ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (IPL-2020) ಆಯೋಜಿಸಲು ಭಾರತೀಯ ಕ್ರಿಕೆಟ್ ಮಂಡಳಿ (BCCI)ಕೇಂದ್ರ ಸರ್ಕಾರದಿಂದ ಔಪಚಾರಿಕ ಅನುಮೋದನೆ ಪಡೆದಿದೆ. ಲೀಗ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸೋಮವಾರ ಈ ಮಾಹಿತಿ ನೀಡಿದ್ದಾರೆ. ಈ ಬಾರಿಯ ಐಪಿಎಲ್ ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ನ ಶಾರ್ಜಾ, ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. ಕಳೆದ ವಾರ ಬಿಸಿಸಿಐಗೆ ಸರ್ಕಾರ ತಾತ್ವಿಕವಾಗಿ ಅನುಮೋದನೆ ನೀಡಿತ್ತು. ಭಾರತದಲ್ಲಿ ಹೆಚ್ಚುತ್ತಿರುವ ಕರೋನಾ ವೈರಸ್ ಸಾಂಕ್ರಾಮಿಕ ಪ್ರಕರಣಗಳಿಂದಾಗಿ ಯುಎಇಯಲ್ಲಿ ಈ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಲಾಗಿದೆ.
ಈ ಕುರಿತು PTI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು ಈ ಕುರಿತು ನಮಗೆ ಲಿಖಿತ ಅನುಮತಿ ದೊರೆತಿದೆ ಎಂದಿದ್ದಾರೆ, ಕೇಂದ್ರ ಗೃಹ ಹಾಗೂ ವಿದೇಶಾಂಗ ಇಲಾಖೆ ಇದಕ್ಕೆ ಅನುಮತಿ ನೀಡಿವೆಯೇ ಎಂದು ಅವರನ್ನು ಪ್ರಶ್ನಿಸಲಾಗಿತ್ತು.
ಭಾರತದ ಯಾವುದೇ ಕ್ರೀಡಾ ಸಂಸ್ಥೆ ವಿದೇಶದಲ್ಲಿ ದೇಶೀಯ ಪಂದ್ಯಾವಳಿಗಳನ್ನು ನಡೆಸಲು ನಿರ್ಧರಿಸುವ ಮೊದಲು ಕೇಂದ್ರ ಗೃಹ, ವಿದೇಶಾಂಗ ಮತ್ತು ಕ್ರೀಡಾ ಸಚಿವಾಲಯದಿಂದ ಅನುಮೋದನೆ ಪಡೆಯಬೇಕಾಗುತ್ತದೆ. ಸರ್ಕಾರದ ಅನುಮೋದನೆ ಪಡೆದ ನಂತರ ನಾವು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದೇವೆ ಎಂದು ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸದ್ಯ ನಮಗೆ ಲಿಖಿತ ಅನುಮೋದನೆ ದೊರೆತಿದೆ ಹಾಗೂ ಈ ಕುರಿತು ತಂಡಗಳಿಗೆ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಟೂರ್ನಿಗಾಗಿ ಬಹುತೇಕ ತಂಡಗಳು ಆಗಸ್ಟ್ 20 ರ ನಂತರ ರವಾನೆಯಾಗಲಿದೆ. ತಂಡಗಳು ನಿರ್ಗಮಿಸುವ ಮೊದಲು 24 ಗಂಟೆಗಳ ಒಳಗೆ ಆಟಗಾರರಿಗೆ ಎರಡು ಆರ್ಟಿ ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಸ್ಟ್ 22ರಂದು ರವಾನೆಯಾಗಲಿದ್ದು, ಇದಕ್ಕಾಗಿ ಚೆಪಾಕ್ ಕ್ರೀಡಾಂಗಣದಲ್ಲಿ ಒಂದು ಚಿಕ್ಕ ಶಿಬಿರ ಆಯೋಜಿಸಲಾಗುವುದು. ಇನ್ನೊಂದೆಡೆ ಒಂದು ವರ್ಷದ ಅವಧಿಗಾಗಿ ಚೀನಾ ಕಂಪನಿಯ ಜೊತೆಗಿನ ಕರಾರು ರದ್ದಾದ ಬಳಿಕ ಇದೀಗ BCCI ಈ ಪಂದ್ಯಾವಳಿಯ ಟೈಟಲ್ ಸ್ಪಾನ್ಸರ್ ಗಳ ಹುಡುಕಾಟದಲ್ಲಿ ನಿರತವಾಗಿದೆ. ಒಟ್ಟು 440 ಕೋಟಿ ರೂ. ಮೌಲ್ಯದ ಒಪ್ಪಂದ ಇದಾಗಿತ್ತು. BCCI ಇದಕ್ಕಾಗಿ ಟಾಟಾ ಮೋಟರ್ಸ್, BYJU'S ಗಳಂತಹ ಕಂಪನಿಗಳನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಈ ಟೈಟಲ್ ಸ್ಪಾನ್ಸರ್ ಶಿಪ್ ಮುಂದಿನ ಒಂದು ವರ್ಷದ ಅವಧಿಗೆ ಇರಲಿದೆ. 2021ರ IPL ಸೀಸನ್ ಗಾಗಿ ಮತ್ತೆ ಚೀನಾದ ಮೊಬೈಲ್ ತಯಾರಕ ಕಂಪನಿ VIVO ಮರಳುವ ಸಾಧ್ಯತೆ ಇದೆ.
ರೆಸ್ ನಲ್ಲಿ ಬಾಬಾ ರಾಮ್ ದೇವ್ ಅವರ ಕಂಪನಿ ಪತಂಜಲಿ
ಈ ರೆಸ್ ನಲ್ಲಿ ಬೆಚ್ಚಿಬೀಳಿಸುವ ಸಂಗತಿ ಎಂದರೆ, ಬಾಬಾ ರಾಮ್ ದೇವ್ ಅವರ ಪತಂಜಲಿ ಕಂಪನಿಯೂ ಕೂಡ ಈ ರೆಸ್ ನಲ್ಲಿ ಶಾಮೀಲಾಗಿದೆ ಎನ್ನಲಾಗಿದೆ. ಪತಂಜಲಿ ಸೇರಿದಂತೆ ಇತರೆ ಬ್ರಾಂಡಿಂಗ್ ಗಳಿಗಾಗಿ ಶೇ.20 ರಿಂದ ಶೇ.30 ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. BCCI ಈ ವಿಷಯದಲ್ಲಿ ಯಾವ ನಿರ್ಣಯ ಕೈಗೊಳ್ಳ ಲಿದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ. 2018-19 ರ ಆರ್ಥಿಕ ವರ್ಷದಲ್ಲಿ ಪತಂಜಲಿ ಸಂಸ್ಥೆ 8,329 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಆದರೆ, ಕಂಪನಿಯ ಒಟ್ಟು ಟರ್ನ್ ಓವರ್ ಅಂದಾಜಿಗಿಂತ ಹೆಚ್ಚು ಇರುವ ಸಾಧ್ಯತೆ ಇದೆ.