ಕನ್ನಡಿಗ ಕೆ.ಎಲ್. ರಾಹುಲ್ ಅವರ ವೃತ್ತಿಜೀವನವನ್ನು ಹಾಳು ಮಾಡುತ್ತಿದ್ದಾರಾ ರವಿಶಾಸ್ತ್ರಿ?

ಕೆ.ಎಲ್. ರಾಹುಲ್ ನ್ಯೂಜಿಲೆಂಡ್ ಪ್ರವಾಸದ ನಂತರ ಅತ್ಯುತ್ತಮ ಫಾರಂನಲ್ಲಿ ಇದ್ದಾರೆ. ಐಪಿಎಲ್ ಸಮಯದಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು ಮತ್ತು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಆದರೂ ಅವರನ್ನು ಎರಡನೇ ಟೆಸ್ಟ್ ಪಂದ್ಯಕ್ಕೆ ಆಡುವ ಹನ್ನೊಂದು ಮಂದಿ ತಂಡದಿಂದ ಕೈಬಿಟ್ಟಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

Written by - Yashaswini V | Last Updated : Dec 26, 2020, 08:55 AM IST
  • ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಕೆ.ಎಲ್. ರಾಹುಲ್ ಗಿಲ್ಲ ಅವಕಾಶ
  • ವಿರಾಟ್ ಕೊಹ್ಲಿ ಬದಲಿಗೆ ಯಾವುದೇ ಅನುಭವಿ ಬ್ಯಾಟ್ಸ್‌ಮನ್‌ ಅನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ
  • ಹನುಮಾ ವಿಹಾರಿಗೆ ಅವಕಾಶ ನೀಡಲು ಕೆ.ಎಲ್. ರಾಹುಲ್ ಗೆ ಕೋಕ್
ಕನ್ನಡಿಗ ಕೆ.ಎಲ್. ರಾಹುಲ್ ಅವರ ವೃತ್ತಿಜೀವನವನ್ನು ಹಾಳು ಮಾಡುತ್ತಿದ್ದಾರಾ ರವಿಶಾಸ್ತ್ರಿ?  title=
KL Rahul (File Image)

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಆಡುವ ಹನ್ನೊಂದು ಜನರಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಲಾಗಿದೆ. ರಿಷಭ್ ಪಂತ್, ವೃದ್ಧಿಮಾನ್ ಸಹಾ, ಶುಬ್ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ನೀಡಲಾಗಿದೆ. ಅದೇ ಸಮಯದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಅವರು ಆಡುವ ಹನ್ನೊಂದು ಮಂದಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಮೊದಲ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋತಿದ್ದರಿಂದ ಬೇಸರಿಸಿಗೊಂಡಿದ್ದ ಅಭಿಮಾನಿಗಳು ಈಗ ತಂಡದಲ್ಲಿ ಆಗಿರುವ ಬದಲಾವಣೆ ಕಂಡು ಇನ್ನಷ್ಟು ಆಕ್ರೋಶಗೊಂಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳೇ ಉದಾಹರಣೆ.

ವಿಶೇಷವಾಗಿ ತಂಡದ ಕೋಚ್ ರವಿಶಾಸ್ತ್ರಿ (Ravishastri) ಅವರು ಕ್ರಿಕೆಟ್ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಬದಲಿಗೆ ಯಾವುದೇ ಅನುಭವಿ ಬ್ಯಾಟ್ಸ್‌ಮನ್‌ರನ್ನು ತಂಡದಲ್ಲಿ ಸೇರಿಸಿಕೊಂಡಿಲ್ಲ. ಕೆ.ಎಲ್. ರಾಹುಲ್ ಅವರನ್ನು ಪ್ರಯತ್ನಿಸಲು ಉತ್ತಮ ಅವಕಾಶ ಸಿಕ್ಕಿತು ಎಂದು ಅಭಿಮಾನಿಗಳು ತಮ್ಮ ಕೋಪವನ್ನು ಕಾರಿಕೊಂಡಿದ್ದಾರೆ.

TROLL

ರವಿಸ್ತ್ರಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಸ್ಥಾನಸಲ್ಲಿ ಮಂದುವರೆದರೆ ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ (Rohit Sharma) ಅವರ ವೃತ್ತಿಜೀವನವು ಮುಕ್ತಾಯ ಆಗುತ್ತದೆ ಎಂದು ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬರು ಬರೆದಿದ್ದಾರೆ. ಈ ಆಡುವ ಹೊಸ ಹನ್ನೊಂದು ಮಂದಿಯ ತಂಡ ನೋಡಿದ ಅಭಿಮಾನಿಯೊಬ್ಬರು ತಂಡದ ಆಡಳಿತವನ್ನೇ ಪ್ರಶ್ನಿಸಿದ್ದಾರೆ. ಹನುಮಾ ವಿಹಾರಿ ಅವರಿಗೆ ಅವಕಾಶ ನೀಡಲು ಕೆ.ಎಲ್. ರಾಹುಲ್ (KL Rahul) ಅವರಿಗೆ ಅವಕಾಶ ತಪ್ಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಆಸಿಸ್ ಮೈಂಡ್ ಗೇಮ್ ಆಡುತ್ತಿರಲಿ, ನಾವು ನಮ್ಮ ಆಟದತ್ತ ಗಮನ ಹರಿಸುತ್ತೇವೆ'

ಕೆಎಲ್ ರಾಹುಲ್ ಅವರು ಭಾರತ ತಂಡಕ್ಕಾಗಿ ಇದುವರೆಗೆ 36 ಟೆಸ್ಟ್ ಪಂದ್ಯಯಗಳನ್ನು ಆಡಿದ್ದಾರೆ, ಅದರಲ್ಲಿ ಅವರು 2006 ರನ್ ಗಳಿಸಿದ್ದಾರೆ. ಇದೇ ವೇಳೆ ರಾಹುಲ್ 5 ಶತಕ ಮತ್ತು 11 ಅರ್ಧಶತಕಗಳನ್ನು ಗಳಿಸಿದ್ದಾರೆ. ಕೆ.ಎಲ್. ರಾಹುಲ್ ನ್ಯೂಜಿಲೆಂಡ್ ಪ್ರವಾಸದ ನಂತರ ಅತ್ಯುತ್ತಮ ಫಾರಂನಲ್ಲಿ ಇದ್ದಾರೆ. ಐಪಿಎಲ್ (IPL) ಸಮಯದಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು ಮತ್ತು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಆದರೂ ಅವರನ್ನು ಎರಡನೇ ಟೆಸ್ಟ್ ಪಂದ್ಯಕ್ಕೆ ಆಡುವ ಹನ್ನೊಂದು ಮಂದಿ ತಂಡದಿಂದ ಕೈಬಿಟ್ಟಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಆಡುತ್ತಿರುವ 11 ಜನ ಭಾರತೀಯ ಕ್ರಿಕೆಟ್ ತಂಡದ ಸದಸ್ಯರೆಂದರೆ ಮಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ ಮತ್ತು ಉಮೇಶ್ ಯಾದವ್.

ಇದನ್ನೂ ಓದಿ: 'ಭಾರತ ಕ್ರಿಕೆಟ್ ತಂಡವನ್ನು ರಕ್ಷಿಸಲು ಆಸ್ಟ್ರೇಲಿಯಾಗೆ ರಾಹುಲ್ ದ್ರಾವಿಡ್ ಕಳಿಸಿ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News