Gold-Silver KYC: ಚಿನ್ನಾಭರಣ ಖರೀದಿಯ ವೇಳೆ KYC ನೀಡುವ ಕುರಿತು ಸರ್ಕಾರದಿಂದ ಮಹತ್ವದ ಹೇಳಿಕೆ

Gold-Silver KYC:ಒಂದು ವೇಳೆ ನೀವೂ ಕೂಡ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಖರೀದಿಸಲು ಹೋಗುತ್ತಿದ್ದರೆ, ನಿಮ್ಮೊಂದಿಗೆ KYC ದಾಖಲೆಗಳನ್ನು ತೆಗೆದುಕೊಂಡು ಹೋಗುವುದು ಆವಶ್ಯಕವೆ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. 

Gold-Silver KYC:ಒಂದು ವೇಳೆ ನೀವೂ ಕೂಡ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಖರೀದಿಸಲು ಹೋಗುತ್ತಿದ್ದರೆ, ನಿಮ್ಮೊಂದಿಗೆ KYC ದಾಖಲೆಗಳನ್ನು ತೆಗೆದುಕೊಂಡು ಹೋಗುವುದು ಆವಶ್ಯಕವೆ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ಏಕೆಂದರೆ, ಚಿನ್ನಾಭರಣ(Gold) ಖರೀದಿಯ ವೇಳೆ KYC ನಿಯಮಗಳಿಗೆ ಸಂಬಂಧಿಸಿದಂತೆ ಉದ್ಭವಿಸಿರುವ ಗೊಂದಲಗಳಿಗೆ ಸರ್ಕಾರ ಸ್ಪಷ್ಟೀಕರಣ ನೀಡಿದೆ. ಕೆಲ ದಿನಗಳ ಹಿಂದೆ ಚಿನ್ನಾಭರಣ ಖರೀದಿಸುವ ವೇಳೆ KYC ನೀಡುವ ಕುರಿತು ಸಾಕಷ್ಟು ಸುದ್ದಿಗಳು ಪ್ರಕಟಗೊಂಡಿದ್ದವು. ಇವುಗಳಿಗೆ Department of Revenue (DoR) ಸ್ಪಷ್ಟೀಕರಣಗಳನ್ನು ನೀಡಿದೆ.

 

ಇದನ್ನು ಓದಿ- ಮನೆ ಆಭರಣಗಳಲ್ಲೂ ಹಾಲ್‌ಮಾರ್ಕಿಂಗ್ ಮಾಡಬಹುದು! ಅದಕ್ಕೆ ತಗಲುವ ವೆಚ್ಚ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಈ ಕುರಿತು ಸ್ಪಷ್ಟನೆ ನೀಡಿರುವ  Department of Revenue (DoR), 2 ಲಕ್ಷ ರೂ.ಗಳವರೆಗಿನ ಚಿನ್ನಾಭರಣ ಖರೀದಿಸುವ ವೇಳೆ PAN ಹಾಗೂ ಆಧಾರ್ ಕಾರ್ಡ್ ನೀಡುವುದು ಅಥವಾ KYC ಮಾಡಿಸುವ ಅಗತ್ಯವಿಲ್ಲ ಎಂದು ಹೇಳಿದೆ.

2 /4

ಮೂಲಗಳ ಪ್ರಕಾರ, ಡಿಸೆಂಬರ್ 28, 2020 ರಂದು, Prevention of Money Laundering Act, 2002 ಅಡಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಧಿಸೂಚನೆಯಲ್ಲಿ ಇದು FATF (Financial Action Task Force) ಬೇಡಿಕೆಯಾಗಿದ್ದು, 10 ಲಕ್ಷ ರೂ.ಗಳಿಗಿಂತ ಹೆಚ್ಚಿನ ನಗದು ವಹಿವಾಟು ನಡೆಸುವ ಗ್ರಾಹಕರ KYC ಹಾಗೂ ಡ್ಯೂಡಿಲಿಜೆನ್ಸ್ ಕಡ್ಡಾಯವಾಗಿ ಮಾಡಿಸಲು ಚಿನ್ನ-ಬೆಳ್ಳಿ ಆಭರಣ ವಿತರಕರಿಗೆ ಸೂಚಿಸಲಾಗಿದೆ.

3 /4

FATF ಜಾಗತಿಕ ಹಣ ವರ್ಗಾವಣೆ ಮತ್ತು ಟೆರರ್ ಫಂಡಿಂಗ್ ಪ್ರಕರಣಗಳ ಮೇಲ್ವಿಚಾರಣೆ ಮಾಡುವ ಒಂದು ಸಂಸ್ಥೆಯಾಗಿದೆ. ಎಫ್‌ಎಟಿಎಫ್ ಎನ್ನುವುದು ಸರ್ಕಾರಿ ಸಂಸ್ಥೆಯಾಗಿದ್ದು ಅದು ಅಕ್ರಮ ಧನಸಹಾಯ ಮತ್ತು ಮನಿ ಲಾಂಡರಿಂಗ್ ತಡೆಗಟ್ಟಲು ಅಂತರರಾಷ್ಟ್ರೀಯ ಮಾನದಂಡಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ನಿಗದಿತ ಮಿತಿಯನ್ನು (ಡಾಲರ್ / ಯುರೋ 15,000) ಮೀರಿ ನಗದು ವಹಿವಾಟು ನಡೆಸಿದರೆ ಗ್ರಾಹಕರ ಸರಿಯಾದ ಡ್ಯುಡಿಲಿಜೆನ್ಸ್  (ಸಿಡಿಡಿ) ಷರತ್ತುಗಳನ್ನು ಅವರು ಪೂರೈಸಬೇಕು ಎಂಬ ಸಲಹೆಯೂ ಡಿಪಿಎಂಎಸ್ ವಲಯಕ್ಕೆ ಇದೆ. ಭಾರತ 2010 ರಿಂದಲೂ ಎಫ್‌ಎಟಿಎಫ್ ಗೆ ಒಂದು ಸದಸ್ಯ ರಾಷ್ಟ್ರವಾಗಿದೆ.

4 /4

ಕೆಲ ದಿನಗಳ ಹಿಂದೆ ಬೆಳ್ಳಿ ಖರೀದಿಸುವ ವೇಳೆ 2 ಲಕ್ಷ ರೂ.ಗಳಿಗೂ ಕಡಿಮೆ ಮೊತ್ತದ ಬೆಳ್ಳಿ ಖರೀದಿಸಿದರೂ ಕೂಡ KYC ಸಲ್ಲಿಸುವುದು ಅನಿವಾರ್ಯ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಇದೊಂದು ತಪ್ಪು ಮತ್ತು ಆಧಾರರಹಿತ ಮಾಹಿತಿಯಾಗಿದೆ ಎನ್ನಲಾಗಿದೆ. ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 269 ಎಸ್‌ಟಿ ಅಡಿಯಲ್ಲಿ ಭಾರತದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ವಹಿವಾಟನ್ನು ಅನುಮತಿಸಲಾಗುವುದಿಲ್ಲ. ಹೀಗಿರುವಾಗ ಒಂದು ವೇಳೆ ಡೀಲರ್ ಗಳು ಗ್ರಾಹಕರಿಂದ 2 ಲಕ್ಷ ರೂ.ಗಳಿಗಿಂತ ಹೆಚ್ಚು ನಗದು ಹಣವನ್ನು ಪಡೆಯುತ್ತಿಲ್ಲ ಎಂದಾದರೆ ಅಂದು ಆದಾಯ ತೆರಿಗೆ ಕಾಯ್ದೆಯ ಕಂಪ್ಲಾಯೇನ್ಸ್ ಗೆ ಅನುಗುಣವಾಗಿ ಸರಿಯಾಗಿದೆ. ಅವರಿಗೆ ಈ ಅಧಿಸೂಚನೆ ಅನ್ವಯಿಸುವುದಿಲ್ಲ.