ನವದೆಹಲಿ: Petrol Diesel Latest News - ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಹೌದು ಸರ್ಕಾರ ಬೈಕ್ ಹಾಗೂ ಕಾರುಗಳಲ್ಲಿ E20 (Ethanol Blend Petrol) ಪೆಟ್ರೋಲ್ ಬಳಕೆಗೆ ಅನುಮತಿ ನೀಡಿದೆ. ಇದರರ್ಥ ಈ ಪೆಟ್ರೋಲ್ ನಲ್ಲಿ ಶೇ.20ರಷ್ಟು ಇಥೆನಾಲ್ ಬಳಸಲಾಗಿರುತ್ತದೆ. ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾಲಯ E20 ಬಳಕೆಗೆ ನೋಟಿಫಿಕೇಶನ್ ಜಾರಿಗೊಳಿಸಿದೆ.
E20 Petrol ಬಳಕೆಗೆ ಅನುಮತಿ
E20 Petrol ಕುರಿತು ಹೇಳಿಕೆ ನೀಡಿರುವ ಸರ್ಕಾರ, ಈ ಪೆಟ್ರೋಲ್ ಬಳಕೆ ಪರಿಸರದ ದೃಷ್ಟಿಯಿಂದಲೂ ಕೂಡ ಉತ್ತಮವಾಗಿದೆ . ಏಕೆಂದರೆ ಇದರಲ್ಲಿ ಕಾರ್ಬೋನ್ ಮೊನಾಕ್ಸೈಡ್ ಹಾಗೂ ಹೈಡ್ರೋಕಾರ್ಬನ್ ಗಳು ಸಾಮಾನ್ಯ ಪೆಟ್ರೋಲ್ ನಲ್ಲಿರುವ ಮಟ್ಟಕ್ಕಿಂತ ತುಂಬಾ ಕಡಿಮೆ ಪ್ರಮಾಣದಲ್ಲಿ ಹೊರಬೀಳುತ್ತದೆ. ಆದರೆ ಈ ಪೆಟ್ರೋಲ್ ಬಳಕೆಗೆ ಯಾವ ವಾಹನ ಸೂಕ್ತ ಎಂಬುದನ್ನು ಕಾರ್ ಹಾಗೂ ಬೈಕ್ ತಯಾರಕರೇ ಸೂಚಿಸಬೇಕು ಮತ್ತು ಇದಕ್ಕಾಗಿ ವಾಹನಗಳ ಮೇಲೆ ಒಂದು ಸ್ಟಿಕ್ಕರ್ ಕೂಡ ಅಂಟಿಸಬೇಕು ಎಂದು ಸಚಿವಾಲಯ ಹೇಳಿದೆ.
E20 Petrol ಬಳಕೆಯ ಲಾಭಗಳೇನು?
2014ಕ್ಕೂ ಮೊದಲು ಪೆಟ್ರೋಲ್ (Petrol) ನಲ್ಲಿ ಶೇ.1 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಎಥೆನಾಲ್ ಬ್ಲೆಂಡ್ ಮಾಡಲಾಗುತ್ತಿತ್ತು ಅಂದರೆ ಬೇರೆಸಲಾಗುತ್ತಿತ್ತು. ಬಳಿಕ ಇದನ್ನು ಶೇ.8.5 ರಷ್ಟು ಹೆಚ್ಚಿಸಲಾಯಿತು. ಇದೀಗ ಪೆಟ್ರೋಲ್ ನಲ್ಲಿ ಶೇ.10ರಷ್ಟು ಎಥೆನಾಲ್ ಬೆರೆಸುವ ಗುರಿಹೊಂದಲಾಗಿದೆ. ಪೆಟ್ರೋಲ್ ನಲ್ಲಿ ಇಥೆನಾಲ್ ಸೇರಿಸುವ ಹಲವು ಲಾಭಗಳಿವೆ.
- ಮೊದಲನೆಯದಾಗಿ ಪೆಟ್ರೋಲಿಯಂ ಮೇಲೆ ಭಾರತದ ಅವಲಂಬನೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಪ್ರಸ್ತುತ ಭಾರತ ತನಗೆ ಅವಶ್ಯವಿರುವ ಶೇ.83 ರಷ್ಟು ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.
- ಕಾರ್ಬನ್ ಡೈಆಕ್ಸೈಡ್ ಕಡಿಮೆ ಹೊರಸೂಸುವಿಕೆಯಿಂದ ವಾತಾವರಣ ದೃಷ್ಟಿಯಿಂದಲೂ ಕೂಡ ಇದು ಉಪಯುಕ್ತವಾಗಿದೆ.
- ಎಥೆನಾಲ್ ಬಳಕೆಯಿಂದ ರೈತರಿಗೂ ಕೂಡ ಲಾಭವಾಗಲಿದೆ. ಅವರ ಆದಾಯದಲ್ಲಿ ಹೆಚ್ಚಳವಾಗಲಿದೆ. ಏಕೆಂದರೆ ಎಥೆನಾಲ್ ಅನ್ನು ಕಬ್ಬು, ಮೆಕ್ಕೆಜೋಳ ಹಾಗೂ ಇತರ ಬೆಳೆಗಳಿಂದ ತಯಾರಿಸಲಾಗುತ್ತದೆ.
- ಸಕ್ಕರೆ ಕಾರ್ಖಾನೆಗಳಿಗೆ ಹಣ ಗಳಿಕೆಗೆ ಮತ್ತೊಂದು ಪರ್ಯಾಯ ದೊರೆಯಲಿದೆ. ಇದರಿಂದ ಅವರು ತಮ್ಮ ಬಾಕಿ ಸಾಲದ ಹಣವನ್ನು ಬೇಗ ಪಾವತಿಸಬಹುದು.
- ಇದು ತುಂಬಾ ಅಗ್ಗದ ಬೆಲೆಯಲ್ಲಿ ದೊರೆಯುವ ಕಾರಣ ದಿನದಿಂದ ದಿನಕ್ಕೆ ಗಗನ ಮುಖಿಯಾಗುತ್ತಿರುವ ಪೆಟ್ರೋಲ್-ಡಿಸೇಲ್ ಬೆಲೆ (Petrol-Disel Price)ಏರಿಕೆಯಿಂದಲೂ ಕೂಡ ಗ್ರಾಹಕರಿಗೆ ನೆಮ್ಮದಿ ಸಿಗಲಿದೆ.
ಇದನ್ನೂ ಓದಿ- RBI ಗವರ್ನರ್ ಸಲಹೆ, ಈಗಲಾದರೂ ಅಗ್ಗವಾಗಲಿದೆಯೇ Petrol-Diesel
2025ರವರೆಗೆ ಶೇ.20ರಷ್ಟು ಎಥೆನಾಲ್ ಬೆರೆಸಲು ಗುರಿ
ಇದಕ್ಕೂ ಮೊದಲು ಸರ್ಕಾರ 2030ರವರೆಗೆ ಪೆಟ್ರೋಲ್ ನಲ್ಲಿ ಶೇ.20 ರಷ್ಟು ಎಥೆನಾಲ್ ಬೆರೆಸುವ ಗುರಿ ಹೊಂದಿತ್ತು. ಆದರೆ ಈ ಗುರಿಯನ್ನು ಇದೀಗ ಐದು ವರ್ಷ ಮುಂಚಿತವಾಗಿ ಸಾಧಿಸುವ ಯೋಜನೆಯನ್ನು ಸರ್ಕಾರ ಸೂಪಿಸಿದೆ. ಕಳೆದ ವರ್ಷ ಸರ್ಕಾರ 2022ರವರೆಗೆ ಪೆಟ್ರೋಲ್ ನಲ್ಲಿ ಶೇ.10 ಎಥೆನಾಲ್ ಬೆರಸುವ ಗುರಿ ನಿಗದಿಪಡಿಸಿತ್ತು. ಪ್ರಸ್ತುತ ಶೇ.8.5 ರಷ್ಟು ಎಥೆನಾಲ್ ಅನ್ನು ಪೆಟ್ರೋಲ್ ಗೆ ಬೆರೆಸಲಾಗುತ್ತಿದೆ.
ಇದನ್ನೂ ಓದಿ- ಯಾವಾಗ ಇಳಿಕೆಯಾಗಲಿದೆ Petrol-Diesel? ವಿತ್ತ ಸಚಿವರ ಪ್ಲಾನ್ ಏನು?
ಈ ಕುರಿತು ಸರ್ಕಾರ ಹೊರಡಿಸಿರುವ ಹೇಳಿಕೆ ಪರಕಾರ, 2025ರವರೆಗೆ ಶೇ.20 ರಷ್ಟು ಎಥೆನಾಲ್ ಬ್ಲೆಂಡಿಂಗ್ ಗಾಗಿ 1200 ಕೋಟಿ ಲೀಟರ್ ಅಲ್ಕೋಹಾಲ್/ಎಥೆನಾಲ್ ಅವಶ್ಯಕತೆ ಇದೆ. 700 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸಲು ಸಕ್ಕರೆ ಕಾರ್ಖಾನೆಗಳು 60 ಲಕ್ಷ ಟನ್ ಸರ್ಪ್ಲೇಸ್ ಸಕ್ಕರೆ ಬಳಕೆ ಮಾಡಬೇಕಾಗಲಿದೆ. ಉಳಿದ 500 ಕೋಟಿ ಲೀಟರ್ ಎಥೆನಾಲ್ ಅನ್ನು ಉಳಿದ ಬೆಳೆಗಳಿಂದ ಉತ್ಪಾದಿಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ-Petrol, Diesel rate ದುಬಾರಿ ದುನಿಯಾ..! ಶತಕ ಸಿಡಿಸಲಿದೆ ಪೆಟ್ರೋಲ್, ರಾಜಸ್ತಾನದ ಗಂಗಾನಗರದಲ್ಲಿ 99.22 ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.