ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ನಡುವೆಯೇ ಜೀವನವು ಕ್ರಮೇಣ ಸಾಮಾನ್ಯವಾಗುತ್ತಿದೆ. ಅನ್ಲಾಕ್ 4 (Unlock 4 ) ಸಮಯದಲ್ಲಿ ಆರ್ಥಿಕತೆಯನ್ನು ಮತ್ತೆ ಟ್ರ್ಯಾಕ್ ಗೆ ತರಲ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಸಿನೆಮಾ ಹಾಲ್ಗಳು (Cinema Hall) ಯಾವಾಗ ತೆರೆಯುತ್ತವೆ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ಇತ್ತೀಚೆಗೆ ಈ ನಿಟ್ಟಿನಲ್ಲಿ ಅಕ್ಟೋಬರ್ 1 ರಿಂದ ಸರ್ಕಾರ ಚಿತ್ರಮಂದಿರವನ್ನು ತೆರೆಯಲು ಅನುಮತಿ ನೀಡಿದೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.
ಈ ಷರತ್ತುಗಳೊಂದಿಗೆ ದೆಹಲಿಯ ಈ ವಿದ್ಯಾರ್ಥಿಗಳು ಸೆಪ್ಟೆಂಬರ್ 21 ರಿಂದ ಶಾಲೆಗೆ ಹೋಗಲು ಸಾಧ್ಯ!
ಆದರೆ ಈ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಇದೊಂದು ನಕಲಿ ಸುದ್ದಿ ಎಂದು ಸಾಬೀತಾಗಿದೆ. ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ತನ್ನ ಫ್ಯಾಕ್ಟ್ ಚೆಕ್ನಲ್ಲಿ ಇದನ್ನು ಕಂಡು ಹಿಡಿದಿದೆ. ಅಂದರೆ, ಅಕ್ಟೋಬರ್ 1 ರಿಂದ ಸರ್ಕಾರ ಸಿನಿಮಾ ಹಾಲ್ ತೆರೆಯಲು ಹೋಗುವುದಿಲ್ಲ. ಕಟ್ಟುನಿಟ್ಟಿನ ನಿಯಮಗಳೊಂದಿಗೆ ಅಕ್ಟೋಬರ್ 1 ರಿಂದ ದೇಶಾದ್ಯಂತ ಸಿನೆಮಾ ಹಾಲ್ಗಳನ್ನು ಪುನಃ ತೆರೆಯಲು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ ಎಂಬ ವರದಿಗಳು ನಕಲಿ ವರದಿಗಳಾಗಿವೆ ಎಂದು ಅದು ಸ್ಪಷ್ಟಪಡಿಸಿದೆ.
Claim:A Media report has claimed that Home Ministry has ordered reopening of cinema halls across the country from 1st October with the imposition of strict regulations. #PIBFactCheck: This claim is #Fake. No decision has been taken by @HMOIndia on reopening the cinema halls yet pic.twitter.com/hc903cfXnm
— PIB Fact Check (@PIBFactCheck) September 14, 2020
ಯಾವುದೇ ಆದೇಶವನ್ನು ನೀಡಿಲ್ಲ:
ಅಂತಹ ಯಾವುದೇ ಆದೇಶವನ್ನು ಸರ್ಕಾರ ನೀಡಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಸ್ಪಷ್ಟಪಡಿಸಿದೆ. ಪಿಐಬಿ ತನ್ನ ಟ್ವೀಟ್ನಲ್ಲಿ ಅಕ್ಟೋಬರ್ 1 ರಿಂದ ಸಿನೆಮಾ ಹಾಲ್ ಅನ್ನು ಕಟ್ಟುನಿಟ್ಟಿನ ನಿಯಮಗಳೊಂದಿಗೆ ತೆರೆಯಲು ಗೃಹ ಸಚಿವಾಲಯ ಆದೇಶಿಸಿದೆ ಎಂದು ಹೇಳಲಾಗುತ್ತಿದೆ. ಈ ಹಕ್ಕು ನಮ್ಮ ತನಿಖೆಯಲ್ಲಿ ಸುಳ್ಳು ಎಂದು ಸಾಬೀತಾಗಿದೆ. ಅಂತಹ ಯಾವುದೇ ಆದೇಶವನ್ನು ಸರ್ಕಾರ ನೀಡಿಲ್ಲ ಎಂದು ತಿಳಿಸಿದೆ.
ಅನ್ಲಾಕ್-4: ಪಬ್, ಕ್ಲಬ್, ಬಾರ್ ಆಂಡ್ ರೆಸ್ಟೋರೆಂಟ್ ಆರಂಭ
ವಿಶೇಷವೆಂದರೆ ಅನ್ಲಾಕ್ 4.0 ರಲ್ಲಿ ಮೆಟ್ರೋ (Metro) ಸೇವೆಯನ್ನು ಪುನಃಸ್ಥಾಪಿಸಲು ಸರ್ಕಾರ ಅನುಮತಿ ನೀಡಿತ್ತು, ಆದರೆ ಸಿನೆಮಾ ಹಾಲ್, ಈಜುಕೊಳ ಮತ್ತು ರಂಗಮಂದಿರವನ್ನು ಸೆಪ್ಟೆಂಬರ್ 30 ರವರೆಗೆ ಮುಚ್ಚುವಂತೆ ಕೇಳಿದೆ. ಕರೋನಾದ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ಇದೀಗ ಸಿನೆಮಾ ಹಾಲ್ ತೆರೆಯುವ ಅಪಾಯವನ್ನು ತೆಗೆದುಕೊಳ್ಳಲು ಸರ್ಕಾರ ಬಯಸುವುದಿಲ್ಲ. ಆದ್ದರಿಂದ ಈ ಕುರಿತಂತೆ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.