Mahashivaratri 2021: ಈ ಮಹಾ ಸಂಯೋಗದಲ್ಲಿ ಶಿವ ಪೂಜೆ ಮಾಡಿ

ಇಂದು ಮಹಾಶಿವರಾತ್ರಿ.  ಈ ದಿನ, ಶಿವನಿಗೆ ಹಾಲು ಮತ್ತು ನೀರಿನಿಂದ ಅಭಿಷೇಕ ಮಾಡಬೇಕು. ಅಲ್ಲದೆ ಬಿಲ್ವಪತ್ರೆಯನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ  ಭಕ್ತರ ಎಲ್ಲಾ ಆಸೆಗಳು ಈಡೇರುತ್ತದೆ ಎನ್ನಲಾಗಿದೆ.   

ನವದೆಹಲಿ: ಹಿಂದೂ ಪಂಚಾಂಗದ ಪ್ರಕಾರ, ಮಹಾಶಿವರಾತ್ರಿಯ (Mahashivaratri) ಹಬ್ಬವನ್ನು ಫಲ್ಗುನ ಮಾಸದ  ಕೃಷ್ಣ ಪಕ್ಷದ ಚತುರ್ದಶಿ ದಿನಾಂಕದಂದು ಆಚರಿಸಲಾಗುತ್ತದೆ.  ದಶಕಗಳ ನಂತರ ಮಹಾಶಿವರಾತ್ರಿಯ ಹಬ್ಬದಂದು, ಅನೇಕ ಸಂಯೋಗಗಳು ಗೋಚರಿಸಿವೆ. ಈ ಕಾರಣದಿಂದಾಗಿ ಹಬ್ಬದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಮಹಾಶಿವರಾತ್ರಿಯ ದಿನದಂದು ಮಕರ ರಾಶಿಯಲ್ಲಿ ಶನಿ, ಗುರು, ಬುಧ ಮತ್ತು ಚಂದ್ರ ಒಟ್ಟಿಗೆ 4 ದೊಡ್ಡ ಗ್ರಹಗಳು ಇರುತ್ತವೆ. ಎರಡನೆಯದ್ದು, ಮಹಾಶಿವರಾತ್ರಿಯ ದಿನದಂದು ಶಿವಯೋಗ, ಸಿದ್ಧಯೋಗ ಮತ್ತು ಧನಿಷ್ಠ ನಕ್ಷತ್ರಗಳ ಸಂಯೋಗ.  ಈ ಅಪರೂಪದ ಯೋಗದಲ್ಲಿ ಶಿವನನ್ನು ಆರಾಧಿಸುವುದರಿಂದ ಎಲ್ಲಾ ರೀತಿಯ ದೋಷಗಳು ನಿವಾರಣೆಯಾಗುತ್ತವೆ ಮತ್ತು ದುಃಖಗಳಿಂದಲೂ ಪರಿಹಾರ ಸಿಗುತ್ತದೆ. ಅಲ್ಲದೆ ಈ ದಿನ ರುದ್ರಭಿಷೇಕ ಮಾಡುವುದು ಶುಭವಾಗಿರುತ್ತದೆ. ಆದ್ದರಿಂದ, ಪೂಜೆಯ ಶುಭ ಸಮಯ ಯಾವುದು ಮತ್ತು ಪೂಜೆ  ಮತ್ತು ಉಪವಾಸವನ್ನು ಹೇಗೆ ಮಾಡಬೇಕು ಅನುಸರಿಸಬೇಕಾದ ನಿಯಮಗಳ ಬಗ್ಗೆ ತಿಳಿಯಿರಿ .  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಹಾಶಿವರಾತ್ರಿ ದಿನಾಂಕ - 11 ಮಾರ್ಚ್ 2021, ಗುರುವಾರ ಚತುರ್ದಶಿ ತಿಥಿ ಆರಂಭ -  11 ಮಾರ್ಚ್ 2021 ಮಧ್ಯಾಹ್ನ 2.39 ರಿಂದ ಚತುರ್ದಶಿ ದಿನಾಂಕ ಕೊನೆಗೊಳ್ಳುವುದು - 12 ಮಾರ್ಚ್ 2021 ಮಧ್ಯಾಹ್ನ 3.02 ಕ್ಕೆ ಪೂಜೆಯ ಅತ್ಯಂತ ಶುಭ ಸಮಯ- ರಾತ್ರಿ 12:06 ರಿಂದ 12:54 ರವರೆಗೆ.  ಮಹಾ ಶಿವರಾತ್ರಿ ಪಾರಣ  ಸಮಯ - ಮಾರ್ಚ್ 12 ಬೆಳಿಗ್ಗೆ 6.34 ರಿಂದ ಮಧ್ಯಾಹ್ನ 3.02 ರವರೆಗೆ  

2 /5

ಮೊದಲ ಪ್ರಹರ ಪೂಜಾ ಸಮಯ - ಸಂಜೆ 06:27 ರಿಂದ ರಾತ್ರಿ 09:28 ರವರೆಗೆ. ಎರಡನೇ ಪ್ರಹರ ಪೂಜಾ ಸಮಯ - ಮಾರ್ಚ್ 11 ರಂದು ರಾತ್ರಿ 09:28 ರಿಂದ ರಾತ್ರಿ 12.30 ರವರೆಗೆ ಮೂರನೇ ಪ್ರಹರ ಪೂಜಾ ಸಮಯ - ಮಾರ್ಚ್ 12 ರಂದು ಮಧ್ಯರಾತ್ರಿ  12:30 ರಿಂದ  03:32 ರವರೆಗೆ. ನಾಲ್ಕನೇ ಪ್ರಹರ ಪೂಜಾ ಸಮಯ - ಮಾರ್ಚ್ 12 03:32 ರಿಂದ 06:34 ರವರೆಗೆ.  

3 /5

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಶಿವ ಮತ್ತು ತಾಯಿ ಪಾರ್ವತಿಯ ವಿವಾಹ  ಮಹಾಶಿವರಾತ್ರಿ ದಿನದಂದು ನೆರವೇರಿತು.  ಈ ದಿನ, ಶಿವನ ಜೊತೆಗೆ ಪಾರ್ವತಿ ದೇವಿಯನ್ನು ಸಹ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಈ ದಿನ ಶಿವನ ಉಪವಾಸವನ್ನು ಆಚರಿಸುವವರಿಗೆ ಅದೃಷ್ಟ, ಸಮೃದ್ಧಿ ಒದಗುತ್ತದೆ ಎನ್ನುವುದು ನಂಬಿಕೆ,.  ಶಿವರಾತ್ರಿ ದಿನ ಉಪವಾಸ ವೃತಗಳನ್ನು ಆಚರಿಸಿದರೆ ಅನೇಕ ಫಲ ಸಿಗುತ್ತದೆ. ಶಿವನನ್ನು ಆದಿದೇವ್ ಎಂದೂ ಕರೆಯುತ್ತಾರೆ.  

4 /5

ಸೂರ್ಯೋದಯಕ್ಕೆ ಮುಂಚಿತವಾಗಿ ಸ್ನಾನ ಮಾಡಿ ಮತ್ತು ಭೋಲೆನಾಥನ  ಧ್ಯಾನ ಮಾಡಿ ಸಂಕಲ್ಪ ಮಾಡಿ. ನಂತರ, ಶಿವಲಿಂಗಕ್ಕೆ ಹಾಲು ಮತ್ತು ನೀರಿನಿಂದ ಅಭಿಷೇಕ ಮಾಡಿ,  ಬಿಲ್ವಪತ್ರೆ , ಧಾತುರಾ ಹೂವು, ಅಕ್ಷತೆ ಅರ್ಪಿಸಿ.   -ಶಿವಲಿಂಗದ ಮೇಲೆ ಬಿಲ್ವಪತ್ರೆ ಇರಿಸುವಾಗ, ಅದು ಮೂರು ಎಲೆಗಳನ್ನು ಹೊಂದಿರಬೇಕು ಮತ್ತು ಮೂರೂ ಎಲೆಗಳು ತುಂಡಾಗಿರಬಾರದು.  ಪತ್ರೆಯ ನಯವಾದ ಭಾಗವು ಶಿವಲಿಂಗವನ್ನು ಸ್ಪರ್ಶಿಸುವಂತೆ ಇಡಬೇಕು.   - ಶಿವಲಿಂಗಕ್ಕೆ ಅರ್ಪಿಸುವ ಅಕ್ಕಿ ಕೂಡಾ ಮುರಿದಿರಬಾರದು.   - ಬಿಲ್ವಪತ್ರೆಯನ್ನು ಅರ್ಪಿಸಿದ ನಂತರ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದನ್ನು ಮರೆಯಬೇಡಿ. ನಂತರ, ಶಿವಲಿಂಗಕ್ಕೆ ನೀರನ್ನು ಸಹ ಅರ್ಪಿಸಿ. - ಶಿವಲಿಂಗಕ್ಕೆ ಶಂಖದಿಂದ  ನೀರನ್ನು ಅರ್ಪಿಸಬೇಡಿ. ಅರಿಶಿನ, ಕುಂಕುಮ ಹಚ್ಚಬೇಡಿ. ಕೇವಲ ಶ್ರೀಗಂಧವನ್ನು ಹಚ್ಚಿರಿ. - ಶಿವ ಪುರಾಣವನ್ನು ಓದಿ ಮಹಾಮೃತುಂಜಯ ಮಂತ್ರ ಅಥವಾ ಶಿವನ ಮಂತ್ರ ಓಂ ನಮಃ ಶಿವಾಯವನ್ನು ಪಠಿಸಿ.

5 /5

ಮಹಾಶಿವರಾತ್ರಿಯ ಉಪವಾಸವನ್ನು ಮಾಡುತ್ತಿದ್ದರೆ, ದಿನವಿಡೀ ಫಲಾಹಾರವನ್ನು ಮಾತ್ರ ಸೇವಿಸಬೇಕು.  ಧಾನ್ಯಗಳು ಅಥವಾ ಉಪ್ಪನ್ನು ಸೇವಿಸಬೇಡಿ. ಆರೋಗ್ಯ ಸಂಬಂಧಿ ಕಾರಣಗಳಿಂದ ಉಪ್ಪು ತಿನ್ನುವುದು ಅನಿವಾರ್ಯವಾಗಿದ್ದರೆ ಕಲ್ಲು ಉಪ್ಪನ್ನು ಮಾತ್ರ ಸೇವಿಸಿ. ಶಿವರಾತ್ರಿ ವೃತ ಮಾಡುವ ವ್ಯಕ್ತಿ ಉಆವಯ್ದೇ ಕಾರಣಕ್ಕೂ ನಿದ್ರಿಸಬಾರದು.