Government insurance company news: ಸರ್ಕಾರ ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿ (The Oriental Insurance Company) ಅಥವಾ ಯುನೈಟೆಡ್ ಇಂಡಿಯಾ ಇನ್ಸುರೆನ್ಚೆ (United India Insurance Company) ಕಂಪನಿಗಳ ಖಾಸಗೀಕರಣದ (Privatisation) ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಏಕೆಂದರೆ ಬಂಡವಾಳ ಹೂಡಿಕೆಯ ಘೋಷಣೆ ಮಾಡಿದ ನಂತರ ಅವುಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ವಿಷಯಕ್ಕೆ ಸಂಬಂಧಿಸಿದ ತಜ್ಞರು ಮಾಹಿತಿ ನೀಡಿದ್ದಾರೆ. ಪಿಟಿಐನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಸರ್ಕಾರ ಸಾರ್ವಜನಿಕ ಕ್ಷೇತ್ರದ ವಿಮಾ ಕಂಪನಿಗಳ ಆರ್ಥಿಕ ಸ್ಥಿತಿಗಳನ್ನು ಮತ್ತಷ್ಟು ಉತ್ತಮಗೊಳಿಸಲು ಚಾಲ್ತಿಯಲ್ಲಿರುವ ತ್ರೈಮಾಸಿಕದಲ್ಲಿಯೇ ಹೆಚ್ಚುವರಿ ಮೂರು ಸಾವಿರ ಬಂಡವಾಳ ಹೂಡಿಕೆ ಮಾಡುವುದಾಗಿ ಹೇಳಿದೆ.
ಖಾಸಗಿ ಸೆಕ್ಟರ್ ಗಳ ಆಸಕ್ತಿ ಹೆಚ್ಚಾಗಲಿದೆ (Private sector interest will increase)
ವರದಿಗಳ ಪ್ರಕಾರ ಓರಿಯೆಂಟಲ್ ಇನ್ಸುರೆನ್ಸ್ ಹಾಗೂ ಚೆನ್ನೈನಲ್ಲಿರುವ ಯುನೈಟೆಡ್ ಇನ್ಸುರೆನ್ಸ್ ಎರಡು ಕಂಪನಿಗಳು ತಮ್ಮ ಉತ್ತಮ ಆರ್ಥಿಕ ಸ್ಥಿತಿಯ ಕಾರಣ ಸಾರ್ವಜನಿಕ ಕ್ಷೇತ್ರದಲ್ಲಿ ಆಸಕ್ತಿಗಿಟ್ಟಿಸಲು ಸಾಮರ್ಥ್ಯ ಹೊಂದಿವೆ. ಮೂಲಗಳ ಪ್ರಕಾರ ಖಾಸಗೀಕರಣಕಾಗಿ ಒಂದು ಉಪಯುಕ್ತ ಕಂಪನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ.
ಸರ್ಕಾರ ಶೇ.85.44 ರಷ್ಟು ಪಾಲುದಾರಿಕೆ ಹೊಂದಿದೆ (Government holds 85.44 percent stake)
ಪ್ರಕ್ರಿಯೆಯ ಅಡಿ ಇದನ್ನು ನಿರ್ಧರಿಸಲು ಸ್ವಲ್ಪ ಸಮಯಾವಕಾಶ ಬೇಕಾಗಲಿದೆ. ಈ ಕುರಿತು ಹೇಳಿಕೆ ನೀಡಿರುವ ತಜ್ಞರು ನ್ಯೂ ಇಂಡಿಯಾ ಎಷ್ಯೋರನ್ಸ್ ಕಂಪನಿಯ ಆಯ್ಕೆಯ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ ಎಂದಿದ್ದಾರೆ. ನ್ಯೂ ಇಂಡಿಯಾ ಎಷ್ಯೋರೆನ್ಸ್ ನಲ್ಲಿ ಸರ್ಕಾರ ಶೇ.85.44 ರಷ್ಟು ಪಾಲುದಾರಿಕೆ ಹೊಂದಿದೆ.
ಇದನ್ನೂ ಓದಿ-150 ರೈಲು ಮತ್ತು 50 ರೈಲ್ವೆ ನಿಲ್ದಾಣಗಳನ್ನು ಖಾಸಗೀಕರಣಕ್ಕೆ ಒಳಪಡಿಸಲು ಕೇಂದ್ರ ನಿರ್ಧಾರ
ಬಜೆಟ್ ನಲ್ಲಿ ಈ ಘೋಷಣೆ ಮಾಡಲಾಗಿತ್ತು (It was announced in the budget)
ಯೋಜನೆಯ ಪ್ರಕಾರ ಈ ವಿಮಾ ಕಂಪನಿಗಳ ಖಾಸಗೀಕರಣಕ್ಕಾಗಿ ನೀತಿ ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದ್ದು, ಕೇಂದ್ರ ಹಣಕಾಸು ಸಚಿವಾಲಯದ ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣೆ ವಿಭಾಗ ಈ ಪ್ರಸ್ತಾವನೆಯ ಕುರಿತು ನಿರ್ಣಯ ಕೈಗೊಳ್ಳಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಈ ಕುರಿತು ಬಜೆಟ್ 2021-22 ರಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್ ಹಾಗೂ ಒಂದು ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣದ ಕುರಿತು ಘೋಷಣೆ ಮಾಡಿದ್ದರು.
ಇದನ್ನೂ ಓದಿ - ಏರ್ ಇಂಡಿಯಾ ಸಂಪೂರ್ಣ ಖಾಸಗೀಕರಣಗೊಳಿಸಲು ಸರ್ಕಾರ ಬದ್ದ -ಹರ್ದೀಪ್ ಸಿಂಗ್ ಪುರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.