ಸೊರಬ: ತಾಲೂಕಿನಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಅಸ್ತಿತ್ವವೇ ಇಲ್ಲದಂತಾಗಿದ್ದು, ಹಿಂದಿನ ಶಾಸಕರ ಅವಧಿ ಭ್ರಷ್ಟಾಚಾರದಲ್ಲೇ ಮುಳುಗಿ ಹೋಗಿದೆ. ಮಾಜಿ ಶಾಸಕರು ಆಗೊಮ್ಮೆ, ಈಗೊಮ್ಮೆ ತಾಲೂಕಿಗೆ ಬಂದು ಸುದ್ದಿಗೋಷ್ಠಿ ನಡೆಸಿ ಬೀಗುವುದರಲ್ಲಿ ನಿರತರಾಗಿದ್ದಾರೆ ಎಂದು ಶಾಸಕ ಕುಮಾರ ಬಂಗಾರಪ್ಪ ಲೇವಡಿ ಮಾಡಿದರು.
ಪಟ್ಟಣದಲ್ಲಿ ಬಿಜೆಪಿಯ ಗ್ರಾಮ ಸ್ವರಾಜ್ಯ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಕುಮಾರ್ ಬಂಗಾರಪ್ಪ, ಮಧುಬಂಗಾರಪ್ಪ(Kumar Bangarappa) ಒಂದಾಗಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುಳ್ಳುಸುದ್ದಿ ಹರಡಲಾಗುತ್ತಿದೆ. ಸಂಸಾರದಲ್ಲಿ ಅಣ್ಣ-ತಮ್ಮಂದಿರು ಒಂದಾಗಬೇಕೆಂಬ ಮಾತು ಸರಿಯಾದರೂ, ರಾಜಕೀಯವಾಗಿ ಸಲ್ಲದು. ತಾವು ಬಿಜೆಪಿಯ ಕಟ್ಟಾಳಾಗಿದ್ದು, ತಾವೆಂದೆಂದಿಗೂ ಬಿಜೆಪಿಯವರೇ ಆಗಿದ್ದೇವೆ. ಇನ್ನು ಅಸ್ತಿತ್ವದಲ್ಲೇ ಇಲ್ಲದ ಮಧು ಬಂಗಾರಪ್ಪ ಬಿಜೆಪಿಗೆ ಸೇರಿ ಶಕ್ತಿ ತುಂಬಿಕೊಳ್ಳುವುದಾದರೇ ತುಂಬಿಕೊಳ್ಳಲಿ ಎಂದರು.
ದಿಢೀರ್ ಕೋಡಿಹಳ್ಳಿ ಚಂದ್ರಶೇಖರ್ ಗೆ ಪೋನ್ ಮಾಡಿದ ಲಕ್ಷ್ಮಣ್ ಸವದಿ!
ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸೊರಬವನ್ನು ಪುರಸಭೆಯನ್ನಾಗಿ ಆನವಟ್ಟಿಯನ್ನು ಪಪಂ ಆಗಿ ಮೇಲ್ದರ್ಜೆಗೆ ಏರಿಸಲಾಗಿದೆ. ರಾಷ್ಟ್ರೀಯ ಜನಗಣತಿ ಮುಕ್ತಾಯದ ನಂತರ ಪಾರ್ಲಿಮೆಂಟ್ ಡಿಲೇಷನ್ 2021-22ರಲ್ಲಿ ಆಗಲಿದೆ. ಗ್ರಾಪಂ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರದ ಕೋವಿಡ್ ನಿಯಮಾವಳಿ ಪ್ರಕಾರ ಚುನಾವಣೆ ನಡೆಸಬೇಕು. ಈಗ 2ನೇ ಹಂತದಲ್ಲಿ 41 ಗ್ರಾಪಂಗಳ ಪೈಕಿ ಡಿಸೆಂಬರ್ 27ರಂದು 36 ಗ್ರಾಪಂಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಇನ್ನುಳಿದ ಗ್ರಾಪಂ ಹೊಸ ವಾರ್ಡ್ಗಳ ಸೇರ್ಪಡೆಯ ನಂತರ, ಹೊಸ ಗ್ರಾಪಂಗಳನ್ನು ಸರ್ಕಾರ ಮಾಡಿದ ನಂತರ ಸೊರಬ ಪುರಸಭೆಗೆ ಸೇರಿದ ಹೊಸ ವಾರ್ಡ್ಗಳಿಗೆ ಹಾಗೂ ಆನವಟ್ಟಿಪಪಂಗೆ ಚುನಾವಣೆ ನಡೆಯಲಿದೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದೂ 'ನಾಯಿ ಮೊಲೆಯ ಹಾಲಿದ್ದಂತೆ'