ನವದೆಹಲಿ: ದೇಶಾದ್ಯಂತ ಜಿಮ್ ಕೇಂದ್ರಗಳನ್ನು ಪುನರಾರಂಭಿಸಬೇಕೆಂದು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕನ್ನಡಿಗರೂ ಆಗಿರುವ ಬಿ.ವಿ.ಶ್ರೀನಿವಾಸ್ ಅವರು ಪ್ರಧಾನಿ ಮೋದಿ ಅವರಿಗೆ ಆಗ್ರಹಿಸಿದ್ದಾರೆ.
जब वित्तीय फायदे के लिए ठेके खुल सकते,
तो शारिरिक फायदे के लिए जिम क्यों नही ?#GymKholoModiJi pic.twitter.com/h6GyavQfTW— Srinivas B V (@srinivasiyc) July 21, 2020
ಈಗಾಗಲೇ ಮಾಲ್ ಗಳು ಬಜಾರ್ ಗಳು ಸಾರಾಯಿ ಅಂಗಡಿಗಳು,ವಿಮಾನಯಾನ ಹೀಗೆ ಎಲ್ಲವೂ ಮುಕ್ತವಾಗಿದೆ.ಆದರೆ ಇದುವರೆಗೂ ಕೂಡ ಜಿಮ್ ಗಳು ಮುಕ್ತವಾಗಿಲ್ಲ.ಆದ್ದರಿಂದ ಇವುಗಳನ್ನು ಆರಂಭಿಸಲು ನಿಮಗಿರುವ ತೊಂದರೆಯಾದರೂ ಏನು ಮೋದಿಜಿ? ಎಂದು ಅವರು ಪ್ರಶ್ನಿಸಿದ್ದಾರೆ.
ಜಿಮ್ ಅಸೋಸಿಯೇಷನ್,ಬಾಡಿ ಬಿಲ್ಡಿಂಗ್ ಅಸೋಸಿಯೇಷನ್,ಹಾಗೂ ಯುವಕರ ಪರವಾಗಿ #GymKholoModiJiಅಭಿಯಾನದ ಮೂಲಕ ಜಿಮ್ ಕೇಂದ್ರಗಳನ್ನು ತೆರೆಯಲು ಒತ್ತಾಯಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ಮನವಿ ಮಾಡಿದ್ದಾರೆ.
ಈಗಾಗಲೇ ಲಾಕ್ ಡೌನ್ ಹಿನ್ನಲೆಯಲ್ಲಿ ಜಿಮ್ ತರಬೇತಿದಾರರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದು, ತಮ್ಮ ಸಿಬ್ಬಂದಿಗೆ ವೇತನ ನೀಡುವುದು ಕಷ್ಟಕರವಾಗಿದೆ ಎಂದರು.
ಯುವಕರು ತಮ್ಮ ಫಿಟ್ನೆಸ್ ಹಾಗೂ ಮಾನಸಿಕ ಶಾಂತಿಯನ್ನು ಕಾಯ್ದುಕೊಳ್ಳಲು ಜಿಮ್ ಗಳು ಸೂಕ್ತ ಸ್ಥಳವಾಗಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಸಾಧ್ಯವಾದಷ್ಟು ಬೇಗ ವಿಶೇಷ ಮಾರ್ಗಸೂಚಿಗಳ ಮೂಲಕ ಜಿಮ್ ಕೇಂದ್ರಗಳನ್ನು ತೆರೆಯಬೇಕೆಂದು ಬಿ.ವಿ ಶ್ರೀನಿವಾಸ್ ಒತ್ತಾಯಿಸಿದ್ದಾರೆ.