ಬೆಂಗಳೂರು : ಭಾರತದಲ್ಲಿ ಕರೋನಾ ಲಸಿಕೆಯೂ ಬಂದಾಗಿದೆ. ಕರೋನಾ ಲಸಿಕೀಕರಣ ಅಭಿಯಾನವೂ ಆರಂಭವಾಗಿದೆ. ಕರೋನಾ ಲಸಿಕೆಗಳನ್ನು ಹೊತ್ತ ವಿಮಾನಗಳು ಎಲ್ಲಾ ರಾಜ್ಯಗಳನ್ನು ತಲುಪುತ್ತಿವೆ. ಈ ಹೊತ್ತಲ್ಲಿ ಕೆಲವೊಂದು ವಿಚಾರಗಳನ್ನು ಅರಿತುಕೊಳ್ಳಲೇ ಬೇಕು.
ಲಸಿಕೆ ಪಡೆದರೂ ಮೈಮರೆಯುವಂತಿಲ್ಲ:
ನೆನಪಿರಲಿ..ಕರೋನಾ ವ್ಯಾಕ್ಸಿನ್ (Corona Vaccine) ಎರಡು ಹಂತಗಳಲ್ಲಿ ನೀಡಲಾಗುತ್ತದೆ. ನಾವು ಎರಡು ಡೋಸ್ ಗಳನ್ನು ಪಡೆಯಲೇ ಬೇಕು. ಎರಡು ಡೋಸ್ ಗಳನ್ನು ಪಡೆದ ಬಳಿಕವೇ ಲಸಿಕೆ (Vaccine) ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಎರಡು ಡೋಸ್ ಗಳ ನಡುವೆ 28 ದಿನ ಅಂತರವಿರುತ್ತದೆ. ಈ ಹೊತ್ತಲ್ಲಿ ಮೈಮರೆತರೆ ಅಪಾಯ ಗ್ಯಾರಂಟಿ.
ಇದನ್ನೂ ಓದಿ : Good News: ಇಂದಿನಿಂದ ಮೊದಲ ಹಂತದ Covishield ಲಸಿಕೆಗಳ ವಿತರಣೆ ಆರಂಭ
ಲಸಿಕೆ ಪಡೆದರೂ ಕರೋನಾ ವಕ್ಕರಿಸಬಹುದು..!
ಲಸಿಕೆ ಪಡೆದಾಯ್ತು, ಇನ್ನು ಏನು ಬೇಕಾದರೂ ಮಾಡಬಹುದು ಅನ್ನುವಂತಿಲ್ಲ. ಯಾಕಂದರೆ, ಮೊದಲ ಡೋಸ್ ಲಸಿಕೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವೇದಿಕೆ ಸಜ್ಜು ಮಾಡುತ್ತದೆ. ಕರೋನಾವನ್ನು (COVID-19) ಸಂಪೂರ್ಣ ಎದುರಿಸಲು ದೇಹವನ್ನು ಸಜ್ಜು ಮಾಡಿರುವುದಿಲ್ಲ. ಈ ಹೊತ್ತಲ್ಲಿ ಯೆಮಾರಿದರೆ ಕೊಟ್ಟ ವ್ಯಾಕ್ಸಿನ್ ವೇಸ್ಟ್ ಆಗಬಹುದು. ಕರೋನಾ ಪ್ರೊಟೋಕಾಲ್ ಪಾಲಿಸದೆ, ಯಡವಟ್ಟು ಮಾಡಿಕೊಂಡರೆ ಕರೋನಾ ವಕ್ಕರಿಸುವುದು ಗ್ಯಾರಂಟಿ. ಹಾಗಾಗಿ ಮೊದಲ ಡೋಸ್ ಪಡೆದ ನಂತರ 28 ದಿನ ಸಾಕಷ್ಟು ಮುನ್ನೆಚ್ಚರಿಕೆಯಿಂದಲೇ ಇರಬೇಕು.
ಎರಡನೇ ಡೋಸ್ ಪಡೆಯಲೇ ಬೇಕು..
ಎರಡು ಲಸಿಕೆ ಪಡೆದಾಗ ಮಾತ್ರ ಕರೋನಾ ವೈರಸ್ (Coronavirus)ಕೊಲ್ಲಲು ನಮ್ಮ ದೇಹ ಶಕ್ತವಾಗುತ್ತದೆ. ಎರಡನೇ ಲಸಿಕೆಯನ್ನು ಬೂಸ್ಟ್ ಡೋಸ್ ಅಂತಾರೆ. ಈ ಲಸಿಕೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಲಸಿಕೆ ಪಡೆದ ಮೇಲಷ್ಟೇ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity) ಹೆಚ್ಚುತ್ತದೆ. ಹಾಗಾಗಿ ಎರಡನೇ ಡೋಸ್ ಪಡೆಯುವ ತನಕ ಮೈಮರೆಯುವಂತಿಲ್ಲ.
ಇದನ್ನೂ ಓದಿ : Z+ ರೀತಿಯ ಸುರಕ್ಷತೆಯಲ್ಲಿ ದೆಹಲಿ ತಲುಪಿದ ವ್ಯಾಕ್ಸಿನ್, ಪೂಜೆ ಸಲ್ಲಿಸಿದ ಅಧಿಕಾರಿಗಳು
ಲಸಿಕೆ ಪಡೆದ ವ್ಯಕ್ತಿ ಮೇಲೆ ಸತತ 28 ದಿನ ನಿಗಾ:
ಲಸಿಕೆ ಪಡೆದ ವ್ಯಕ್ತಿಗೆ ಒಂದು ಡಿಜಿಟಲ್ ಪ್ರಮಾಣಪತ್ರ ನೀಡಲಾಗುತ್ತದೆ. ಜೊತೆಗೆ ಆ ವ್ಯಕ್ತಿಯ ಮೇಲೆ ಸತತ ನಿಗಾ ಇರಿಸಲಾಗುತ್ತದೆ. ಯಾಕಂದರೆ, ಕೆಲವರಲ್ಲಿ ವ್ಯಾಕ್ಸಿನ್ ವಿಪರೀತ ಪರಿಣಾಮ ಉಂಟು ಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ಸರ್ಕಾರಿ ಸಂಸ್ಥೆಗಳು ಲಸಿಕೆ ಪಡೆದ ವ್ಯಕ್ತಿಯನ್ನು ಅವರ ಪಾಡಿಗೆ ಬಿಟ್ಟುಬಿಡುವುದಿಲ್ಲ. ನಿತ್ಯವೂ ಅವರ ಆರೋಗ್ಯದ ಅಪ್ ಡೇಟ್ ಪಡೆಯಲಾಗುತ್ತದೆ.
ಎರಡನೇ ಡೋಸ್ ಪಡೆದ ಮೇಲೂ ಮಾಸ್ಕ್, ಸಾನಿಟೈಸರ್ ಕಡ್ಡಾಯ
ಕರೋನಾ ಲಸಿಕೆ ಈಗ ಎಲ್ಲಾ 130 ಕೋಟಿ ಭಾರತೀಯರಿಗೂ ಸದ್ಯ ಸಿಗಲ್ಲ. ಹಂತ ಹಂತವಾಗಿ ಅದು ಎಲ್ಲರಿಗೂ ಸಿಗಲಿದೆ. 30 ಕೋಟಿ ಭಾರತೀಯರಿಗೆ ಲಸಿಕೆ ನೀಡುವ ಪ್ಲಾನ್ ಇದೆ. ಲಸಿಕೆ ಹಾಕಾಯ್ತು, ನಾನಿನ್ನು ಹೇಗೆ ಬೇಕಾದರೂ ಇರಬಹುದು ಅನ್ನುವಂತಿಲ್ಲ. ಯಾಕಂದರೆ, ನಿಮ್ಮ ನಡುವೆ ಲಸಿಕೆ ಹಾಕಿಸಿಕೊಳ್ಳದವರೂ ಇರಬಹುದು. ನಿಮ್ಮ ದೇಹದಲ್ಲಿ ಬದುಕಲಾಗದ ವೈರಸ್ ಲಸಿಕೆ ಪಡೆಯದವರ ದೇಹ ಪ್ರವೇಶಿಸಿ ಉತ್ಪಾತ ಸೃಷ್ಟಿಸಬಹುದು. ಹಾಗಾಗಿ, ಇನ್ನೊಂದು ವರ್ಷ ಮಾಸ್ಕ್, (Mask) ಸಾನಿಟೈಸರ್ ಕಡ್ಡಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.