ನವದೆಹಲಿ: ತಮಿಳುನಾಡಿನ ಇಬ್ಬರು ಸೂಪರ್ ಸ್ಟಾರ್ ಈಗ ರಾಜಕೀಯವಾಗಿ ಸುದ್ದಿಯಲ್ಲಿದ್ದಾರೆ ,ಒಬ್ಬರು ರಜನಿಕಾಂತ್,ಇನ್ನೊಬ್ಬರು ಕಮಲ್ ಹಾಸನ್.
ಈಗಾಗಲೇ ಕಮಲ್ ಹಾಸನ್ ತಮ್ಮ ರಾಜಕೀಯ ನಡೆ ಕೇಸರಿಯಲ್ಲ ಎಂದು ಹೇಳಿದ್ದರೆ, ಇನ್ನೊಂದೆಡೆಗೆ ರಜನಿಕಾಂತ್ ಆಧ್ಯಾತ್ಮಿಕ ರಾಜಕೀಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗೆ ಈ ಎರಡು ಭಿನ್ನ ನಡೆಗಳ ರಾಜಕೀಯ ಪಯಣಕ್ಕೆ ಈ ಇಬ್ಬರು ನಟರು ಕಾಲಿಟ್ಟಿದ್ದಾರೆ.
ಈಗಾಗಲೇ ಕಮಲ್ ಹಾಸನ್ ರವರ ನಡೆಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಬೆಂಬಲ ವ್ಯಕ್ತಪಡಿಸಿದ್ದಾರೆ.ಇದರ ಜೊತೆಗೆ ಆಂಧ್ರಪ್ರದೇಶ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಬೆಂಬಲ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.ಈ ಕುರಿತಾಗಿ ಚಂದ್ರಬಾಬು ನಾಯ್ಡು ಬೆಂಬಲದ ಕುರಿತಾಗಿ ಪ್ರಸ್ತಾಪಿಸಿರುವ ಕಮಲ್ ಹಾಸನ್ " ಚಂದ್ರಬಾಬು ನಾಯ್ಡು ನನಗೆ ಕಳೆದ ರಾತ್ರಿ ಕರೆ ಮಾಡಿ ತಮ್ಮ ಅಭಿಮಾನಿ ಎಂದು ಹೇಳಿದ್ದರು, ಹೊಸ ಪಕ್ಷದ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದರು ಆದರೆ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಒಂದು ಕಡೆ ಇತ್ತೀಚಿಗೆ ಆಂಧ್ರಪ್ರದೇಶಕ್ಕೆ ವಿಶೇಷ ಅನುಧಾನದ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ತೆಲುಗು ದೇಶಂ ನಡುವೆ ತಿಕ್ಕಾಟ ನಡೆದಿತ್ತು, ಈ ಹಿನ್ನಲೆಯಲ್ಲಿ ಮುಂದೆ ತೆಲುಗು ದೇಶಂ ನಡೆ ಹೇಗೆ ರಾಜಕೀಯ ತಿರುವು ಪಡೆದುಕೊಳ್ಳಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು.