Earth Rotation Video- ನವದೆಹಲಿ: ಭೂಮಿ ತಿರುಗುವಿಕೆಯ ಭಾಸ ಎಂದಾದರೋ ಆದರೆ ಅದು ಹೇಗಿರಲಿದೆ ಎಂದು ಒಂದೊಮ್ಮೆ ಯೋಚಿಸಿ ನೋಡಿ. ಆಸ್ಟ್ರೋಫೋಟೋಗ್ರಾಫರ್ (Astrophotographer) ಒಬ್ಬರು ಈ ಅನುಭವವನ್ನು ನಮಗೆ ನೀಡಿದ್ದಾರೆ. ಆರ್ಯಾ ನಿರೇನ್ಬರ್ಗ್ (Aryah Nirenberg) ಹೆಸರಿನ ಆಸ್ಟ್ರೋಫೋಟೋಗ್ರಾಫರ್ ಕಷ್ಟಪಟ್ಟು ಈ ವಿಡಿಯೋ ಅನ್ನು ಸಿದ್ಧಪಡಿಸಿದ್ದಾರೆ. ಈ ವಿಡಿಯೋದಲ್ಲಿ ಭೂಮಿ ಹೇಗೆ ಸುತ್ತುತ್ತದೆ ಎಂಬುದನ್ನು ನೀವು ನೋಡಬಹುದು. ಈ ವಿಡಿಯೋ ಅನ್ನು ಖ್ಯಾತ ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಹಂಚಿಕೊಂಡಿದ್ದಾರೆ.
ವಿಡಿಯೋ ಹಂಚಿಕೊಂಡ ರಿತೇಶ್ ದೇಶ್ಮುಖ್
ಈ ವಿಡಿಯೋ ಅನ್ನು ಖ್ಯಾತ ಬಾಲಿವುಡ್ ನಟ ರಿತೇಶ್ ದೇಶ್ಮುಖ್ (Ritesh Deshmukh) ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಜೊತೆಗೆ ಕ್ಯಾಪ್ಶನ್ ಕೂಡ ಬರೆದುಕೊಂಡಿರುವ ರಿತೇಶ್, 'ಭೂಮಿ (Earth) ತನ್ನ ಕಕ್ಷೆಯ ಸುತ್ತ ಸುತ್ತುತ್ತ ಸೂರ್ಯನನ್ನು ಸುತ್ತುವರೆಯುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಆದರೆ, ಅದನ್ನು ನಾವು ಎಂದಿಗೂ ಕೂಡ ಪ್ರತ್ಯಕ್ಷವಾಗಿ ಅನುಭವಿಸಿಲ್ಲ. ಆರ್ಯಾಹ್ ನಿರೆನಬರ್ಗ್ ಈ ಕುರಿತು ಒಂದು ಅಸಾಧಾರಣ ಸುಂದರ ವಿಡಿಯೋ ತಯಾರಿಸಿದ್ದಾರೆ. ಈ ವಿಡಿಯೋ ಮೂಲಕ ನಾವು ಭೂಮಿ ತಿರುಗುವಿಕೆಯ ಅನುಭವ ಪಡೆಯಬಹುದು' ಎಂದಿದ್ದಾರೆ. ಜೊತೆಗೆ 'ನಿರೆನಬರ್ಗ್ ಇದಕ್ಕಾಗಿ ಸತತ ಮೂರುಗಂಟೆಗಳಲ್ಲಿ ಪ್ರತಿ 12 ಸೆಕೆಂಡ್ ಗೆ ಒಂದು ಛಾಯಾಚಿತ್ರವನ್ನು ಕ್ಲಿಕ್ಕಿಸಿದ್ದಾರೆ. ಮಿಲ್ಕಿ ವೇ ಒಂದು ಭಾಗವನ್ನು ಮಾತ್ರ ಕ್ಯಾಮರಾ ಕಣ್ಣು ಸೆರೆಹಿಡಿಯುತ್ತಿದೆ. ಹೀಗಾಗಿ ಅದು ಸ್ಥಿರ ಕಂಡುಬರುತ್ತಿದೆ. ಭೂಮಿಯ ಚಟುವಟಿಕೆಯನ್ನು ಅತ್ಯಂತ ಸುಂದರ ರೂಪದಲ್ಲಿ ಈ ವಿಡಿಯೋ ಮೂಲಕ ಅನುಭವಿಸಬಹುದು' ಎಂದು ರಿತೇಶ್ ಹೇಳಿದ್ದಾರೆ.
We know that Earth rotates on its Axis & revolves around the Sun. But we can't feel it at all. But here Aryeh Nirenberg an astrophotographer has clicked exceptionally beautiful video, where in we can feel the rotation of the Earth. Made use of Equatorial tracking mount.1/2 pic.twitter.com/VStV2N4Fz5
— Riteish Deshmukh (@Riteishd) January 10, 2021
ಕಳೆದ 50 ವರ್ಷಗಳ ಐತಿಹಾಸಿಕ ವೇಗದಲ್ಲಿ ಭೂಮಿ ತಿರುಗುತ್ತಿದೆ
ಕಳೆದ 50 ವರ್ಷಗಳ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಭೂಮಿ ವೇಗವಾಗಿ ಸುತ್ತುತ್ತಿದೆ. ಇದರಿಂದ ವಿಜ್ಞಾನಿಗಳು ಕೂಡ ಆತಂಕಕ್ಕೊಳಗಾಗಿದ್ದಾರೆ. ಇದನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಅವರು ತಮ್ಮ ಕೆಲಸ ಮುಂದುವರೆಸಿದ್ದಾರೆ. ಪ್ರಸ್ತುತ ಭೂಮಿ ತನ್ನ ಸಾಮಾನ್ಯ ವೇಗಕ್ಕಿಂತ ಹೆಚ್ಚು ವೇಗದಲ್ಲಿ ತಿರುಗುತ್ತಿದೆ. ಇದಕ್ಕೂ ಮೊದಲು ಭೂಮಿ ತನ್ನ ಕಕ್ಷೆಯ ಒಂದು ಸುತ್ತು ಸುತ್ತಲು 24 ಗಂಟೆಗಿಂತ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ಆದರೆ ಪ್ರಸ್ತುತ 24 ಗಂಟೆಗಿಂತಲೂ ಮೊದಲೇ ಭೂಮಿ ಕಕ್ಷೆಯ ಒಂದು ಸುತ್ತು ಸುತ್ತುತ್ತಿದೆ.
ಋಣಾತ್ಮಕ ಲೀಪ್ ಸೆಕೆಂಡ್ ಗಳನ್ನು ಸೇರಿಸಬೇಕು
ಸಾಮಾನ್ಯವಾಗಿ ನಮ್ಮ ಭೂಮಿ (Earth) 24 ಗಂಟೆಗಳಲ್ಲಿ ಒಂದು ಬಾರಿಗೆ ತನ್ನ ಪರಧಿಯ ಸುತ್ತ ಸುತ್ತುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ, ಕಳೆದ ವರ್ಷದ ಜೂನ್ ನಿಂದ ಇದುವರೆಗೆ ಭೂಮಿ ತನ್ನ ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ತಿರುಗಲಾರಂಭಿಸಿದೆ. ಇದರಿಂದ ಭೂಮಿಯ ಮೇಲೆ ಇರುವ ಎಲ್ಲ ದೇಶಗಳ ಸಮಯದಲ್ಲಿ ಬದಲಾವಣೆಯಾಗುತ್ತಿದೆ.
ಈ ಕಾರಣದಿಂದ ವಿಜ್ಞಾನಿಗಳು ತಮ್ಮ ತಮ್ಮ ಸ್ಥಾನಗಳಲ್ಲಿ ಇರುವ ಅಟೋಮಿಕ್ ಕ್ಲಾಕ್ ಗಳ ಸಮಯದಲ್ಲಿ ಬದಲಾಯಿಸಬೇಕಾಗಿದೆ. ಅಂದರೆ, ವಿಜ್ಞಾನಿಗಳು(Scientists) ತಮ್ಮ-ತಮ್ಮ ಗಡಿಯಾರದಲ್ಲಿ ಋಣಾತ್ಮಕ ಲೀಪ್ ಸೆಕೆಂಡ್ ಗಳನ್ನು ಜೋಡಿಸಬೇಕು. 1970 ರಿಂದ ಇದುವರೆಗೆ 27 ಋಣಾತ್ಮಕ ಲೀಪ್ ಸೆಕೆಂಡ್ (Negative Leap Second)ಗಳನ್ನು ಜೋಡಿಸಲಾಗಿದೆ.
24 ಗಂಟೆಗಳಲ್ಲಿ 0.5 ಮಿಲಿ ಸೆಕೆಂಡ್ ಕಡಿಮೆಯಾಗಿದೆ
ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಭೂಮಿ 24 ಗಂಟೆಗೂ ಹೆಚ್ಚು ಸಮಯವನ್ನು ತೆಗೆದುಕೊಂಡು ತನ್ನ ಪರಧಿಯ ಸುತ್ತ ತಿರುತುತ್ತಿತ್ತು. ಆದರೆ, ಕಳೆದ ವರ್ಷದ ಜೂನ್ ತಿಂಗಳಿನಿಂದ 24 ಗಂಟೆಗಿಂತಲೂ ಕಡಿಮೆ ಸಮಯದಲ್ಲಿ ಭೂಮಿ ತನ್ನ ಒಂದು ಪರಧಿಯನ್ನು ಪೂರ್ಣಗೋಳಿಸಲಾರಂಭಿಸಿದೆ. ಪ್ರಸ್ತುತ ಭೂಮಿ 24 ಗಂಟೆಗೆ 0.5 ಮಿಲಿ ಸೆಕೆಂಡ್ ಕಡಿಮೆ ಇರುವಾಗಲೇ ತನ್ನ ಪರಧಿಯ ಒಂದು ಸುತ್ತನ್ನು ಪೂರ್ಣಗೊಳಿಸುತ್ತಿದೆ. ಅಂದರೆ ನಮ್ಮ 24 ಗಂಟೆಗಳಲ್ಲಿ 0.5 ಮಿಲಿ ಸೆಕೆಂಡ್ ಗಳು ಕಡಿಮೆಯಾಗಿವೆ.
50 ವರ್ಷಗಳ ಸರಿಯಾದ ಅಂಕಿಗಳು
ಕಳೆದ 50 ವರ್ಷಗಳಿಂದ ಭೂಮಿ ಸುತ್ತುವ ನಿಖರ ಅಂಕಿ-ಅಂಶಗಳನ್ನು ಕಲೆ ಹಾಕಲಾಗುತ್ತಿದೆ. 24 ಗಂಟೆಗಳಲ್ಲಿ ಒಟ್ಟು 86,400 ಸೆಕೆಂಡ್ ಗಳಿರುತ್ತವೆ. ಅಂದರೆ ಇಷ್ಟು ಸೆಕೆಂಡ್ ಗಳಲ್ಲಿ ಭೂಮಿ ತನ್ನ ಪರಧಿಯ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಆದರೆ ಕಳೆದ ವರ್ಷದ ಜೂನ್ ನಿಂದ 86,400 ಸೆಕೆಂಡ್ ಗಳಲ್ಲಿ 0.5 ಮಿಲಿ ಸೆಕೆಂಡ್ ಇಳಿಕೆಯಾಗಿದೆ.
ಇದನ್ನು ಓದಿ-Earth Rotation:ಭೂಮಿ ತಿರುಗುವಿಕೆ ವೇಗದಲ್ಲಿ ಹೆಚ್ಚಳ, ದಣಿದ ಗಡಿಯಾರಗಳು, ಆತಂಕಕ್ಕೊಳಗಾದ ವಿಜ್ಞಾನಿಗಳು
28 ಬಾರಿ ದಾಖಲೆ ಮುರಿದಿವೆ
ಇದಕ್ಕೂ ಮೊದಲು 2005 ರಲ್ಲಿ ಎಲ್ಲಕ್ಕಿಂತ ಚಿಕ್ಕ ದಿನ ಗಮನಿಸಲಾಗಿತ್ತು. ಆದರೆ, ಕಳೆದ 12 ತಿಂಗಳಲ್ಲಿ 28 ಬಾರಿ ಈ ದಾಖಲೆ ಮುರಿದಿದೆ ಎಂದು ಹೇಳಿದರೆ, ನೀವು ದಂಗಾಗುವಿರಿ. ಸಮಯದ ಈ ಬದಲಾವಣೆಯನ್ನು ಅಟೋಮಿಕ್ ಕ್ಲಾಕ್ ನಲ್ಲಿ ಮಾತ್ರ ಗಮನಿಸಬಹುದು. ಆದರೆ, ಇದರಿಂದ ಹಲವು ರೀತಿಯ ಸಮಸ್ಯೆಗಳು ಎದುರಾಗಲಿವೆ. ಏಕೆಂದರೆ ನಮ್ಮ ಉಪಗ್ರಹಗಳನ್ನು ಹಾಗೂ ಸಂಪರ್ಕ ವ್ಯವಸ್ಥೆಯನ್ನು ಸೋಲಾರ್ ಟೈಮ್ ಗೆ ಅನುಗುಣವಾಗಿ ಸೆಟ್ ಮಾಡಲಾಗಿರುತ್ತದೆ. ಹೀಗಾಗಿ ಇದರಿಂದ ಸಂಪರ್ಕ ವ್ಯವಸ್ಥೆ ಪ್ರಭಾವಿತಗೊಳ್ಳಲಿದೆ. ಸಮಯವನ್ನು ನಕ್ಷತ್ರಗಳು, ಚಂದ್ರ ಹಾಗೂ ಸೂರ್ಯನ ಸ್ಥಾನವನ್ನು ಆಧರಿಸಿ ಸೆಟ್ ಮಾಡಲಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನು ಓದಿ- ವಿಜ್ಞಾನಿಗಳಿಗೆ ದೊರೆತ Super Earth, ಭೂಮಿಯ ರೀತಿಯ ಜೀವನದ ಸಾಧ್ಯತೆ!
ಲೀಪ್ ಸೆಕೆಂಡ್ ತೆಗೆದುಹಾಕುವ ಸಮಯ
ಪ್ಯಾರಿಸ್ ಮೂಲದ ಅಂತರರಾಷ್ಟ್ರೀಯ ಭೂ ತಿರುಗುವಿಕೆ ಸೇವೆಯ (International Earth Rotation Service) ವಿಜ್ಞಾನಿಗಳ ಪ್ರಕಾರ 70 ರ ದಶಕದಿಂದ ಇದುವರೆಗೆ ಸುಮಾರು 27 ಅಧಿಕ ಸೆಕೆಂಡುಗಳನ್ನು ಸೇರಿಸಲಾಗಿದೆ. ಇದಕ್ಕೂ ಮೊದಲು 2016 ರಲ್ಲಿ ಅಧಿಕ ಸೆಕೆಂಡುಗಳನ್ನು ಸೇರಿಸಲಾಗಿತ್ತು. ಆದರೆ ಈಗ ಅಧಿಕ ಸೆಕೆಂಡುಗಳನ್ನು ತೆಗೆದುಹಾಕುವ ಸಮಯ ಬಂದಿದೆ, ಅಂದರೆ, ಇದೀಗ ಋಣಾತ್ಮಕ ಸೆಕೆಂಡ್ ಗಳನ್ನು ಜೋಡಿಸುವ ಕಾಲ ಕೂಡಿಬಂದಿದೆ ಎಂದರ್ಥ.
ಇದನ್ನು ಓದಿ- Life On Earth: ಭೂಮಿಯ ಮೇಲಿನ ಜೀವನ ಅಸ್ತಿತ್ವದ ಕುರಿತು ವಿಜ್ಞಾನಿಗಳು ಹೇಳಿದ್ದೇನು?
ಸಮಯದ ಜೊತೆಗೆ ಸಾಗಲು ಹಿಂದಕ್ಕೆ ಹೋಗಬೇಕು
ಇದನ್ನು ಸ್ವೀಕರಿಸಿ ಹೇಳಿಕೆ ನೀಡಿರುವ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯದ ಹಿರಿಯ ಸಂಶೋಧನಾ ವಿಜ್ಞಾನಿ ಪೀಟರ್ ವಿಬ್ಬರ್ಲಿ, ಭೂಮಿಯು ತನ್ನ ನಿಗದಿತ ಸಮಯಕ್ಕಿಂತ ಕಡಿಮೆ ಅವಧಿಯಲ್ಲಿ ಕಕ್ಷೆಯ ಒಂದು ಸುತ್ತು ಪೂರ್ಣಗೊಳಿಸುತ್ತಿದೆ ಎಂದು ಹೇಳಿದ್ದಾರೆ. ಕಳೆದ 50 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಇದು ಸಂಭವಿಸಿದೆ. ಇದು ಮಾತ್ರವಲ್ಲ, ಭೂಮಿಯ ಮೇಲೆ ವಾಸಿಸುವ ಜನರು ಸಮಯದೊಂದಿಗೆ ಚಲಿಸಲು ಋಣಾತ್ಮಕವಾಗಿ ಅಧಿಕ ಸೆಕೆಂಡುಗಳನ್ನು ಸೇರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- Blackhole ಹತ್ತಿರಕ್ಕೆ ತಲುಪಿದ Earth, ನಮ್ಮ ಮೇಲೆ ಅಪಾಯ ಎಷ್ಟು? ಸಂಶೋಧಕರು ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.