದೆಹಲಿ: ಹಿಂದೂ ಪಂಚಾಂಗದ ಪ್ರಕಾರ, ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷಗಳಲ್ಲಿ ತಿಂಗಳಿಗೆ 2 ಬಾರಿ ಬರುವ ಚತುರ್ಥಿ ಗಣೇಶನಿಗೆ (Ganesha) ಅರ್ಪಿತವಾಗಿದೆ. ಕೃಷ್ಣ ಪಕ್ಷದಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ (Sankashta Chaturthi) ಎಂದು ಕರೆಯಲಾಗುತ್ತದೆ. ಶುಕ್ಲ ಪಕ್ಷದಲ್ಲಿ ಅಮವಾಸ್ಯೆಯ ನಂತರ ಬರುವ ಚತುರ್ಥಿ ತಿಥಿಯನ್ನು ವಿನಾಯಕ ಚತುರ್ಥಿ (Vinayaka Chaturthi) ಎಂದು ಕರೆಯಲಾಗುತ್ತದೆ. ಇನ್ನು ಗಣೇಶನ ಜನ್ಮದಿನವೆಂದು ಆಚರಿಸಲಾಗುವ ವಿನಾಯಕ ಚತುರ್ಥಿ ಭದ್ರಪದ ತಿಂಗಳಲ್ಲಿ ಬರುತ್ತದೆ. ಈ ಬಾರಿ ಫಾಲ್ಗುಣ ಮಾಸದ ಶುಕ್ಲ ಪಕ್ಷದ ವಿನಾಯಕ ಚತುರ್ಥಿ ಮಾರ್ಚ್೧೭ ರಂದು ಇದೆ. ಅಂದರೆ ಬುಧವಾರ. ಬುಧವಾರವನ್ನು ಗಣೇಶನ ದಿನವೆಂದು ಪೂಜಿಸಲಾಗುತ್ತದೆ. ಈ ದಿನ ಗಣೇಶನಿಗೆ ಪೂಜೆ (Ganesh Pooja) ಸಲ್ಲಿಸಿದರೆ ಸಿಗುವ ಪೂಜಾ ಫಲ ದ್ವಿಗುಣವಾಗುತ್ತದೆ ಎಂದು ನಂಬಲಾಗಿದೆ.
ವಿನಾಯಕ ಚತುರ್ಥಿ ದಿನಾಂಕ ಮತ್ತು ಶುಭ ಆರಾಧನೆಯ ಸಮಯ :
ಫಾಲ್ಗುಣ ಶುಕ್ಲ ಪಕ್ಷದ ಚತುರ್ಥಿ ದಿನಾಂಕ - ಮಾರ್ಚ್ 17 ಬುಧವಾರ
ಚತುರ್ಥಿ ದಿನಾಂಕ ಕೊನೆಗೊಳ್ಳುವುದು - 17 ಮಾರ್ಚ್ 2021 ಬುಧವಾರ ರಾತ್ರಿ 11.28ಕ್ಕೆ
ವಿನಾಯಕ ಚತುರ್ಥಿ (Vinayaka Chaturthi) ಪೂಜೆಗೆ ಶುಭ ಸಮಯ - ಮಾರ್ಚ್ 17, ಬುಧವಾರ ಬೆಳಿಗ್ಗೆ 11.17 ರಿಂದ ಮಧ್ಯಾಹ್ನ 01.42 ರವರೆಗೆ
ಇದನ್ನೂ ಓದಿ : Ganesh Chaturthi 2020: ಗಣಪತಿಯ 8 ಅದ್ಭುತ ದೇವಾಲಯಗಳ ಬಗ್ಗೆ ನಿಮಗೆಷ್ಟು ಗೊತ್ತು
ವಿನಾಯಕ ಚತುರ್ಥಿಯ ಮಹತ್ವ :
ಭಕ್ತರು ವಿನಾಯಕ ಚತುರ್ಥಿಯಂದು (Vinayaka Chaturthi) ಶೃದ್ಧಾ ಭಕ್ತಿಯಿಂದ ಗಣೇಶನನ್ನು ಪೂಜಿಸಿದರೆ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಅಲ್ಲದೆ, ಮಾಡುವ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ನೆರವೇರುತ್ತದೆ ಎನ್ನಲಾಗಿದೆ. ಅಲ್ಲದೆ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಗೊಳ್ಳುತ್ತದೆ ಎನ್ನಲಾಗಿದೆ. ಇನ್ನು ಯಾವುದೇ ಕೆಲಸ ಆರಂಭಿಸ ಬೇಕಾದ್ರೂ ಗಣೇಶನ (Lord Ganesha) ಆರಾಧನೆ ಮಾಡಿ, ಗಣೇಶನ ಆಶೀರ್ವಾದದಿಂದ ಆರಂಭಿಸಿದರೆ ಮಾಡುವ ಕೆಲಸ ಕೈಗೂಡುತ್ತದೆ ಎಂಬುದು ನಂಬಿಕೆ. ಇನ್ನು, ಗಣೇಶನನ್ನು ಆರಾಧಿಸುವುದರಿಂದ ಜ್ಞಾನ ಮತ್ತು ಸಂಪತ್ತಿನ ಲಾಭವೂ ಸಿಗುತ್ತದೆ.
ವಿನಾಯಕ ಚತುರ್ಥಿ ಪೂಜಾ ವಿಧಾನ :
ವಿನಾಯಕ ಚತುರ್ಥಿಯಲ್ಲೂ ಅನೇಕ ಜನರು ಉಪವಾಸ ಕೈಗೊಳ್ಳುತ್ತಾರೆ. ಪೂಜಾ ವಿಧಾನದ (Pooja Vidhi) ಬಗ್ಗೆ ಹೇಳುವುದಾದರೆ ಬೆಳಿಗ್ಗೆ ಸ್ನಾನ ಮಾಡಿದ ನಂತರ ಮನೆಯನ್ನು ಶುಚಿಗೊಳಿಸಿ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಗಣೇಶನನ್ನು ಪೂಜಿಸಬೇಕು. ಪೂಜೆಯ ವೇಳೆ ಧೂಪ, ದೀಪಗಳು, ಹೂ, ಹಣ್ಣುಗಳನ್ನು ಗಣೇಶನಿಗೆ ಅರ್ಪಿಸಿ. ಗಣೇಶನ ಪೂಜೆಯ (Ganesha pooja) ವೇಳೆ ಗರಿಕೆಯನ್ನು ಅರ್ಪಿಸುವುದನ್ನು ಮಾತ್ರ ಮರೆಯಬೇಡಿ. ಗಣೇಶನಿಗೆ (Ganesha) ಲಡ್ಡು, ಎಳ್ಳಿನಿಂದ ಮಾಡಿದ ಸಿಹಿ ತಿಂಡಿಗಳನ್ನು, ಮೋದಕವನ್ನು (Modak) ಅರ್ಪಿಸಬಹುದು. ಗಣೇಶನ ಆರತಿ ವೇಳೆ "ಓಂ ಗಣೇಶಾಯ ನಮಃ ಅಥವಾ "ಓಂ ಗಣ ಗಣಪತೆ ನಮಃ " ಮಂತ್ರಗಳನ್ನು ಪಠಿಸಿ.
ಇದನ್ನೂ ಓದಿ : ಪುಣೆ: ಚಳಿಗಾಲದಲ್ಲಿ ಸ್ವೆಟರ್ ಧರಿಸುವ ಗಣಪತಿ, 30 ವರ್ಷಗಳ ಹಳೆಯ ಸಂಪ್ರದಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.