ಮಾಸ್ಕೋ: ಪ್ರಸ್ತುತ ಇಡೀ ವಿಶ್ವ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದೆ. ಆದರೆ, ಇನ್ನೊಂದೆಡೆ ಮತ್ತೊಂದು ಸ್ಪರ್ಧೆ ಕೂಡ ಏರ್ಪಟ್ಟಿದ್ದು, ಈ ಸ್ಪರ್ಧೆಯಲ್ಲಿ ಇಡೀ ವಿಶ್ವ ಭಾಗವಹಿಸಿದೆ. ಅದೇನೆಂದರೆ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುವ ವೈರಸ್ ಅಭಿವೃದ್ಧಿ. ವ್ಯಾಕ್ಸಿನ್ ಅಭಿವೃದ್ಧಿಯ ಈ ರೆಸ್ ನಲ್ಲಿ ಪ್ರಸ್ತುತ ರಷ್ಯಾ ಗೆಲುವು ಸಾಧಿಸಿದಂತೆ ಕಂಡುಬರುತ್ತಿದೆ. ಹೌದು, ಈ ಕುರಿತು ಘೋಷಣೆ ಮಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್, ತಮ್ಮ ದೇಶ ಕೊರೊನಾವೈರಸ್ ವಿರುದ್ಧ ಹೋರಾಟ ನಡೆಸುವ ವ್ಯಾಕ್ಸಿನ್ ಅನ್ನು ಸಿದ್ಧಪಡಿಸಿದೆ ಹಾಗೂ ಅದನ್ನು ರಜಿಸ್ಟರ್ ಕೂಡ ಮಾಡಿದೆ ಎಂದು ಘೋಷಿಸಿದ್ದಾರೆ. ಕೊರೊನಾ ವ್ಯಾಕ್ಸಿನ್ ಅನ್ನು ನೋಂದಣಿ ಮಾಡಿದ ಮೊಟ್ಟ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ.
ಇದೊಂದು ಐತಿಹಾಸಿಕ ಕ್ಷಣ ಎಂದ ಪುಟಿನ್
ಈ ಕುರಿತು ಮಾತನಾಡಿರುವ ಪುಟಿನ್, ಈ ವ್ಯಾಕ್ಸಿನ್ ಅನ್ನು ಅವರ ಇಬ್ಬರು ಪುತ್ರಿಯರ ಪೈಕಿ ಓರ್ವ ಪುತ್ರಿಗೆ ಈಗಾಗಲೇ ನೀಡಲಾಗಿದ್ದು, ತಮ್ಮ ಪುತ್ರಿ ಇದೀಗ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ದೇಶದ ವ್ಯಾಕ್ಸಿನ್ ಪರೀಕ್ಷೆಯ ವೇಳೆ ಉತ್ತಮ ಫಲಿತಾಂಶಗಳನ್ನು ನೀಡಿದೆ. ದೀರ್ಘ ಕಾಲದವರೆಗೆ ಈ ವ್ಯಾಕ್ಸಿನ್ ಜನರನ್ನು ಕೊರೊನಾ ವೈರಸ್ ನಿಂದ ರಕ್ಷಣೆ ಒದಗಿಸಲಿದೆ ಎಂದು ಹೇಳಿದ್ದಾರೆ. ಎಲ್ಲ ಅತ್ಯಾವಶ್ಯಕ ಟೆಸ್ಟ್ ಗಳನ್ನು ಈ ವ್ಯಾಕ್ಸಿನ್ ಪಾರು ಮಾಡಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅಲ್ಲಿನ ಸರ್ಕಾರ ಈ ವ್ಯಾಕ್ಸಿನ್ ಮೊದಲು ಡೋಸ್ ಅನ್ನು ಅಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಅಧ್ಯಾಪಕರಿಗೆ ನೀಡಲಾಗುವದು ಎಂದು ಹೇಳಿದೆ. ಜೊತೆಗೆ ಕೊರೊನಾ ಸೋಂಕಿಗೆ ಅತಿ ಬೇಗ ಒಳಗಾಗುವರಿಗೂ ಕೂಡ ಮೊದಲ ಡೋಸ್ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಬರುವ ಅಕ್ಟೋಬರ್ ನಿಂದ ದೇಶಾದ್ಯಂತ ಇರುವ ಎಲ್ಲ ಜನರಿಗೆ ಈ ವ್ಯಾಕ್ಸಿನ್ ನೀಡಲಾಗುವುದು ಎಂದು ರಷ್ಯಾ ಹೇಳಿದೆ.
ಈ ವ್ಯಾಕ್ಸಿನ್ ಅನ್ನು ರಷ್ಯಾದ ಗಮಾಲೆಯಾ ರಿಸರ್ಚ್ ಇನ್ಸ್ಟಿಟ್ಯೂಟ್ ಹಾಗೂ ಅಲ್ಲಿನ ರಕ್ಷಣಾ ಇಲಾಖೆ ಜಂಟಿಯಾಗಿ ಅಭಿವೃದ್ಧಿಗೊಳಿಸಿವೆ. ವರದಿಗಳ ಪ್ರಕಾರ ಆಗಸ್ಟ್ 12ರಂದು ಈ ವ್ಯಾಕ್ಸಿನ್ ನ ನೋಂದಣಿ ಕಾರ್ಯ ನಡೆಯಬೇಕಿತ್ತು. ಆದರೆ, ತರಾತುರಿಯಲ್ಲಿ ಈ ವ್ಯಾಕ್ಸಿನ್ ಕುರಿತು ಮಾಡಲಾಗಿರುವ ಘೋಷಣೆಯನ್ನು ಇಡೀ ವಿಶ್ವವೇ ಪ್ರಶ್ನಿಸುತ್ತಿದೆ. ಫೆಸ್-3 ರ ಟ್ರಯಲ್ ಮೊದಲು ಈ ವ್ಯಾಕ್ಸಿನ್ ಅನ್ನು ರಜಿಸ್ಟರ್ ಮಾಡುವುದು ಉಚಿತವಲ್ಲ ಎಂದು ಈ ದೇಶಗಳು ಹೇಳುತ್ತಿವೆ. ರಷ್ಯಾದ ಕ್ಲಿನಿಕಲ್ ಟ್ರಯಲ್ ನ ಮೊದಲ ಪ್ರಯೋಗ ಜೂನ್ 18ಕ್ಕೆ ಆರಂಭಗೊಂಡಿತ್ತು ಈ ಪರೀಕ್ಷೆಯಲ್ಲಿ ಒಟ್ಟು 38 ಜನರು ಪಾಲ್ಗೊಂಡಿದ್ದರು. ಪಾಲ್ಗೊಂಡ ಎಲ್ಲರಲ್ಲಿಯೂ ಕೂಡ ವೈರಸ್ ವಿರುದ್ಧ ಪ್ರತಿರೋಧಕ ಶಕ್ತಿ ನಿರ್ಮಾಣಗೊಂಡಿತ್ತು ಕ್ಲಿನಿಕಲ್ ಟ್ರಯಲ್ ನಡೆಸಲಾದ ಈ ಮೊದಲ ತಂಡ ಜುಲೈ 15ಕ್ಕೆ ಡಿಸ್ಚಾರ್ಜ್ ಗೊಂಡಿತ್ತು. ಎರಡನೇ ಗ್ರೂಪ್ ಮೇಲೆ ಜುಲೈ 20 ರಂದು ಆರಂಭಗೊಂಡಿತ್ತು.