LPG Connection: ಸರ್ಕಾರ ಉಚಿತವಾಗಿ ಕೊಡುತ್ತೆ LPG ಕನೆಕ್ಷನ್ ಹಾಗೂ 1600 ರೂ. ನೀವೂ ಕೂಡ ಹೀಗೆ ಪಡೆದುಕೊಳ್ಳಿ

LPG Connection: ಫೆಬ್ರವರಿ 1 ರಂದು ಮಂಡಿಸಿದ ಬಜೆಟ್‌ನಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಉಜ್ವಲಾ (Ujjwala Yojana)ಯೋಜನೆಯಡಿ ಮತ್ತೆ 1 ಕೋಟಿ ಗೃಹಿಣಿಯರಿಗೆ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸುವುದಾಗಿ ಘೋಷಿಸಿದ್ದಾರೆ.

  • Feb 02, 2021, 17:45 PM IST

LPG Connection: ಫೆಬ್ರವರಿ 1 ರಂದು ಮಂಡಿಸಿದ ಬಜೆಟ್‌ನಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಉಜ್ವಲಾ ಯೋಜನೆಯಡಿ ಮತ್ತೆ 1 ಕೋಟಿ ಗೃಹಿಣಿಯರಿಗೆ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸುವುದಾಗಿ ಘೋಷಿಸಿದ್ದಾರೆ. ಉಚಿತ ಅಡುಗೆ ಅನಿಲ ಎಲ್‌ಪಿಜಿ ಯೋಜನೆ (Ujjwala) ವಿಸ್ತರಿಸಲಾಗುವುದು ಮತ್ತು ಇನ್ನೂ ಒಂದು ಕೋಟಿ ಫಲಾನುಭವಿಗಳನ್ನು ಅದರ ವ್ಯಾಪ್ತಿಗೆ ತರಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಉಜ್ವಾಲಾ ಯೋಜನೆಯ (Ujjwala Yojana) ಅಡಿ 2011 ರ ಜನಗಣತಿಯ ಪ್ರಕಾರ, ಬಿಪಿಎಲ್ ವಿಭಾಗದಲ್ಲಿ ಸೇರುವ ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆಯಬಹುದು.

 

ಇದನ್ನು ಓದಿ- Budget 2021: Ujjwala Yojana ಕುರಿತು ವಿತ್ತ ಸಚಿವರಿಂದ ಮಹತ್ವದ ಘೋಷಣೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಶೀಘ್ರದಲ್ಲೇ ಒಂದು ಕೋಟಿ ಮಹಿಳೆಯರು ಉಜ್ವಾಲಾ ಯೋಜನೆಯ ಲಾಭವನ್ನು ಪಡೆಯಬಹುದು. ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ದೇಶೀಯ ಎಲ್‌ಪಿಜಿ (LPG Connection) ಸಂಪರ್ಕವನ್ನು ಒದಗಿಸುತ್ತದೆ. ಈ ಉಜ್ವಾಲಾ ಯೋಜನೆಯಡಿ ಒಟ್ಟು 8 ಕೋಟಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ.

2 /4

ಉಜ್ವಲಾ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೂ ಭಾರತ ಸರ್ಕಾರ 1600 ರೂ.ಗಳ ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವು ಎಲ್ಪಿಜಿ ಅನಿಲ ಸಂಪರ್ಕವನ್ನು ಖರೀದಿಸಲು ಇರುತ್ತದೆ. ಇದರೊಂದಿಗೆ, ಒಲೆ ಖರೀದಿಸಲು ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು ಮೊದಲ ಬಾರಿಗೆ ಭರ್ತಿ ಮಾಡಲು ಆಗುವ ಖರ್ಚನ್ನು ಸರಿದೂಗಿಸಲು ಕಂತು (EMI) ಸಹ ಇದು ಒಳಗೊಂಡಿರುತ್ತದೆ.

3 /4

ಇಂದಿಗೂ ಕೂಡ ಹಳ್ಳಿಗಳಲ್ಲಿನ ಲಕ್ಷಾಂತರ ಮಹಿಳೆಯರು ಕಟ್ಟಿಗೆ ಹಾಗೂ ಸಗಣಿಯ ಕುಳ್ಳಿನ ಮೇಲೆ  ಆಹಾರವನ್ನು ಬೇಯಿಸುತ್ತಾರೆ, ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉಜ್ವಾಲಾ ಯೋಜನೆಯಡಿ ಅನಿಲ ಸಂಪರ್ಕ ಪಡೆಯಲು ಬಿಪಿಎಲ್ ಕುಟುಂಬದ ಮಹಿಳೆ ಮಾತ್ರ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ಕೆವೈಸಿ ಫಾರ್ಮ್ ಅನ್ನು ಭರ್ತಿ ಮಾಡಿ ಹತ್ತಿರದ ಎಲ್ಪಿಜಿ ಕೇಂದ್ರಕ್ಕೆ ನೀಡಬೇಕು.  ಅರ್ಜಿ ಸಲ್ಲಿಸುವಾಗ, ನೀವು 14.2 ಕೆಜಿ ಸಿಲಿಂಡರ್ ಅಥವಾ 5 ಕೆಜಿ ತೆಗೆದುಕೊಳ್ಳಬೇಕೆ ಎಂದು ಸಹ ಹೇಳಬೇಕು. ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆಯ ವೆಬ್‌ಸೈಟ್‌ನಿಂದ ನೀವು ಉಜ್ವಾಲಾ ಯೋಜನೆಯ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಇದು ಎಲ್‌ಪಿಜಿ ಕೇಂದ್ರದಲ್ಲಿಯೂ ಕೂಡ ಲಭ್ಯವಿರುತ್ತದೆ.

4 /4

ಉಜ್ವಲಾ ಜೋಜನೆಯ ಅಡಿ ಕನೆಕ್ಷನ್ ಪಡೆಯಲು ಬಿಪಿಎಲ್ ರೇಷನ್ ಕಾರ್ಡ್(BPL Ration Card), ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಫೋಟೋ, ರೇಷನ್ ಕಾರ್ಡ್ ನಕಲು, ಗೆಜೆಟೆಡ್ ಅಧಿಕಾರಿ ಪರಿಶೀಲಿಸಿದ ಸ್ವಯಂ ಘೋಷಣೆ ಪತ್ರ, ಎಲ್ಐಸಿ ಪಾಲಸಿ, ಬ್ಯಾಂಕ್ ಸ್ಟೇಟ್ಮೆಂಟ್ ಇತ್ಯಾದಿ ದಾಖಲೆಗಳ ಆವಶ್ಯಕತೆ ಇದೆ.