ಹೈದರಾಬಾದ್: ಸರ್ಕಾರದ ಪ್ರಮುಖ ವಿಷಯಗಳ ಪ್ರಚಾರಕ್ಕೆ ರಾಯಭಾರಿಗಳನ್ನಾಗಿ ಖ್ಯಾತನಾಮರನ್ನು ನೇಮಿಸುವುದು ರೂಢಿ. ಆದರೆ ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿ ನಗರ ನಿರ್ಮಾಣದ ರಾಯಭಾರಿಯನ್ನಾಗಿ ವಿಶೇಷಗಳಲ್ಲೇ ವಿಶೇಷ ಎನ್ನುವಂತಹ ವ್ಯಕ್ತಿಯೊಬ್ಬರನ್ನು ನೇಮಿಸಲಾಗಿದೆ. ಈ ಸುದ್ದಿ ಕೇಳಿದರೆ ಖಂಡಿತಕ್ಕೂ ಅಚ್ಚರಿಗೊಳ್ಳುವಿರಿ; ಅಮರಾವತಿ ನಗರದ ನೂತನ ರಾಯಭಾರಿ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ! ಆಕೆಯ ಹೆಸರು ಅಂಬುಲಾ ವೈಷ್ಣವಿ.
రాజధాని నిర్మాణం కోసం రూ.లక్ష విరాళంగా ఇచ్చిన తొమ్మిదో తరగతి బాలిక వైష్ణవిని చూస్తుంటే గర్వంగా ఉంది. ఇంత చిన్న వయసులో పెద్ద మనసుతో రెండు ప్రభుత్వ పాఠశాలలనూ దత్తత తీసుకుని అభివృద్ధి చేస్తోన్న ఈ చిన్నారిని అమరావతికి అంబాసిడర్గా ఎంపిక చేస్తున్నాము. pic.twitter.com/B9h0rT3vUu
— N Chandrababu Naidu (@ncbn) January 29, 2018
ಅಂಬುಲಾ ವೈಷ್ಣವಿಯದು ಖಂಡಿತಕ್ಕೂ ವಿಶಿಷ್ಟ ವ್ಯಕ್ತಿತ್ವ. ವಿದ್ಯಾರ್ಥಿಯಾಗಿದ್ದರೂ ಎರಡು ಶಾಲೆಗಳನ್ನು ದತ್ತು ಪಡೆದಿರುವ ಧೀರೋದಾತ್ತೆ. ಎರಡು ಶಾಲೆಗಳ ಅಭಿವೃದ್ಧಿಗೆ ನಾಲ್ಕು ಲಕ್ಷ ಖರ್ಚಾಗಿದೆ. ಆ ಪೈಕಿ ವೈಷ್ಣವಿ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಭರಿಸಿದ್ದಾಳೆ. ಆದ್ದರಿಂದಲೇ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಮನವನ್ನೂ ಸೆಳೆದಿದ್ದಾಳೆ. ವಯಸ್ಸು ಚಿಕ್ಕದಾದರೂ ದೊಡ್ಡ ಉದ್ದೇಶಕ್ಕೆ ಪಣತೊಟ್ಟಿರುವ ಅಂಬುಲಾ ವೈಷ್ಣವಿಗೆ ಚಂದ್ರಬಾಬು ನಾಯ್ಡು ಮತ್ತೂ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅಮರಾವತಿ ನಗರ ನಿರ್ಮಾಣದ ರಾಯಭಾರಿಯನ್ನಾಗಿ ನೇಮಿಸಿದ್ದಾರೆ.