ಜಯಪುರ್: ರಾಜಸ್ಥಾನದ ಅಲ್ವಾರ್, ಅಜ್ಮೀರ್ ಲೋಕಸಭೆ ಮತ್ತು ಮಂಡಲಗಢ ವಿಧಾನಸಭೆ ಸ್ಥಾನಗಳಿಗೆ ಉಪ ಚುನಾವಣೆಯ ಫಲಿತಾಂಶಗಳು ಇಂದು ಹೊರಬೀಳಲಿದೆ. ಈ ಮೂರು ಸ್ಥಾನಗಳಲ್ಲಿ ಬಿಜೆಪಿ-ಕಾಂಗ್ರೇಸ್ ನಡುವೆ ಪೈಪೋಟಿ ಹೆಚ್ಚಾಗಿದೆ.
ಅಲ್ವಾರ್ ಲೋಕಸಭಾ ಕ್ಷೇತ್ರ
ಡಾ. ಕರಣ್ ಸಿಂಗ್ ಯಾದವ್ (ಕಾಂಗ್ರೆಸ್) V/S ಡಾ. ಜಸ್ವಂತ್ ಯಾದವ್ (ಬಿಜೆಪಿ)
ರಾಜಸ್ಥಾನದ ಅಲ್ವಾರ್ ಲೋಕಸಭಾ ಉಪಚುನಾವಣೆಯಲ್ಲಿ ಯಾದವ್ V/S ಯಾದವ್ ನಡುವೆ ಸ್ಪರ್ಧೆ ಇದೆ. ಇದನ್ನು ವೈದ್ಯರ ನಡುವಿನ ಜಿದ್ದಾಜಿದ್ದಿ ಎಂದೂ ಕರೆಯಬಹುದು. ಕಾಂಗ್ರೆಸ್ ಪರವಾಗಿ ಡಾ. ಕರಣ್ ಸಿಂಗ್ ಯಾದವ್ ಕಣದಲ್ಲಿದ್ದಾರೆ ಬಿಜೆಪಿಯಿಂದ ಡಾ. ಜಸ್ವಂತ್ ಸಿಂಗ್ ಯಾದವ್ ಮೈದಾನದಲ್ಲಿದ್ದಾರೆ. ಜಸ್ವಂತ್ ಸಿಂಗ್ ಅವರು ವಸುಂಧರಾ ಸರ್ಕಾರದಲ್ಲಿ ಕಾರ್ಮಿಕ ಸಚಿವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಅಜ್ಮೀರ್ ಲೋಕಸಭಾ ಕ್ಷೇತ್ರ
ಡಾ. ರಘು ಶರ್ಮಾ (ಕಾಂಗ್ರೆಸ್) V/S ರಾಮರಾಮ್ ಲಂಬಾ (ಬಿಜೆಪಿ)
ಅಜ್ಮೇರ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸನ್ವಾರ್ ಲಾಲ್ ಜಾಟ್ ಅವರ ಪುತ್ರ ರಮೇಶ್ ಲಂಬಾ ಸ್ಪರ್ಧಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಸನ್ವಾರ್ ಲಾಲ್ ಜಾಟ್ ರಾಜಸ್ಥಾನ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲೆಟ್ರನ್ನು ಸೋಲಿಸಿದ್ದರು.
ಅದೇ ಸಮಯದಲ್ಲಿ, ಕಾಂಗ್ರೆಸ್ ಪರವಾಗಿ ಕೇಕ್ರಿ ಶಾಸಕ ಡಾ. ರಘು ಶರ್ಮಾ ಸ್ಪರ್ಧೆಯಲ್ಲಿದ್ದಾರೆ. ಡಾ. ಶರ್ಮಾ ಸಹ ಕೇಕ್ರಿಯ (2008-2013) ಮಾಜಿ ಶಾಸಕರಾಗಿದ್ದರು. ಅವರು ಪೂರ್ವದಲ್ಲಿ ಜೈಪುರದ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ರಘು ಶರ್ಮಾ ರಾಜಸ್ಥಾನ್ ರಾಜಸ್ತಾನ ವಿಶ್ವವಿದ್ಯಾನಿಲಯದ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷರಾಗಿದ್ದರು. ಭಿಲಾಯಿ ಮತ್ತು ಜೈಪುರ ಲೋಕಸಭಾ ಕ್ಷೇತ್ರದಿಂದ ಇಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಮಂಡಲಗಢ ವಿಧಾನಸಭಾ ಕ್ಷೇತ್ರ
ಶಕ್ತಿ ಸಿಂಗ್ (ಬಿಜೆಪಿ) V/S ವಿವೇಕ್ ಧಾರ್ಕ್ (ಕಾಂಗ್ರೆಸ್)
ಮಂಡಲಗಢ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಶಕ್ತಿ ಸಿಂಗ್ ಕಣದಲ್ಲಿದ್ದಾರೆ. ಕಾಂಗ್ರೇಸ್ ಪಕ್ಷದಿಂದ ವಿವೇಕ್ ಧಾರ್ಕ್ ಕಣಕ್ಕಿಳಿದಿದ್ದಾರೆ.
ಒಟ್ಟಿನಲ್ಲಿ ರಾಜಸ್ಥಾನದ ಉಪಚುನಾವಣೆ ಬಿಜೆಪಿ-ಕಾಂಗ್ರೇಸ್ ನಡುವಿನ ಪೈಪೋಟಿಯನ್ನು ಸ್ಪಷ್ಟಪಡಿಸಿದೆ.