ನವದೆಹಲಿ : Chadra Shekhar Azad News - 'ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಝಾದ್ ಹತ್ಯೆಯಲ್ಲಿ ಜವಾಹರಲಾಲ್ ನೆಹರು ಕಾರಣರಾಗಿದ್ದರು'. ಹೀಗಂತ ನಾವು ಹೇಳುತ್ತಿಲ್ಲ. ರಾಜಸ್ಥಾನದ ಓರ್ವ ಬಿಜೆಪಿ ಶಾಸಕ ದೇಶದ ಮೊಟ್ಟಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು (Jawaharalal Nehru) ಅವರ ಕುರಿತು ವಿವಾದಾತ್ಮಕ ಟಿಪ್ಪಣಿಯೊಂದನ್ನು ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಝಾದ್ (Chandra Shekhar Azad) ಅವರ ಹತ್ಯೆಗೆ ಜವಾಹರಲಾಲ್ ನೆಹರು ಕಾರಣಿಭೂತರಾಗಿದ್ದರು ಎಂದಿದ್ದಾರೆ. ಈ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಮದನ್ ದಿಲಾವರ್ (Madan Dilawar)ರಾಜ್ಯದ ಮಹಾಮಂತ್ರಿ ಕೂಡ ಆಗಿದ್ದರು ಎಂಬುದು ಇಲ್ಲಿ ಉಲ್ಲೆಖನೀಯ. ದಿಲಾವರ್ ಭಾನುವಾರ ಪ್ರದೇಶದ ರಾಜ್ ಸಮಂದ್ ನಲ್ಲಿ ಆಯೋಜಿಸಲಾಗಿದ್ದ ಪಕ್ಷದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಪಂಡಿತ್ ಜವಾಹರಲಾಲ್ ನೆಹರು (Jawaharalal Nehru News) ಅವರು ಬ್ರಿಟಿಷರ ಜೊತೆ ಸೇರಿ ಚಂದ್ರಶೇಖರ್ ಆಝಾದ್ ಅವರನ್ನು ಹತ್ಯೆಗೈಯ್ಯಿಸಿದ್ದರು. ಅಷ್ಟೇ ಅಲ್ಲ ಸಾವಿಗೂ ಮುನ್ನ ಆಝಾದ್, ಜವಾಹರಲಾಲ್ ನೆಹರು ಅವರನ್ನು ಭೇಟಿ ಕೂಡ ಆಗಿದ್ದರು ಎಂದು ದಿಲಾವರ್ (Madan Dilawar News) ಹೇಳಿದ್ದಾರೆ.
ಇದನ್ನೂ ಓದಿ- ತಮ್ಮ ನಂತರ ಇಂದಿರಾ ಬದಲು ಜೆಪಿ ಅವರನ್ನು ಪ್ರಧಾನಿ ಮಾಡಲು ಬಯಸಿದ್ದ ನೆಹರು...!
ಇದಾದ ಬಳಿಕ ಆಝಾದ್ ಅಲ್ಫ್ರೆಡ್ ಪಾರ್ಕ್ ನಲ್ಲಿರುವುದು ಜವಾಹರಲಾಲ್ ನೆಹರು (Jawaharlal Nehru) ಅವರಿಗೆ ತಿಳಿದಿತ್ತು ಹಾಗೂ ಅವರು ಈ ಮಾಹಿತಿಯನ್ನು ಬ್ರಿಟಿಷರವರೆಗೆ ತಲುಪಿಸಿದ್ದರು ಎಂದು ದಿಲಾವರ್ ಹೇಳಿದ್ದಾರೆ. ನಂತರ ಬ್ರಿಟೀಷ್ ಸಿಪಾಯಿಗಳು ಅಲ್ಫ್ರೆಡ್ ಪಾರ್ಕ್ ಅನ್ನು ಸುತ್ತುವರೆದು ಚಂದ್ರಶೇಖರ್ ಆಝಾದ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಬ್ರಿಟೀಷರ ಕೈಯಲ್ಲಿ ಸಾವನ್ನಪ್ಪುವ ಬದಲು ಸ್ವತಃ ತಾವೇ ಗುಂಡಿಕ್ಕಿಕೊಂಡು ಆಝಾದ್ ತಮ್ಮ ಹುತಾತ್ಮರಾದರು. ಮದನ್ ಲಾಲ್ ದಿಲಾವರ್ ರಾಜಸ್ಥಾನದ ವರಿಷ್ಠ ಮುಖಂಡರಲ್ಲಿ ಒಬ್ಬರಾಗಿದ್ದಾರೆ ಮತ್ತು ಬಿಜೆಪಿ ಅವರನ್ನು ರಾಜ್ಯದ ಮಹಾಮಂತ್ರಿಯ ಜವಾಬ್ದಾರಿ ನೀಡಿದೆ. ಆದರೆ, ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡುವುದು ದಿಲಾವರ್ ಗೆ ಹೊಸದಲ್ಲ. ಈ ಮೊದಲು ಕೂಡ ಅವರು ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ-ಆತ್ಮ ನಿರ್ಭರ ಎಂದರೇನು? ಈ ಪರಿಭಾಷೆಯನ್ನು ಈ ಮೊದಲು ಬಳಸಿದವರು ಯಾರು ಗೊತ್ತೇ ?
ದೇಶದ ಮೊಟ್ಟಮೊದಲ ಪ್ರಧಾನ ಮಂತ್ರಿಯ ಕುರಿತು ದಿಲಾವರ್ ನೀಡಿರುವ ಈ ಹೇಳಿಕೆಯಿಂದ ಭಾರಿ ವಿವಾದ ಸೃಷ್ಟಿಯಾಗುವ ಸಾಧ್ಯತೆ ಇದೆ. ಚಂದ್ರಶೇಖರ್ ಆಝಾದ್ ಅವರ ಬಲಿದಾನವನ್ನು ನೆಹರು ಹೆಸರಿನ ಜೊತೆಗೆ ತೊಡಕು ಹಾಕುವ ಇದು ಮೊದಲನೇ ಘಟನೆಯಾಗಿದೆ. ಈ ಮೊದಲು ಯಾರೂ ಈ ರೀತಿಯ ಆರೋಪ ಮಾಡಿರಲಿಲ್ಲ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ದಿಲಾವರ್ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ. ಹಲವು ಬಾರಿ ಬಿಜೆಪಿ ಮುಖಂಡರು ಜವಾಹರಲಾಲ್ ನೆಹರು ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಇಂತಹುದರಲ್ಲಿ ಮದನ್ ದಿಲಾವರ್ ಕೂಡ ತಮ್ಮ ಈ ಹೇಳಿಕೆಯಿಂದ ತೊಂದರೆಗೆ ಸಿಲುಕುವ ಎಲ್ಲಾ ಸಾಧ್ಯತೆಗಳಿವೆ.
ಇದನ್ನೂ ಓದಿ-ಯೆಸ್ ಬ್ಯಾಂಕ್ ಬಗ್ಗೆ ನೆಹರು ಮಾಡಿದ ಈ ಟ್ವೀಟ್ ಭಾರಿ ವೈರಲ್...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.