COVID-19 Vaccine: ಭಾರತದ ಕೊರೊನಾ ಲಸಿಕೆ ಬಗ್ಗೆ ಆಂಗ್ ಸಾನ್ ಸೂಕಿ ಹೇಳಿದ್ದೇನು ಗೊತ್ತೇ?

ಹೊಸ ವರ್ಷದ ಭಾಷಣದಲ್ಲಿ, ಮ್ಯಾನ್ಮಾರ್‌ನ ಸ್ಟೇಟ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ತಮ್ಮ ದೇಶಕ್ಕೆ ಭಾರತದಿಂದ COVID ಲಸಿಕೆ ಸಿಗಲಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಘೋಷಿಸಿದ್ದಾರೆ.

Written by - Zee Kannada News Desk | Last Updated : Jan 5, 2021, 09:01 PM IST
  • ಭಾರತದಿಂದ ಮೊದಲ ಬ್ಯಾಚ್ ಲಸಿಕೆಗಳನ್ನು ಖರೀದಿಸುವ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಲಾಗಿದೆ.
  • 'ಲಸಿಕೆ ಪಡೆಯುವ ಮೊದಲ ಆದ್ಯತೆಯ ಗುಂಪು ವೈದ್ಯಕೀಯ ವೃತ್ತಿಪರರು ಮತ್ತು ವೈದ್ಯಕೀಯ ಸಿಬ್ಬಂದಿಯಾಗಿದ್ದು, ಇದು ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ ಎಂದು ಆಂಗ್ ಸಾಕಿ ಸೂಕಿ ಹೇಳಿದರು.
  • ಲಸಿಕೆಗಳು ಇನ್ನೂ ಲಭ್ಯವಿಲ್ಲದ ಅವಧಿಯಲ್ಲಿ, ಆರೋಗ್ಯ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಬೇಕೆಂದು ಮತ್ತು COVID-19 ಅನ್ನು ಸೋಲಿಸುವ ನಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಜನರಿಗೆ ಮನವಿ ಮಾಡಲು ನಾನು ಬಯಸುತ್ತೇನೆ.
COVID-19 Vaccine: ಭಾರತದ ಕೊರೊನಾ ಲಸಿಕೆ ಬಗ್ಗೆ ಆಂಗ್ ಸಾನ್ ಸೂಕಿ ಹೇಳಿದ್ದೇನು ಗೊತ್ತೇ? title=
Myanmar's Aung San Suu Kyi talk about COVID-19 vaccine from India (File Photo)

ನವದೆಹಲಿ: ಹೊಸ ವರ್ಷದ ಭಾಷಣದಲ್ಲಿ, ಮ್ಯಾನ್ಮಾರ್‌ನ ಸ್ಟೇಟ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ತಮ್ಮ ದೇಶಕ್ಕೆ ಭಾರತದಿಂದ COVID ಲಸಿಕೆ ಸಿಗಲಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಘೋಷಿಸಿದ್ದಾರೆ.

'ಭಾರತದಿಂದ ಮೊದಲ ಬ್ಯಾಚ್ ಲಸಿಕೆಗಳನ್ನು ಖರೀದಿಸುವ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಲಾಗಿದೆ.ಭಾರತದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಲಸಿಕೆ ಬಳಸಲು ಅನುಮತಿ ನೀಡಿದ ಕೂಡಲೇ ನಾವು ಈ ಲಸಿಕೆಗಳನ್ನು ಮ್ಯಾನ್ಮಾರ್‌ಗೆ ಆಮದು ಮಾಡಿಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ ಎಂದು ಆಂಗ್ ಸಾನ್ ಸೂಕಿ (Aung San Suu Kyi) ತಿಳಿಸಿದ್ದಾರೆ.

Covishield ಗಾಗಿ  ಮ್ಯಾನ್ಮಾರ್ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ವಾರಾಂತ್ಯದಲ್ಲಿ, ಭಾರತದ ಔಷಧ ನಿಯಂತ್ರಕವು ಅದರ ಬಳಕೆಗೆ ಅನುಮೋದನೆ ನೀಡಿತು.

ಕಳೆದ ವರ್ಷ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶ್ರೀಂಗ್ಲಾ ಮತ್ತು ಸೇನಾ ಮುಖ್ಯಸ್ಥ ಎಂ.ಎಂ.ನಾರವಾನೆ ಜಂಟಿಯಾಗಿ ದೇಶಕ್ಕೆ ಭೇಟಿ ನೀಡಿದ್ದರು.ಲಸಿಕೆ ವಿಷಯಕ್ಕೆ ಬಂದಾಗ ಮ್ಯಾನ್ಮಾರ್‌ಗೆ ಆದ್ಯತೆ ನೀಡಲಾಗುವುದು ಎಂದು ಭಾರತದಿಂದ ಉನ್ನತ ಮಟ್ಟದ ಆಶ್ವಾಸನೆಗಳು ಈ ಭೇಟಿ ಸಂದರ್ಭದಲ್ಲಿ ಬಂದಿದ್ದವು.ಕೊವಿಡ್ 19 ರ ಪರಿಣಾಮವನ್ನು ತಗ್ಗಿಸಲು ಮ್ಯಾನ್ಮಾರ್‌ಗೆ ಸಹಾಯ ಮಾಡುವ ಭಾರತದ ಬದ್ಧತೆಯ ಸಂಕೇತವಾಗಿ ಶ್ರೆಂಗ್ಲಾ ರೆಮ್‌ಡೆಸಿವಿರ್‌ನ 3000 ಬಾಟಲುಗಳನ್ನು ಹಸ್ತಾಂತರಿಸಿದರು.

ಇದನ್ನೂ ಓದಿ: ಆಂಗ್ ಸಾನ್ ಸೂಕಿ ನಿವಾಸದ ಮೇಲೆ ಬಾಂಬ್ ದಾಳಿ

'ಲಸಿಕೆ ಪಡೆಯುವ ಮೊದಲ ಆದ್ಯತೆಯ ಗುಂಪು ವೈದ್ಯಕೀಯ ವೃತ್ತಿಪರರು ಮತ್ತು ವೈದ್ಯಕೀಯ ಸಿಬ್ಬಂದಿಯಾಗಿದ್ದು, ಇದು ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ ಎಂದು ಆಂಗ್ ಸಾಕಿ ಸೂಕಿ ಹೇಳಿದರು."ಪ್ರಪಂಚದ ಎಲ್ಲಾ ದೇಶಗಳು ಈ ಲಸಿಕೆ ಪಡೆಯಲು ಪ್ರಯತ್ನಿಸುತ್ತಿರುವುದರಿಂದ ಸಾಕಷ್ಟು ಸ್ಪರ್ಧೆ ಇದೆ.ಆದಾಗ್ಯೂ, ಲಸಿಕೆ ಕಾರ್ಯಕ್ರಮವನ್ನು ಹಂತ ಹಂತವಾಗಿ ದೇಶಾದ್ಯಂತ ನಡೆಸಬಹುದೆಂದು ನಾವು ನಂಬುತ್ತೇವೆ" ಎಂದು ಅವರು ಹೇಳಿದರು.

'ಲಸಿಕೆಗಳು ಇನ್ನೂ ಲಭ್ಯವಿಲ್ಲದ ಅವಧಿಯಲ್ಲಿ, ಆರೋಗ್ಯ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಬೇಕೆಂದು ಮತ್ತು COVID-19 ಅನ್ನು ಸೋಲಿಸುವ ನಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಜನರಿಗೆ ಮನವಿ ಮಾಡಲು ನಾನು ಬಯಸುತ್ತೇನೆ.ದಯವಿಟ್ಟು ಜಾಗರೂಕರಾಗಿರಿ; ದಯವಿಟ್ಟು ತಾಳ್ಮೆಯಿಂದಿರಿ' ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ: Corona New Strain: ಮತ್ತೆ ಲಾಕ್‌ಡೌನ್ ಮೊರೆಹೋದ ದೇಶಗಳು

ಕೋವಿಡ್ ಸಾಂಕ್ರಾಮಿಕದ ಮಧ್ಯೆ, ಭಾರತವು 150ಕ್ಕೂ ಹೆಚ್ಚು ದೇಶಗಳಿಗೆ ಎಚ್‌ಸಿಕ್ಯು, ಪ್ಯಾರೆಸಿಟಮಾಲ್ ಮುಂತಾದ ಔಷಧಿಗಳನ್ನು ಕಳುಹಿಸುವ ಮೂಲಕ ವಿಶ್ವದ ಔಷಧ ರಾಜಧಾನಿಯಾಗಿ ತನ್ನ ಸ್ಥಾನವನ್ನು ಪುನರುಚ್ಚರಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News