ಬೆಂಗಳೂರು ಹಿಂಸಾಚಾರದ ತನಿಖೆ ಕೈಗೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ

ಆಗಸ್ಟ್ 11, 2020 ರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರದೇಶಗಳಲ್ಲಿ ನಡೆದ ಹಿಂಸಾಚಾರ ಪ್ರಕರಣಗಳ ತನಿಖೆಯನ್ನು ವಹಿಸಿಕೊಂಡಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ತಿಳಿಸಿದೆ.

Last Updated : Sep 22, 2020, 06:59 PM IST
ಬೆಂಗಳೂರು ಹಿಂಸಾಚಾರದ ತನಿಖೆ ಕೈಗೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ  title=
Photo Courtsey : ANI

ಬೆಂಗಳೂರು: ಆಗಸ್ಟ್ 11, 2020 ರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರದೇಶಗಳಲ್ಲಿ ನಡೆದ ಹಿಂಸಾಚಾರ ಪ್ರಕರಣಗಳ ತನಿಖೆಯನ್ನು ವಹಿಸಿಕೊಂಡಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ತಿಳಿಸಿದೆ.

ಅಧಿಕೃತ ಹೇಳಿಕೆಯ ಪ್ರಕಾರ ಈ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಐಜಿ ಶ್ರೇಣಿಯ ಅಧಿಕಾರಿಯ ನೇತೃತ್ವದ ಎನ್‌ಐಎ ತಂಡವು ಬೆಂಗಳೂರಿನಲ್ಲಿ ಕ್ಯಾಂಪ್ ಹೂಡಿದೆ. ಈ ಹಿಂದೆ ಆಗಸ್ಟ್ ನಲ್ಲಿ ಕಾಂಗ್ರೆಸ್ ಶಾಸಕ ನವೀನ್ ಶ್ರೀನಿವಾಸ್ ಮೂರ್ತಿ  ಅವರ ಮನೆಯ ಮುಂದೆ 1000 ಕ್ಕೂ ಹೆಚ್ಚು ಜನರು ಜಮಾಯಿಸಿದಾಗ ದೊಡ್ಡ ಪ್ರಮಾಣದ ಹಿಂಸಾಚಾರ ಸಂಭವಿಸಿತ್ತು, ಈ ಘಟನೆಯ ನಂತರ ರಾಜ್ಯ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯನ್ನು ಜಾರಿಗೊಳಿಸಿದ್ದರು.

ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಗೆ ಕಾರ್ಪೂರೇಟರ್ ಕುಮ್ಮಕ್ಕು: ವಿಚಾರಣೆ ವೇಳೆ ಅಖಂಡ ಹೇಳಿಕೆ

ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆಂದು ಆರೋಪಿಸಿ ಶಾಸಕರ ಸೋದರಳಿಯ 2020 ರ ಆಗಸ್ಟ್ 11 ರಂದು ಸಂಜೆ 4 ಗಂಟೆ ಸುಮಾರಿಗೆ ಪ್ರವಾದಿ ಮೊಹಮ್ಮದ್ ಕುರಿತು ಮಾಡಿದ ಅವಹೇಳನಕಾರಿ ಫೇಸ್‌ಬುಕ್ ಪೋಸ್ಟ್ ವಿರುದ್ಧ ಜನರು ಪ್ರತಿಭಟಿಸುತ್ತಿದ್ದರು.ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಮುಜಾಮಿಲ್ ಪಾಷಾ ಈ ಹಿಂದೆ ಸಭೆ ಕರೆದು ಪಿಎಫ್‌ಐ / ಎಸ್‌ಡಿಪಿಐ ಸದಸ್ಯರಿಗೆ ಜನಸಮೂಹವನ್ನು ಪ್ರಚೋದಿಸಲು ಮತ್ತು ಹಿಂಸಾಚಾರವನ್ನು ಪ್ರಚೋದಿಸುವಂತೆ ನಿರ್ದೇಶನ ನೀಡಿದ್ದರು ಎಂದು ದೂರಲಾಗಿದೆ.

ಜನರ ಗುಂಪು ಬೆಂಗಳೂರು ನಗರದ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಪುಲಕೇಶಿ ನಗರ ಪ್ರದೇಶದಲ್ಲಿ ಹಲ್ಲೆ ನಡೆಸಿತು ಮತ್ತು ಡಿಜೆ ಹಳ್ಳಿ ಪಿಎಸ್ ಮತ್ತು ಕೆಜಿ ಹಳ್ಳಿ ಪಿಎಸ್ ಎಂಬ ಎರಡು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆ ಆಸ್ತಿಯನ್ನು ಹಾನಿಗೊಳಿಸಿತು.

ಮೂರ್ತಿ ಅವರ ಮನೆಯ ಮೇಲೂ ಜನರ ಗುಂಪು ದಾಳಿ ನಡೆಸಿತ್ತು. ಅವರು ಎಫ್‌ಐಆರ್‌ನಲ್ಲಿ 20 ಲಕ್ಷ ರೂ. ಚಿನ್ನ ಕಳ್ಳತನವಾಗಿದೆ ಮತ್ತು 50 ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅವರು ದೂರು ದಾಖಲಿಸಿದ್ದರು.
 

Trending News