ಭಾರತದ ಬಳಿ Rafale ಯುದ್ಧ ವಿಮಾನಗಳು, ಬೆದರಿದ ಪಾಕ್ ವಿಶ್ವದ ಮುಂದಿಟ್ಟ ಬೇಡಿಕೆ ಇದು

ಈ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನ, ಭಾರತದ ಈ ಹೆಜ್ಜೆಯಿಂದ ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಶಸ್ತ್ರಾಸ್ತ್ರಗಳ ಸ್ಪರ್ಧೆ ಏರ್ಪಡಲಿದ್ದು, ಭಾರತದ ಕಾರಣ ವಾತಾವರಣ ಬಿಗಡಾಯಿಸಲಿದೆ ಎಂದು ಹೇಳಿದೆ.

Last Updated : Jul 30, 2020, 06:44 PM IST
ಭಾರತದ ಬಳಿ Rafale ಯುದ್ಧ ವಿಮಾನಗಳು, ಬೆದರಿದ ಪಾಕ್ ವಿಶ್ವದ ಮುಂದಿಟ್ಟ ಬೇಡಿಕೆ ಇದು title=

ನವದೆಹಲಿ: ಭಾರತಕ್ಕೆ ರಾಫೆಲ್(Rafale) ಯುದ್ಧ ವಿಮಾನಗಳ ಆಗಮನದೊಂದಿಗೆ ಪಾಕಿಸ್ತಾನದ ಆತಂಕದಲ್ಲಿ ಹೆಚ್ಚಳವಾಗಿದೆ. ಭಾರತ ತನ್ನ ರಕ್ಷಣೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ. ಭಾರತದ ಈ ಕ್ರಮವು ದಕ್ಷಿಣ ಏಷ್ಯಾದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಪ್ರಾರಂಭಿಸಬಹುದು, ಇದರಿಂದಾಗಿ ವಾತಾವರಣವು ಪ್ರಕ್ಷುಬ್ಧವಾಗಲಿದೆ. ಇದೇ ವೇಳೆ ಭಾರತವು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವಿಕೆಯನ್ನು ತಡೆಯುವಂತೆ ಪಾಕಿಸ್ತಾನವು ಜಾಗತಿಕವಾಗಿ ಮನವಿ ಮಾಡಿದೆ. ರಫೇಲ್ ವಿಮಾನಗಳ ಮೊದಲ ರವಾನೆ ಬುಧವಾರ ಫ್ರಾನ್ಸ್‌ನಿಂದ ಭಾರತಕ್ಕೆ ಬಂದಿಳಿದಿರುವುದು ಇಲ್ಲಿ ಗಮನಾರ್ಹ.

ಈ ಕುರಿತು ತಮ್ಮ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪಾಕ್ ವಿದೇಶಾಂಗ ಇಲಾಖೆಯ ವಕ್ತಾರ ಆಯಷಾ ಫಾರೂಕಿ, "ಭಾರತೀಯ ವಾಯುಪಡೆಯು ಐದು ರಫೇಲ್ ವಿಮಾನಗಳ ಮೊದಲ ರವಾನೆಯನ್ನು ಸ್ವೀಕರಿಸಿದೆ ಎಂದು ಹೇಳಿರುವ ವರದಿಯನ್ನು ನಾವು ನೋಡಿದ್ದೇವೆ. ಭಾರತವು ಅಗತ್ಯಕ್ಕಿಂತ ಹೆಚ್ಚಿನ ಮಿಲಿಟರಿ ಸಾಮರ್ಥ್ಯವನ್ನು ಸ್ಥಿರವಾಗಿ ಸಂಗ್ರಹಿಸುತ್ತಿದೆ ಎಂಬುದು ಅತ್ಯಂತ ಗೊಂದಲದ ಸಂಗತಿಯಾಗಿದೆ. ಭಾರತ ಈಗ ಎರಡನೇ ದೊಡ್ಡ ಶಸ್ತ್ರಾಸ್ತ್ರ ಆಮದು ದೇಶವಾಗಿದೆ. ಇದು ದಕ್ಷಿಣ ಏಷ್ಯಾದಲ್ಲಿ ಕಾರ್ಯತಂತ್ರದ ಸ್ಥಿರತೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ" ಎಂದಿದ್ದಾರೆ.

"ಭಾರತವು ಸಾಮರ್ಥ್ಯಕ್ಕಿಂತ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳುವುದು ಪಾಕಿಸ್ತಾನಕ್ಕೆ ಉತ್ತಮ ಸಂಕೇತವಲ್ಲ. ಇದು ಗೊಂದಲದ ಸಂಗತಿಯಾಗಿದೆ. ಅಂತರರಾಷ್ಟ್ರೀಯ ಸಮುದಾಯವು ಈ ಬಗ್ಗೆ ಗಮನಹರಿಸಬೇಕು" ಎಂದು ಅವರು ಹೇಳಿದ್ದಾರೆ. ಈ ವಿಮಾನಗಳು ಬರುವ ಮುನ್ನವೇ ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥರು ಪಾಕ್ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಜ್ವಾ ಅವರೊಂದಿಗೆ ತುರ್ತು ಸಭೆ ನಡೆಸಬೇಕಾಯಿತು ಎಂಬುದು ಇಲ್ಲಿ ಗಮನಾರ್ಹ್ತ. ಮತ್ತೊಂದೆಡೆ, ರಾಫೆಲ್ ಬಂದ ನಂತರ ಚೀನಾ ಕೂಡ ಖಂಡಿತವಾಗಿಯೂ ಆಘಾತಕ್ಕೊಳಗಾಗಿದೆ. ಆದರೆ, ಚೀನಾದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಹೊರಬಂದಿಲ್ಲ.

Trending News