BPL Card: ಸಾರ್ವಜನಿಕರೇ ಗಮನಿಸಿ: ಸದ್ಯಕ್ಕೆ ಸಿಗಲ್ಲ ನಿಮಗೆ ಹೊಸ BPL​ ಕಾರ್ಡ್!

ಕರೊನಾದ ಕರಿಛಾಯೆ ಇದೀಗ ಈ ಪ್ರಕ್ರಿಯೆ ಮೇಲೂ ಪರಿಣಾಮ ಬೀರಿರುವುದರಿಂದ ಹೊಸ ಬಿಪಿಎಲ್​ ಕಾರ್ಡ್​ಗಳಿಗೆ ಇನ್ನಷ್ಟು ತಿಂಗಳುಗಳ ಕಾಲ ಕಾಯುವುದು ಅನಿವಾರ್ಯ

Last Updated : Mar 15, 2021, 08:03 PM IST
  • ಹೊಸದಾಗಿ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಿರುವವರಿಗೆ ಹಾಗೂ ಇನ್ನು ಅರ್ಜಿ ಸಲ್ಲಿಸಬೇಕು ಎಂದುಕೊಂಡವರಿಗೆ ಇದು ಬೇಸರದ ಸಂಗತಿ.
  • ಏಕೆಂದರೆ ಹೊಸ ಬಿಪಿಎಲ್ ಕಾರ್ಡ್​​ಗಳು ಸದ್ಯ ಸಿಗಲಾರವು.
  • ಕರೊನಾದ ಕರಿಛಾಯೆ ಇದೀಗ ಈ ಪ್ರಕ್ರಿಯೆ ಮೇಲೂ ಪರಿಣಾಮ ಬೀರಿರುವುದರಿಂದ ಹೊಸ ಬಿಪಿಎಲ್​ ಕಾರ್ಡ್​ಗಳಿಗೆ ಇನ್ನಷ್ಟು ತಿಂಗಳುಗಳ ಕಾಲ ಕಾಯುವುದು ಅನಿವಾರ್ಯ
BPL Card: ಸಾರ್ವಜನಿಕರೇ ಗಮನಿಸಿ: ಸದ್ಯಕ್ಕೆ ಸಿಗಲ್ಲ ನಿಮಗೆ ಹೊಸ BPL​ ಕಾರ್ಡ್! title=

ಬೆಂಗಳೂರು: ಹೊಸದಾಗಿ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಿರುವವರಿಗೆ ಹಾಗೂ ಇನ್ನು ಅರ್ಜಿ ಸಲ್ಲಿಸಬೇಕು ಎಂದುಕೊಂಡವರಿಗೆ ಇದು ಬೇಸರದ ಸಂಗತಿ, ಏಕೆಂದರೆ ಹೊಸ ಬಿಪಿಎಲ್ ಕಾರ್ಡ್​​ಗಳು ಸದ್ಯ ಸಿಗಲಾರವು. ಕರೊನಾದ ಕರಿಛಾಯೆ ಇದೀಗ ಈ ಪ್ರಕ್ರಿಯೆ ಮೇಲೂ ಪರಿಣಾಮ ಬೀರಿರುವುದರಿಂದ ಹೊಸ ಬಿಪಿಎಲ್​ ಕಾರ್ಡ್​ಗಳಿಗೆ ಇನ್ನಷ್ಟು ತಿಂಗಳುಗಳ ಕಾಲ ಕಾಯುವುದು ಅನಿವಾರ್ಯವಾಗಿದೆ.

ಕೊರೊನಾದಿಂದಾಗಿ ಒಂದು ವರ್ಷದಿಂದ ರೇಷನ್ ಕಾರ್ಡ್ ನೀಡುವ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಮತ್ತೆ ಕೊರೊನಾ(Corona) ಎರಡನೇ ಅಲೆ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿರುವವರು ಹಾಗೂ ಅರ್ಜಿ ಸಲ್ಲಿಸಲು ಕಾಯುತ್ತಿರುವ ಅಭ್ಯರ್ಥಿಗಳು ಅನಿವಾರ್ಯವಾಗಿ ಮತ್ತಷ್ಟು ತಿಂಗಳು ಕಾಯವ ಸ್ಥಿತಿ ಬಂದಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದ್ದರೂ ಸದ್ಯಕ್ಕೆ ರೇಷನ್ ಕಾರ್ಡ್ ಸಿಗುವುದಿಲ್ಲ. ಸರ್ಕಾರ ಆದೇಶ ಹೊರಡಿಸಿದ ಬಳಿಕ ಅರ್ಜಿಗಳ ವಿಲೇ ಪ್ರಕ್ರಿಯೆ ಶುರುವಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

JOBS : ಬೆಂಗಳೂರು ರೂರಲ್ ಜಿ.ಪಂನಲ್ಲಿ ಉದ್ಯೋಗವಕಾಶ..!

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಕುಟುಂಬದವರಿಗೆ ವಿನಾಯಿತಿ ನೀಡಿದ್ದು, ಅಂಥವರಿಗೆ ತುರ್ತಾಗಿ ರೇಷನ್ ಕಾರ್ಡ್(Ration Card) ನೀಡಬೇಕೆಂದು ಆಹಾರ ನಿರೀಕ್ಷಕರಿಗೆ ಇಲಾಖೆ ಸೂಚಿಸಿದೆ. ಆದರೆ, ಪ್ರತಿ ತಿಂಗಳಿಗೆ ಆಯಾ ವ್ಯಾಪ್ತಿಯ ಆಹಾರ ಇಲಾಖೆಗೆ ಕಚೇರಿಗೆ ಇಂತಹ ಸಾವಿರಾರು ಅರ್ಜಿಗಳು ಸಲ್ಲಿಕೆಯಾದರೂ ಆಹಾರ ನಿರೀಕ್ಷಕರು ಅರ್ಜಿಗಳನ್ನು ವಿಲೇ ಮಾಡುತ್ತಿಲ್ಲ. ನಾವು ಬಡವರಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಕುಟುಂಬದ ಸದಸ್ಯರೊಬ್ಬರು ಬಳಲುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಇದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೇರಿ ಇನ್ನಿತರ ಸೌಲಭ್ಯಗಳು ಸಿಗುತ್ತವೆ. ಆದರೆ, ಅರ್ಜಿ ಸಲ್ಲಿಸಿ ವರ್ಷವಾದರೂ ಕಾರ್ಡ್ ಬಂದಿಲ್ಲ ಎಂದು ಅರ್ಜಿದಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಮತ್ತೆ ಹಳಿಗೆ ಮರಳಿದ Golden Chariot, 7 ದಿನಗಳಲ್ಲಿ ಇಡೀ ದಕ್ಷಿಣ ಭಾರತದ ಯಾತ್ರೆ

ರೇಷನ್ ಕಾರ್ಡ್‌ಗೆ ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್(Aadhar), ವಾರ್ಷಿಕ ಆದಾಯ ಮತ್ತು ವಾಸ ಸ್ಥಳ ದೃಢೀಕರಣ ಪತ್ರ ಕಡ್ಡಾಯ. ನಿಯಮ ಪ್ರಕಾರ ಎಲ್ಲ ದಾಖಲೆಗಳು ಸರಿ ಇದ್ದರೆ 15-20 ದಿನದೊಳಗೆ ಅರ್ಜಿದಾರರ ವಿಳಾಸಕ್ಕೆ ಕಾರ್ಡ್ ಪ್ರಿಂಟ್ ಆಗಿ ಅಂಚೆ ಮೂಲಕ ಬರಬೇಕು. ಆದರೆ, ಮೂರು ವರ್ಷವಾದರೂ ಅರ್ಜಿದಾರರಿಗೆ ಕಾರ್ಡ್ ಸಿಕ್ಕಿಲ್ಲ.

Siddaramaiah: ಮುಂದಿನ ವಿಧಾನಸಭಾ ಎಲೆಕ್ಷನ್ ಗೆ 'ಸಿದ್ದರಾಮಯ್ಯ ಸ್ಪರ್ಧೆ ಖಚಿತ'..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News