ಬ್ಯಾಂಕ್ ಹಗರಣದ ಹಿನ್ನಲೆ, ಬ್ಯಾಂಕ್ ಗಳ ಪ್ರಸ್ತುತ ವರದಿ ಕೇಳಿದ ಹಣಕಾಸು ಸಚಿವಾಲಯ

       

Last Updated : Feb 15, 2018, 01:07 PM IST
ಬ್ಯಾಂಕ್ ಹಗರಣದ ಹಿನ್ನಲೆ, ಬ್ಯಾಂಕ್ ಗಳ ಪ್ರಸ್ತುತ ವರದಿ ಕೇಳಿದ ಹಣಕಾಸು ಸಚಿವಾಲಯ title=

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 1.77 ಬಿಲಿಯನ್ ಡಾಲರ್ ಮೊತ್ತದ ಹಗರಣ ಕಂಡು ಬಂದ ಹಿನ್ನಲೆಯಲ್ಲಿ ಹಣಕಾಸು ಸಚಿವಾಲಯವು ಎಲ್ಲ ಬ್ಯಾಂಕುಗಳಿಗೆ ಪ್ರಸ್ತುತ ಸ್ಥಿತಿಗತಿಯ ವರದಿಯನ್ನು ಕೇಳಿದೆ.

ಈ ಬ್ಯಾಂಕ ಹಗರಣ ಸತ್ಯಂ ಕಂಪ್ಯೂಟರ್ಸ್ ನ 9000 ಸಾವಿರ ಕೋಟಿಗಳಿಗೂ ಅಧಿಕ ಎಂದು ಹೇಳಲಾಗಿದೆ.ಹಣಕಾಸು ಸಚಿವಾಲಯ ಎಲ್ಲ ಬ್ಯಾಂಕುಗಳಿಗೆ ನಿರ್ದೇಶನ ನೀಡುತ್ತಾ ಯಾವುದೇ ಪ್ರಾಮಾಣಿಕ ವ್ಯಕ್ತಿಗೂ ಮೋಸವಾಗಬಾರದು,ಅಲ್ಲದೆ ಈ ಹಗರಣದಲ್ಲಿ ಭಾಗಿಯಾದ ವ್ಯಕ್ತಿ ತಪ್ಪಿಸಿಕೊಳ್ಳಬಾರದು ಎಂದು  ಹಣಕಾಸು ಸಚಿವಾಲಯ ತನ್ನ ನಿರ್ದೇಶನದಲ್ಲಿ ಅದು ತಿಳಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಬುಧವಾರದಂದು ಮುಂಬೈ ಬ್ಯಾಂಕೊಂದರಲ್ಲಿ ಅನಧಿಕೃತ ಹಣಕಾಸು ವ್ಯವಹಾರದ ಬಗ್ಗೆ ವರದಿಯಾಗಿದೆ.ಈ ಸಂದರ್ಭದಲ್ಲಿ ಕೆಲವೇ ಖಾತೆದಾರರಿಗೆ ಅನುಕೂಲ ಮಾಡಿಕೊಟ್ಟಿರುವಂತಹ ಸಂಗತಿ ಬೆಳಕಿಗೆ ಬಂದಿದೆ.ಈ ಕುರಿತಾಗಿ ಪಿಟಿಐ ಸುದ್ದಿ ಸಂಸ್ಥೆ ಗೆ ತಿಳಿಸಿರುವ  ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ರಾಜೀವ್ ಕುಮಾರ್ "ಹಣಕಾಸು ಸಚಿವಾಲಯವು ಈಗಾಗಲೇ ಸಾಲಗಾರರಿಗೆ ವರದಿಯನ್ನು ಸಿಬಿಐ ಒಪ್ಪಿಸಲು ಕೋರಲಾಗಿದೆ.

ಈಗಾಗಲೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಈಗಾಗಲೇ ಸಿಬಿಐ ಎರಡು ದೂರುಗಳನ್ನು ಸ್ವೀಕರಿಸಿದೆ.ಅದರಲ್ಲಿ ದೂರುದಾರರು ಬಿಲಿಯನರ್ ನಿರವ್ ಮೋದಿ  ಹಾಗೂ ಜ್ಯೂವೆಲರ ಕಂಪನಿ ವಿರುದ್ದದ ಹಣಕಾಸು ವ್ಯವಹಾರದಲ್ಲಿನ ದುರುಪಯೋಗಪಡಿಸಿದ್ದಕ್ಕಾಗಿ ದೂರು ದಾಖಲಿಸಲಾಗಿದೆ.  

Trending News