Whatsapp Privacy Policy: ಕೆಟ್ಟ ಮೇಲೆ ಬುದ್ದಿ ಕಲಿತ ವಾಟ್ಸ್ ಆಪ್, ಸದ್ಯಕ್ಕಿಲ್ಲ ಗೌಪ್ಯತಾ ನೀತಿ

ಜನಪ್ರಿಯ ಮೆಸೆಂಜರ್ ಆಪ್ ವಾಟ್ಸ್ ಆಪ್ ಗೆ (WhatsApp) ಕೆಟ್ಟ ಮೇಲೆ ಬುದ್ದಿ ಬಂದಿದೆ. ಯಡವಟ್ಟಾದ ಮೇಲೆ ಸರಿದಾರಿಗೆ ಬಂದಿದೆ.

Written by - Ranjitha R K | Last Updated : Jan 16, 2021, 01:34 PM IST
  • ಗೋಪ್ಯತಾ ನೀತಿ ಅನುಷ್ಠಾನದಿಂದ ಹಿಂದೆ ಸರಿದ ವಾಟ್ಸ್ ಆಪ್
  • ಪ್ರೈವೆಸಿ ಪಾಲಿಸಿ ಒಪ್ಪದಿದ್ದರೂ ಫೆ. 8ರ ಬಳಿಕವೂ ನಿಮ್ಮ ವಾಟ್ಸ್ ಆಪ್ ಖಾತೆ ಮುಂದುವರಿಕೆ
  • ವದಂತಿಗಳ ವಿರುದ್ಧ ಜಾಗೃತಿಗೆ ವಾಟ್ಸ್ ಆಪ್ ಹೊಸ ಅಭಿಯಾನ
Whatsapp Privacy Policy: ಕೆಟ್ಟ ಮೇಲೆ ಬುದ್ದಿ ಕಲಿತ ವಾಟ್ಸ್ ಆಪ್, ಸದ್ಯಕ್ಕಿಲ್ಲ  ಗೌಪ್ಯತಾ ನೀತಿ  title=
ಗೋಪ್ಯತಾ ನೀತಿ ಅನುಷ್ಠಾನದಿಂದ ಹಿಂದೆ ಸರಿದ ವಾಟ್ಸ್ ಆಪ್

ನವದೆಹಲಿ : ಜನಪ್ರಿಯ ಮೆಸೆಂಜರ್ ಆಪ್ ವಾಟ್ಸ್ ಆಪ್ ಗೆ (WhatsApp) ಕೆಟ್ಟ ಮೇಲೆ ಬುದ್ದಿ ಬಂದಿದೆ. ಯಡವಟ್ಟಾದ ಮೇಲೆ ಸರಿದಾರಿಗೆ ಬಂದಿದೆ. ತುಂಬಾ ವಿವಾದಕ್ಕೆ ಕಾರಣವಾಗಿದ್ದ ಗೋಪ್ಯತಾ ನೀತಿಯ (Privacy Policy) ಅನುಷ್ಠಾನ ಸದ್ಯಕ್ಕಿಲ್ಲ ಎಂದು ಸ್ಪಷ್ಟ ಪಡಿಸಿದೆ. 

ಬಳಕೆದಾರರ ಕೋಪಕ್ಕೆ ವಾಟ್ಸ್ ಆಪ್ (WhatsApp) ತತ್ತರಿಸಿ ಹೋಗಿದೆ.   ಈಗ ಇಟ್ಟ ಹೆಜ್ಜೆಯಿಂದ ಹಿಂದೆ ಸರಿದಿದೆ. ಪ್ರೈವೆಸಿ ಪಾಲಿಸಿ (Privacy Policy) ಸದ್ಯಕ್ಕೆ ವಾಪಸ್ ಪಡೆಯುವುದಾಗಿ ಪ್ರಕಟಿಸಿದೆ.  ಗೋಪ್ಯತಾ ನಿಯಮ ಅನುಷ್ಠಾನವನ್ನು 3 ತಿಂಗಳು ತಡೆ ಹಿಡಿದಿದೆ. 

ವಾಟ್ಸ್ ಅಪ್ ಕೊಟ್ಟ ಸ್ಪಷ್ಟನೆ ಏನು..
ವದಂತಿಗಳಿಗೆ ಕಿವಿಗೊಡಬೇಡಿ. ವದಂತಿಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಗೋಪ್ಯತೆ ನೀತಿಯಿಂದ ಹಿಂದೆ ಸರಿಯುತ್ತಿದ್ದೇವೆ. ವಾಟ್ಸ್ ಆಪ್ ಬಳಕೆದಾರರ ಖಾತೆ ಬಂದ್ ಆಗುವುದಿಲ್ಲ. ಪ್ರೈವೈಸಿ ಪಾಲಿಸಿ ಒಪ್ಪದಿದ್ದರೂ ಫೆ. 8ರ ಬಳಿಕವೂ ನಿಮ್ಮ ವಾಟ್ಸ್ ಆಪ್ ಖಾತೆ ಮುಂದುವರಿಯುತ್ತದೆ ಎಂದು ಅದು ಸ್ಪಷ್ಟ ಪಡಿಸಿದೆ. ಲಭ್ಯ ಮಾಹಿತಿಗಳ ಪ್ರಕಾರ ತನ್ನ ವಿರುದ್ಧ ಹರಡುತ್ತಿರುವ ವದಂತಿಗಳ ವಿರುದ್ಧ ಜಾಗೃತಿಗೆ ವಾಟ್ಸ್ ಆಪ್ ಅಭಿಯಾನ ಶುರು ಮಾಡಲಿದೆ.  ಹೊಸ ಪ್ರವೈಸಿ ಪಾಲಿಸಿ ಪರಿಶೀಲನೆಗೆ ಬಳಕೆದಾರರಿಗೆ ಸಾಕಷ್ಟು ಸಮಯ ನೀಡಲಿದೆ. 

ಇದನ್ನೂ ಓದಿ : Signal App Down: ಒಂದೇ ರಾತ್ರಿಯಲ್ಲಿ ಖ್ಯಾತಿ ಪಡೆದು ಸಿಗ್ನಲ್ ಕಳೆದುಕೊಂಡ Signal

ವಾಟ್ಸ್ ಅಪ್ ತಂದಿದ್ದ ಹೊಸ ಪ್ರೈವೆಸಿ ಪಾಲಿಸಿ ಪ್ರಕಾರ ಬಳಕೆದಾರರ ಡಾಟಾವನ್ನು (Data) ವಾಟ್ಸ್ ಆಫ್ ಮತ್ತು ಅದರ ಸಹೋದರ ಕಂಪನಿಗಳು ಬಳಸಬಹುದಾಗಿದೆ.  ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.   ಬಳಕೆದಾರರು ವಾಟ್ಸ್ ಆಪ್ ಮೆಸೆಂಜಿಂಗ್ ಫ್ಲಾಟ್ ಫಾರಂ (Messaging Platform) ಬಿಟ್ಟು ಸಿಗ್ನಲ್ (Signal) ಟೆಲಿಗ್ರಾಂ (Telegram) ನಂತಹ ಮೆಸೆಂಜರ್ ಅಪ್ ಗಳತ್ತ ಮುಖ ಮಾಡಿದ್ದರು. ಕಳೆದ ಹತ್ತು ದಿನಗಳಲ್ಲಿ ಸುಮಾರು 50 ಕೋಟಿ ಬಳಕೆದಾರರು ಸಿಗ್ನಲ್  ಮತ್ತು ಟೆಲಿಗ್ರಾಂ ಆಪ್ ಗಳನ್ನು ಡೌನ್ ಲೋಡ್ (download) ಮಾಡಿಕೊಂಡಿದ್ದರು.  ದೊಡ್ಡ ಕಂಪನಿಗಳು ಕೂಡಾ ವಾಟ್ಸ್ ಆಪ್ ಗ್ರೂಪ್ ಬಿಟ್ಟು ಸಿಗ್ನಲ್ ಅಥವಾ ಟೆಲಿಗ್ರಾಂ ಗ್ರೂಪ್ ಸೃಷ್ಟಿಸಿಕೊಳ್ಳುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ : Earth Rotation Video: ಭೂಮಿ ತಿರುಗುವಿಕೆಯನ್ನು ನೀವು ನೋಡಿದ್ದಿರಾ? ಇಲ್ಲಿದೆ ರೋಮಾಂಚಕ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News