Eating Habits: ಆಹಾರ ಸೇವನೆ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ

ಆಹಾರವನ್ನು ಸೇವಿಸಿದ ಕೂಡಲೇ ನೀರು, ಕಾಫಿ, ಚಹಾ ಮತ್ತು ತಂಪು ಪಾನೀಯಗಳನ್ನು ಸೇವಿಸುವುದು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ.   

Written by - Yashaswini V | Last Updated : Jan 2, 2021, 03:55 PM IST
  • ಆಹಾರವನ್ನು ಸೇವಿಸಿದ ನಂತರ ನೀರನ್ನು ಸೇವಿಸಬೇಡಿ
  • ಊಟವಾದ ಕೂಡಲೇ ಚಹಾ ಮತ್ತು ಕಾಫಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ
  • ಊಟವಾದ ಕೂಡಲೇ ಸ್ನಾನ ಮಾಡುವುದನ್ನು ತಪ್ಪಿಸಿ
Eating Habits: ಆಹಾರ ಸೇವನೆ ಬಳಿಕ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ  title=
Bad Eating Habits

ಬೆಂಗಳೂರು: ನಮ್ಮ ದೇಹವು ಆಹಾರದಿಂದ ಪೋಷಣೆಯನ್ನು ಪಡೆಯುತ್ತದೆ. ಇದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಅದೇ ಸಮಯದಲ್ಲಿ ವ್ಯಕ್ತಿಯು ಸರಿಯಾದ ಆಹಾರವನ್ನು ಸೇವಿಸದಿದ್ದರೆ ದೇಹದಲ್ಲಿ ದೌರ್ಬಲ್ಯ ಉಂಟಾಗುತ್ತದೆ. ಪೌಷ್ಠಿಕ ಆಹಾರವನ್ನು ಸೇವಿಸುವುದರಿಂದ ದೇಹವನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ. ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದ ಕೆಲವು ಕೆಟ್ಟ ಅಭ್ಯಾಸಗಳಿವೆ, ಅದನ್ನು ತಪ್ಪಿಸಬೇಕು.

ಊಟದ ಬಳಿಕ ಮಾಡುವ ಸಾಮಾನ್ಯ ತಪ್ಪುಗಳಿವು :
ಹೆಚ್ಚಿನ ಜನರು ಆಹಾರವನ್ನು ಸೇವಿಸುವಾಗ ಅಥವಾ ನಂತರ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅದು ಅವರ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಆಹಾರ ಸೇವನೆ ಬಳಿಕ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ...

ಇದನ್ನೂ ಓದಿ : COVID 19 Vaccine ವಿತರಣೆಗೆ ಸಿದ್ಧತೆ ದೇಶಾದ್ಯಂತ ಡ್ರೈ ರನ್

ಊಟವಾದ ಕೂಡಲೇ ನೀರು ಕುಡಿಯಬೇಡಿ :-
ಪ್ರತಿಯೊಬ್ಬರೂ ಬಿಸಿ ಆಹಾರವನ್ನು ಇಷ್ಟಪಡುತ್ತಾರೆ. ಊಟವಾದ ಕೂಡಲೇ ನೀರು (Water) ಕುಡಿಯುವುದರಿಂದ ಜೀರ್ಣಾಂಗ ಪ್ರಕ್ರಿಯೆ ಹಾಳಾಗುತ್ತದೆ. ಇದು ಕಿಣ್ವವನ್ನು ದುರ್ಬಲಗೊಳಿಸುತ್ತದೆ. ಈ ಕಾರಣದಿಂದಾಗಿ ನೈಸರ್ಗಿಕ ಜೀರ್ಣಕ್ರಿಯೆಯ ಸಮಯ ಕಡಿಮೆಯಾಗುತ್ತದೆ. ಹೇಗಾದರೂ ಸಾಮಾನ್ಯವಾಗಿ ಊಟ ಮಾಡುವ  ಒಂದು ಗಂಟೆ ಮೊದಲು ನೀರು ಕುಡಿಯಿರಿ ಅಥವಾ ಊಟದ ನಡುವೆ ಸ್ವಲ್ಪ ನೀರು ಕುಡಿಯಿರಿ.

ಊಟದ ನಂತರ ಚಹಾ ಮತ್ತು ಕಾಫಿಯನ್ನು ಸೇವಿಸಬೇಡಿ :-
ಚಹಾ  (Tea), ಕಾಫಿ ಮತ್ತು ತಂಪು ಪಾನೀಯವನ್ನು ಆಹಾರ ಸೇವಿಸಿದ ಕೂಡಲೇ ಸೇವಿಸಬಾರದು. ತಜ್ಞರ ಪ್ರಕಾರ ಪಾನೀಯಗಳನ್ನು ಊಟಕ್ಕೆ ಒಂದು ಗಂಟೆ ಮೊದಲು ಮತ್ತು ಊಟದ ಒಂದು ಗಂಟೆಯ ನಂತರ ಸೇವಿಸಬಾರದು. ಈ ವಸ್ತುಗಳ ಸೇವನೆಯಿಂದ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾಗುತ್ತದೆ. ಇದು ರಕ್ತಹೀನತೆಗೆ ಕಾರಣವಾಗಬಹುದು.

ಇದನ್ನೂ ಓದಿ : Good News : Pfizer - BioNTech ಸಂಸ್ಥೆಗಳ ಲಸಿಕೆ ತುರ್ತು ಬಳಕೆಗೆ WHO ಒಪ್ಪಿಗೆ

ಊಟವಾದ ಕೂಡಲೇ ಸಿಗರೇಟ್‌ಗಳು ತುಂಬಾ ಹಾನಿಕಾರಕ :
ಕೆಲವು ಜನರಿಗೆ ಆಹಾರ ಸೇವಿಸಿದ ಕೂಡಲೇ ಸಿಗರೇಟ್ (Cigarette) ಸೇದುವ ಅಭ್ಯಾಸವಿರುತ್ತದೆ. ಆದರೆ ಆಹಾರ ಸೇವಿಸಿದ ಕೂಡಲೇ ಸಿಗರೇಟು ಸೇದುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಊಟದ ಬಳಿಕ ತಕ್ಷಣವೇ ಸೇದುವ ಸಿಗರೇಟು ದೇಹಕ್ಕೆ 10 ಸಿಗರೇಟ್‌ಗೆ ಸಮಾನವಾದ ಹಾನಿ ಉಂಟುಮಾಡುತ್ತದೆ. ನಿಮಗೂ ಈ ಕೊಳಕು ಅಭ್ಯಾಸವಿದ್ದರೆ ಇದನ್ನು ತ್ಯಜಿಸುವುದು ಒಳ್ಳೆಯದು.

ಊಟವಾದ ಕೂಡಲೇ ಸ್ನಾನ ಮಾಡುವುದನ್ನು ತಪ್ಪಿಸಿ :
ಕೆಲವರು ಆಹಾರ ಸೇವಿಸಿದ ನಂತರ ಸ್ನಾನ ಮಾಡುತ್ತಾರೆ. ಹಾಗೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಊಟ ಮಾಡಿದ ಕೂಡಲೇ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ನಂತರ ರಕ್ತ ಪರಿಚಲನೆ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : Good News: ದೇಶಾದ್ಯಂತ ಕೋವಿಡ್ ಲಸಿಕೆ ಉಚಿತವಾಗಿ ವಿತರಣೆ - ಡಾ. ಹರ್ಷವರ್ಧನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News