ನವದೆಹಲಿ: Guvava Leaves Tea - ಸೀಬೆಹಣ್ಣು ಅಥವಾ ಪೇರಲೆ ಹಣ್ಣು ಆಂಟಿ ಆಕ್ಸಿಡೆಂಟ್, ವಿಟಮಿನ್ ಸಿ, ಪೊಟ್ಯಾಸಿಯಂ ಹಾಗೂ ಫೈಬರ್ ಗಳ ಆಗರವಾಗಿದೆ. ಸೀಬೇಹಣ್ಣಿನ ಗಿಡದ ಎಲೆಗಳಿಂದ ತಯಾರಿಸಲಾಗುವ ಚಹಾ ಕೂಡ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಜನರು ಸೀಬೇಹಣ್ಣಿನ ಎಲೆಗಳಿಂದ ತಯಾರಿಸಲಾಗಿರುವ ಟೀ (Tea) ಸೇವನೆಯನ್ನು ಹಲವಾರು ದಶಕಗಳಿಂದ ಮಾಡುತ್ತಿದ್ದಾರೆ. ಆದರೆ, ದಿನಗಳು ಕಳೆಯುತ್ತಿದ್ದಂತೆ ಇದರ ಜನಪ್ರೀಯತೆ ಕಡಿಮೆಯಾಗುತ್ತಾ ಹೊರಟಿದೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಚಹಾ ಬರುತ್ತಿರುವುದು ಇದರ ಹಿಂದಿನ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಒಂದು ವೇಳೆ ನೀವೂ ಕೂಡ ಸಂಪೂರ್ಣ ಪ್ರಾಕೃತಿಕ ಸಾಮಗ್ರಿಗಳ ಮೇಲೆ ನಂಬಿಕೆಯನ್ನು ಇಡಲು ಬಯಸುತ್ತಿದ್ದರೆ ಹಾಗೂ ನಿಮ್ಮ ದಿನದ ಆರಂಭವನ್ನು ಪ್ರೋಸೆಸ್ಡ್ ಸಾಮಗ್ರಿಯಿಂದ ಮಾಡಲು ಹಿಂದೇಟು ಹಾಕುತ್ತಿದ್ದರೆ, ಸೀಬೆಹಣ್ಣಿನ ಎಳೆಗಳ ಟೀ ಸೇವನೆ ಒಂದು ಉತ್ತಮ ವಿಕಲ್ಪವಾಗಿದೆ. ಇದಕ್ಕಾಗಿ ನೀವು ಕಷ್ಟಪಡುವ ಅವಶ್ಯಕತೆ ಇಲ್ಲ. ತೋಟ ಹಾಗೂ ಮನೆಯ ಹಿತ್ತಲಲ್ಲೇ ನೀವು ಸೀಬೆಹಣ್ಣಿನ ಗಿಡವನ್ನು ಬೆಳೆಸಬಹುದು. ಸೀಬೇಹಣ್ಣಿನ ಚಹಾದಲ್ಲಿ ಆಂಟಿ ಆಕ್ಸಿಡೆಂಟ್, ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಹಾಗಾದರೆ ಬನ್ನಿ ಸೀಬೆಹಣ್ಣಿನ ಚಹಾ ಹೇಗೆ ತಯಾರಿಸಬೇಕು ಎಂಬುದನ್ನು ತಿಳಿಯೋಣ
ಸೀಬೆಹಣ್ಣಿನ ಎಳೆಗಳ ಟೀ ಹೇಗೆ ತಯಾರಿಸಬೇಕು
ಬೇಕಾಗುವ ಸಾಮಗ್ರಿ
ಸೀಬೆಹಣ್ಣಿನ ತಾಜಾ ಎಳೆಗಳು, ಅರ್ಧ ಚಮಚೆ ಸಾಮಾನ್ಯ ಟೀ ಪೌಡರ್, 1/4 ಚಮಚೆ ನೀರು ಹಾಗೂ ಜೇನುತುಪ್ಪ ಅಥವಾ ಬೆಲ್ಲದಿಂದ ನೀವು ಈ ಚಹಾ ತಯಾರಿಸಬಹುದು.
ಇದನ್ನೂ ಓದಿ-ಕಡುಬೇಸಿಗೆಯಲ್ಲಿ ಈ 9 ಆಹಾರಗಳಿಂದ ಸಾಧ್ಯವಾದಷ್ಟೂ ದೂರ ಇರಿ.!
ತಯಾರಿಸುವ ವಿಧಾನ
ಮೊದಲು ಸೀಬೆಹಣ್ಣಿನ 10 ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಟೀ ಪಾತ್ರೆಯಲ್ಲಿ ಮೊದಲು 1/4 ಚಮಚೆ ನೀರನ್ನು ಹಾಕಿ ಮಧ್ಯಮ ಬೆಂಕಿಯಲ್ಲಿ ಕುದಿಸಿಕೊಳ್ಳಿ. ಬಳಿಕ ಅದರಲ್ಲಿ ಶುಚಿಗೊಳಿಸಿದ ಸೀಬೆಹಣ್ಣಿನ ಎಲೆಗಳನ್ನು ಹಾಕಿ ಹಾಗೂ 5 ನಿಮಿಷ ಕುಡಿಸಿ. ಇದರಲ್ಲಿ ಅರ್ಧ ಚಮಚೆ ಸಾಮಾನ್ಯ ಟೀ ಪೌಡರ್ ಅನ್ನು ಬೆರೆಸಿ. ಇದು ಬಣ್ಣ ಹಾಗೂ ಸ್ವಾದ ನೀಡುತ್ತದೆ. ಬಳಿಕ ಮತ್ತೆ ಸ್ವಲ್ಪ ನೀರನ್ನು ಹಾಕಿ 10 ನಿಮಿಷಗಳ ಕಾಲ ಕುಡಿಸಿ ಬಳಿಕ ಸೋಸಿ. ಕೊನೆಯಲ್ಲಿ ಅದರಲ್ಲಿ ಜೇನುತುಪ್ಪ ಅಥವಾ ಬೆಲ್ಲವನ್ನು ಬೆರೆಸಿ.
ಇದನ್ನೂ ಓದಿ-ನಿತ್ಯ Mouthwash ಬಳಸುವವರು ತಪ್ಪದೇ ಈ ಸುದ್ದಿ ಓದಿ
ಈ ಟೀ ಸೇವನೆಯ ಲಾಭಗಳು
ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ
ದೇಹದಲ್ಲಿ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅನೇಕ ಆರೋಗ್ಯ (Health Tips) ಸಮಸ್ಯೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಹೃದಯಕ್ಕೆ. ಕೊಲೆಸ್ಟ್ರಾಲ್ ದೇಹದಲ್ಲಿನ ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. ನ್ಯೂಟ್ರಿಷನ್ ಮತ್ತು ಮೆಟಾಬಾಲಿಸಂನಲ್ಲಿ ಪ್ರಕಟವಾದ ಲೇಖನವೊಂದರ ಪ್ರಕಾರ, ಪೇರಲೆ ಎಲೆಗಳ ಚಹಾವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಎಂಟು ವಾರಗಳ ನಂತರ ಕಕಡಿಮೆಯಾಗುತ್ತದೆ ಎಂದು ಸಂಶೋಧನೆ ತೋರಿಸಿದೆ.
ಇದನ್ನೂ ಓದಿ-Spring Onion : ಈ ಆರು ಕಾರಣಕ್ಕೆ ಈರುಳ್ಳಿ ಸೊಪ್ಪು ಚೆನ್ನಾಗಿ ತಿನ್ನಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.