ಮುಂಬೈ: ಕಳೆದ ಐದು ತಿಂಗಳಲ್ಲಿ, ಕರೋನಾ ವೈರಸ್ ಮಹಾಮಾರಿ ಮತ್ತು ಲಾಕ್ಡೌನ್ ಹಿನ್ನೆಲೆ ಮನೆ ಖರೀದಿಸುವವರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಏತನ್ಮಧ್ಯೆ, ಹೊಸ ಗ್ರಾಹಕರನ್ನು ಸೆಳೆಯಲು ಎಲ್ಐಸಿ ತನ್ನ ಬಡ್ಡಿದರಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಗೃಹ ಸಾಲ ಕಂಪನಿ ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಬುಧವಾರ ಗೃಹ ಸಾಲ ತೆಗೆದುಕೊಳ್ಳುವ ಹೊಸ ಗ್ರಾಹಕರಿಗೆ ಬಡ್ಡಿದರವನ್ನು ಶೇಕಡಾ 6.90 ಕ್ಕೆ ಇಳಿಸಿದೆ ಎಂದು ಹೇಳಿದೆ. ಇದು ಇದುವರೆಗಿನ ಗೃಹಸಾಲದ ಬಡ್ಡಿ ದರದಲ್ಲಿನ ಅತ್ಯಂತ ಕಡಿಮೆ ಇಳಿಕೆಯಾಗಿದೆ.
ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಲು ಇಲ್ಲಿವೆ ಷರತ್ತುಗಳು
ಸಿಬಿಲ್(CIBIL) ಸ್ಕೋರ್ 700 ಅಥವಾ ಅದಕ್ಕಿಂತ ಹೆಚ್ಚಿರುವ ಗ್ರಾಹಕರಿಗೆ ಗೃಹ ಸಾಲವನ್ನು ಒದಗಿಸಲಾಗುತ್ತದೆ. ಸಿಬಿಲ್ನಲ್ಲಿ 700 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿರುವ ಗ್ರಾಹಕರಿಗೆ ರೂ, 50 ಲಕ್ಷವರೆಗಿನ ಗೃಹಸಾಲಕ್ಕೆ ಶೇಕಡಾ 6.90 ರಷ್ಟು ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ ಎಂದು ಎಲ್ಐಸಿ ಹೌಸಿಂಗ್ ಫೈನಾನ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಂತೆಯೇ, ಅದೇ ಅಂಕದೊಂದಿಗೆ 80 ಲಕ್ಷ ರೂ.ಗಿಂತ ಹೆಚ್ಚಿನ ಗೃಹ ಸಾಲವನ್ನು ತೆಗೆದುಕೊಳ್ಳುವವರಿಗೆ ಶೇಕಡಾ 7 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ಎಲ್ಐಸಿಎಚ್ಎಫ್ಎಲ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಿದ್ಧಾರ್ಥ್ ಮೊಹಂತಿ, "ಕಂಪನಿಯ ಗೃಹ ಸಾಲದ ಮೇಲಿನ ಬಡ್ಡಿದರವು ಅತ್ಯಂತ ಕಡಿಮೆ ಮಟ್ಟವನ್ನು ತಲುಪಿದೆ, ಇದರಿಂದಾಗಿ ಗ್ರಾಹಕರಿಗೆ ಸಾಲದ ಮೇಲಿನ ಮಾಸಿಕ ಕಂತು ಕಡಿಮೆಯಾಗುತ್ತದೆ. ಆಕರ್ಷಕ ಬೆಲೆ ಬಿಂದುಗಳು ಮತ್ತು ಅಗ್ಗದ ಇಎಂಐಗಳು ಮನೆಗಳನ್ನು ಖರೀದಿಸುವ ಬೇಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡಲಿವೆ" ಎಂದಿದ್ದಾರೆ.
ಈ ಹೊಸ ಉತ್ಪನ್ನದ ಮೂಲಕ ಕಂಪನಿಯು ವಸತಿ ಕ್ಷೇತ್ರದಲ್ಲಿ ಬೇಡಿಕೆಯನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ. ಸಿಬಿಲ್ನಲ್ಲಿ 800 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಮನೆಗಳನ್ನು ಖರೀದಿಸಿದ ಹೊಸ ಗ್ರಾಹಕರಿಗೆ ಏಪ್ರಿಲ್ನಲ್ಲಿ ಕಂಪನಿಯು ಗೃಹ ಸಾಲದ ಬಡ್ಡಿದರವನ್ನು 7.5 ಪ್ರತಿಶತಕ್ಕೆ ಇಳಿಸಿತ್ತು
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಕಡಿತಗೊಳಿಸಿದ ನಂತರ ವಿತ್ತೀಯ ಕೋಶದ ವೆಚ್ಚವೂ ಕೂಡ ಮೃದುವಾಗಿದೆ. ಕಂಪನಿಯ ನಿಧಿಯ ವೆಚ್ಚವು ಪ್ರಸ್ತುತ ಶೇಕಡಾ 5.6 ರಷ್ಟಿದೆ. ಕಂಪನಿಯ ಸಾಲದ ಶೇಕಡಾ 25 ಕ್ಕಿಂತ ಕಡಿಮೆ ಮೊತ್ತವು ಕಂತು ಪಾವತಿಗಳ ನಿಷೇಧದಲ್ಲಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಕಂಪನಿಯ ನಿರ್ಮಾಣ ಕಾರ್ಯಕ್ಕಾಗಿ ನೀಡಲಾದ 13,000 ಕೋಟಿ ರೂ.ಗಳ ಸಾಲದಲ್ಲಿ, 8,500 - 9,000 ಕೋಟಿ ರೂಪಾಯಿಗಳನ್ನು ಕಂತು ಪಾವತಿಸುವ ನಿಷೇಧದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.