ನವದೆಹಲಿ: 'ಬ್ರಿಟನ್ನಲ್ಲಿ ಕಾಣಿಸಿಕೊಂಡಿರುವ ಹೊಸ ಸ್ವರೂಪದ ಕೊರೊನಾವೈರಸ್ ಬಗ್ಗೆ ಸರ್ಕಾರ ಜಾಗರೂಕವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ' ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
'ದೇಶದಲ್ಲಿ ಕಳೆದ ಒಂದು ವರ್ಷದಿಂದ ಎದುರಾಗಿದ್ದ 'ಕೋವಿಡ್ 19'(Covid-19) ಪರಿಸ್ಥಿತಿಯನ್ನು ಸರ್ಕಾರ ಸಮರ್ಪಕವಾಗಿ ಎದುರಿಸಿದೆ. ಈ ಹೊಸ ಸ್ವರೂಪದ ವೈರಸ್ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.
High Court: ಬಿಎಸ್ ವೈ ಸರ್ಕಾರಕ್ಕೆ ಶಾಕ್ ಕೊಟ್ಟ ಹೈಕೋರ್ಟ್..!
ಬ್ರಿಟನ್ನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಹಾಗೂ ಬ್ರಿಟನ್ನಿಂದ ಬರುವ ವಿಮಾನಗಳನ್ನು ನಿಷೇಧಿಸಬೇಕೆಂಬ ಬೇಡಿಕೆಯ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ಇವೆಲ್ಲ ಕಾಲ್ಪನಿಕ ಸನ್ನಿವೇಶಗಳು, ಕಾಲ್ಪನಿಕ ಮಾತುಕತೆಗಳು, ಕಾಲ್ಪನಿಕ ಭೀತಿ. ನೀವು ಇವುಗಳ ಬಗ್ಗೆ ಚಿಂತಿಸಲು ಹೋಗಬೇಡಿ' ಎಂದು ಹೇಳಿದರು.
ಬಿಜೆಪಿ ಜತೆ ಜೆಡಿಎಸ್ ವಿಲೀನ ಸಾಧ್ಯವೇ ಇಲ್ಲ : ಕುಮಾರಸ್ವಾಮಿ ಸ್ಪಷ್ಟನೆ
'ಸರ್ಕಾರ ಎಲ್ಲದರ ಬಗ್ಗೆಯೂ ಸಂಪೂರ್ಣ ಜಾಗರೂಕವಾಗಿದೆ. ಜನರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.
ದುಬಾರಿ ಶುಲ್ಕ ಪಾವತಿ ಬಗ್ಗೆ ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್