ಚಳಿಗಾಲದಲ್ಲಿ ತ್ವಚೆ ಒಣ(Dry skin)ಗುವುದು ಸಾಮಾನ್ಯ ಸಮಸ್ಯೆ. ಅದನ್ನ ಪರಿಹರಿಸಲು ಇಲ್ಲಿದೆ ಉಪಯುಕ್ತ ಮಾಹಿತಿ. ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ವಿಪರೀತ ತುರಿಕೆ ಹಾಗೂ ಕಡಿತ ಸಾಮಾನ್ಯವಾಗಿ ಕಂಡು ಬರುತ್ತದೆ. ಇದನ್ನು ದೂರ ಮಾಡಲು ಲೋಳೆಸರವನ್ನು ಬಳಸಿ. ಅಲೋವೆರಾದ ಸಿಪ್ಪೆ ಹಾಗೂ ಮುಳ್ಳನ್ನು ಪ್ರತ್ಯೇಕಿಸಿ. ತುರಿಕೆ ಇರುವ ಅಥವಾ ಒಣ ಚರ್ಮಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ.
ಸ್ನಾನದ ಅವಧಿ ಕನಿಷ್ಟವಾಗಿರಲಿ. ಅತಿ ದೀರ್ಘವೆಂದರೆ ಹದಿನೈದರಿಂದ ಇಪ್ಪತ್ತು ನಿಮಿಷಗಳ ಒಳಗೆ ನಿಮ್ಮ ಸ್ನಾನ ಪೂರ್ಣಗೊಳ್ಳುವಂತೆ ನೋಡಿಕೊಳ್ಳಿ. ಇದಕ್ಕೂ ಹೆಚ್ಚಿನ ಹೊತ್ತಿನ ಸ್ನಾನದಿಂದ ತ್ವಚೆಯ ಅಗತ್ಯ ತೈಲಗಳು ಹೊರಹೋಗುವ ಮೂಲಕ ಒಣಚರ್ಮವನ್ನು ಇನ್ನಷ್ಟು ಒಣದಾಗಿಸಬಹುದು.
ನಿಮಗೆ ಗೊತ್ತೆ? ಸೌತೆಕಾಯಿಯಲ್ಲಿದೆ ಆರೋಗ್ಯ ಮತ್ತು ಸೌಂದರ್ಯದ ಗುಟ್ಟು..!
ಬಿಸಿನೀರಿನ ಸ್ನಾನ ನಿಮಗೆ ಅಪ್ಯಾಯಮಾನವೆಂದು ಅನ್ನಿಸಬಹುದು. ಆದರೆ ಇದರೊಂದಿಗೇ ಕೆಲವಾರು ಅನೈಚ್ಛಿಕ ತೊಂದರೆಗಳೂ ಎದುರಾಗುತ್ತವೆ. ಚರ್ಮದ ಹೊರಪದರ ಪಕಳೆ ಏಳುವುದು, ತಲೆಹೊಟ್ಟು ಹಾಗೂ ವೃದ್ದಾಪ್ಯದ ಚಿಹ್ನೆಗಳು ಆವರಿಸುವುದನ್ನು ಶೀಘ್ರವಾಗಿಸಬಹುದು. ಆದ್ದರಿಂದ ಸ್ನಾನಕ್ಕೆ ಉಗುರುಬೆಚ್ಚನೆಯ ನೀರನ್ನು ಬಳಸುವುದು ಉತ್ತಮ. ಸಾಧ್ಯವಾದರೆ ತಣ್ಣೀರನ್ನು ಬಳಸಬೇಕು. ಒಣತ್ವಚೆಯವರಿಗೆ ತಣ್ಣೀರು ಅತ್ಯುತ್ತಮವಾಗಿದೆ. ಇದರಿಂದ ತ್ವಚೆಯ ಸೂಕ್ಷ್ಮರಂಧ್ರಗಳು ಅತಿ ಕಡಿಮೆ ತೆರೆಯುತ್ತವೆ ಹಾಗೂ ತೈಲನಷ್ಟ ಕನಿಷ್ಟವಾಗಿರುತ್ತದೆ.
ಈ ಕಾಯಿಲೆಗಳಿಗೆ ರಾಮಬಾಣ ಅಜ್ವಾಯಿನ್ ನೀರು, ಹೇಗೆ ತಯಾರಿಸಬೇಕು? ಇಲ್ಲಿದೆ ವಿಧಾನ
ಸ್ನಾನಕ್ಕೂ ಮುನ್ನ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಮೈಗೆಲ್ಲಾ ಹಚ್ಚಿಕೊಳ್ಳುವ ಮೂಲಕ ಒಣಚರ್ಮದವರಿಗೆ ಹೆಚ್ಚಿನ ಆರೈಕೆ ದೊರಕುತ್ತದೆ. ಕೊಬ್ಬರಿ ಎಣ್ಣೆಯ ತ್ವಚೆಯ ಆಳಕ್ಕಿಳಿದು ಪೋಷಣೆ ನೀಡುವ ಗುಣ ಹೊಂದಿದೆ ಹಾಗೂ ಸ್ನಾನದ ಸಮಯದಲ್ಲಿ ಸೂಕ್ಷ್ಮರಂಧ್ರಗಳಿಂದ ಆರ್ದ್ರತೆ ನಷ್ಟವಾಗದಂತೆ ತಡೆಯುತ್ತದೆ. ಆದರೆ ಕೊಬ್ಬರಿ ಎಣ್ಣೆಯನ್ನು ಪ್ರತಿ ಬಾರಿಯ ಸ್ನಾನಕ್ಕೂ ಮುಂಚೆ ಹಚ್ಚಿಕೊಳ್ಳಬೇಕಾಗಿಲ್ಲ. ದಿನದ ಯಾವುದೇ ಹೊತ್ತಿನಲ್ಲಿ ಹಚ್ಚಿಕೊಳ್ಳಬಹುದು. ಕೊಬ್ಬರಿ ಎಣ್ಣೆ ಅಗ್ಗವೂ ಹಾಗೂ ಅತ್ಯಂತ ಉತ್ತಮವಾದ ತೇವಕಾರಕವೂ ಆಗಿರುವ ಕಾರಣ ಇದನ್ನು ಬಳಸದಿರಲು ಕಾರಣ ಉಳಿಯುವುದಿಲ್ಲ. ಕೊಬ್ಬರಿ ಎಣ್ಣೆಯ ನೈಸರ್ಗಿಕ ಪರಿಮಳದೊಂದಿಗೆ ನಿಮ್ಮ ಇಷ್ಟದ ಲ್ಯಾವೆಂಡರ್ ಅಥವಾ ಇತರ ಅವಶ್ಯಕ ತೈಲದ ಹನಿಗಳನ್ನು ಬೆರೆಸಿಕೊಳ್ಳುವ ಮೂಲಕ ನಿಮ್ಮ ಸ್ನಾನವನ್ನು ಇನ್ನಷ್ಟು ತೇಜೋಹಾರಿಯಾಗಿಸಬಹುದು.
ಸ್ವಾದಿಷ್ಠ ಹಾಗೂ ರುಚಿಕರದ ಜೊತೆಗೆ ಆರೋಗ್ಯಕ್ಕೂ ಉತ್ತಮ ಈ ತುಳಸಿ ಚಟ್ನಿ, ಇಲ್ಲಿದೆ Unique Recipe
ಟೊಮೆಟೊ ಪೇಸ್ಟ್ ಗೆ ರೋಸ್ ವಾಟರ್ ಬೆರೆಸಿ ಕೈ ಕಾಲು ಕುತ್ತಿಗೆಗೆ ಹಚ್ಚಿ. ಇದರಿಂದ ತ್ವಚೆ ಒಡೆಯುವುದಿಲ್ಲ. ಒಣತ್ವಚೆ ಇರುವಲ್ಲಿಗೆ ತೆಂಗಿನೆಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದಲೂ ಪರಿಹಾರ ಕಂಡುಕೊಳ್ಳಬಹುದು.
ಜೇನುತುಪ್ಪಕ್ಕೆ ಗುಲಾಬಿ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ ಹಚ್ಚಿದರೂ ತ್ವಚೆ ಒಣಗುವುದಿಲ್ಲ. ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಎಳ್ಳೆಣ್ಣೆ ಹಚ್ಚಿ ಮಸಾಜ್ ಮಾಡಿ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖವೂ ಹೊಳೆಯುತ್ತದೆ. ಒಣ ತ್ವಚೆ ಸಮಸ್ಯೆಯೂ ದೂರವಾಗುತ್ತದೆ.
Winter, dry skin, health tips, water, skin problem,