ಕೇಂದ್ರ ನಾಯಕರ ದೊಡ್ಡ ದಂಡೇ ರಾಜ್ಯಕ್ಕೆ

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 110 ಕೇಂದ್ರ ನಾಯಕರ ದೊಡ್ಡ ದಂಡೇ ರಾಜ್ಯಕ್ಕೆ ಆಗಮಿಸಲಿದೆ.

Last Updated : Mar 1, 2018, 11:41 AM IST
ಕೇಂದ್ರ ನಾಯಕರ ದೊಡ್ಡ ದಂಡೇ ರಾಜ್ಯಕ್ಕೆ  title=

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಕೇಂದ್ರ ನಾಯಕರ ದೊಡ್ಡ ದಂಡೇ ರಾಜ್ಯಕ್ಕೆ ಬರಲಿದೆ. ಹೈಕಮಾಂಡ್ ಸೂಚನೆ ಹಿನ್ನೆಲೆ 110 ಕೇಂದ್ರ ನಾಯಕರು ಮಾರ್ಚ್ ತಿಂಗಳಲ್ಲಿ ರಾಜ್ಯಕ್ಕೆ ಆಗಮಿಸಲಿದ್ದಾರೆ.

ಮಾರ್ಚ್ 3, 4 ಹಾಗೂ ಮಾರ್ಚ್ 10,11ರಂದು ಎರಡು ಹಂತದಲ್ಲಿ ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ನಾಯಕರು, ರಾಜ್ಯದ ವಿವಿಧ ಕಾರ್ಯಕ್ರಮಗಳಲ್ಲಿ ಏಕಕಾಲದಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಸಚಿವರು, ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಒಟ್ಟು 55 ಮಂದಿ ಪ್ರಭಾವಿ ನಾಯಕರು ಎರಡು ದಿನಗಳ ಕಾಲ ರಾಜ್ಯಕ್ಕೆ ಭೇಟಿ.

ಚುನಾವಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಕೇಂದ್ರ ಬಿಜೆಪಿ ನಾಯಕರು ಮಾರ್ಚ್ 3 ಮತ್ತು 4 ರಂದು ರಾಜ್ಯದ 9 ಜಿಲ್ಲೆಗಳಲ್ಲಿ ಕಮಲ ಜಾತ್ರೆ ಆಯೋಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಎಸ್ಸಿ ಮತ್ತು ಎಸ್ಟಿ ಸಮಾವೇಶ ಹಾಗೂ ಮಹಿಳಾ ಸಮಾವೇಶದಲ್ಲೂ ಸಹ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ.

ಅದೇ ರೀತಿ ಮಾರ್ಚ್ 10 ಮತ್ತು 11 ರಂದು ಮತ್ತೇ 55 ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಕಲಬುರ್ಗಿ, ಚಿತ್ರದುರ್ಗ,  ರಾಯಚೂರು ಜಿಲ್ಲೆಗಳಲ್ಲಿ ಆಯೋಜಿಸಿರುವ ಎಸ್ಸಿ ಮತ್ತು ಎಸ್ಟಿ ಸಮಾವೇಶಗಳಲ್ಲಿ ಕೇಂದ್ರ ನಾಯಕರು ಭಾಗಿಯಾಗಲಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಚುನಾವಣೆ ಸಿದ್ಧತೆಗೆ ಕೇಂದ್ರದ ನಾಯಕರನ್ನು ಅಖಾಡಕ್ಕೆ ಇಳಿಸಿದೆ.

Trending News