ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಿಂದ ಸಂಜಯ್ ಜಾ ಅವರನ್ನು ಅಮಾನತುಗೊಳಿಸಲಾಗಿದೆ.
ಖಾಸಗಿ ವಾಹಿನಿಯಲ್ಲಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಹೊರಡಿಸಿದ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಬಾಲಾಸಾಹೇಬ್ ಥೋರತ್ ಅವರು ಸಹಿ ಮಾಡಿದ ನೋಟಿಸ್ ನೀಡಲಾಗಿದೆ."ಏನೂ ನನಗೆ ಆಶ್ಚರ್ಯವಾಗುವುದಿಲ್ಲ. ನಾನು ಪಾಲ್ಗೊಂಡ ಪಕ್ಷ ವಿರೋಧಿ ಚಟುವಟಿಕೆಗಳು ಯಾವುವು? ಕಾಂಗ್ರೆಸ್ ಮಾಡಬಹುದಾದ ಕನಿಷ್ಠ ಕೆಲಸವೆಂದರೆ ನನ್ನನ್ನು ಸಂಪರ್ಕಿಸುವುದು" ಎಂದು ಜಾ ತಮ್ಮ ಅಮಾನತು ವಿಚಾರದ ಬಗ್ಗೆ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರ ಸಂಜಯ್ ಜಾ ಗೆ ಕೊರೋನಾ ಪೊಸಿಟಿವ್...!
'ನಾವು ಅತ್ಯಂತ ಅಸಹಿಷ್ಣು ಸಂಸ್ಕೃತಿಯನ್ನು ತೋರಿಸುತ್ತಿದ್ದೇವೆ" ಎಂದು ಅವರು ಹೇಳಿದರು, ಅಮಾನತುಗೊಳಿಸುವ ಮೊದಲು ಅವರನ್ನು ಸಮಾಲೋಚಿಸಿಲ್ಲ ಅಥವಾ ಮಾತನಾಡಲಿಲ್ಲ' ಎಂದರು. ಕಾಂಗ್ರೆಸ್ ನ ಹಿರಿಯ ನಾಯಕರಾದ ಜಾ ಅವರನ್ನು ಕಳೆದ ತಿಂಗಳು ಪಕ್ಷದ ವಕ್ತಾರ ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ಕಳೆದ ತಿಂಗಳು ಪಕ್ಷವನ್ನು ಟೀಕಿಸಿ ಬರೆದ ಲೇಖನದ ಹಿನ್ನಲೆಯಲ್ಲಿ ಅವರನ್ನು ಕಾಂಗ್ರೆಸ್ ವಕ್ತಾರ ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ಕಾಂಗ್ರೆಸ್ ತನ್ನ ಪ್ರಜಾಪ್ರಭುತ್ವ, ಸಹಿಷ್ಣು ಮತ್ತು ಉದಾರವಾದಿ ಮೌಲ್ಯಗಳಿಂದ "ದೂರ ಸರಿದಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಪಂಡಿತ್ ನೆಹರೂ ಒಮ್ಮೆ ನಿರಂಕುಶಾಧಿಕಾರಿಯಾಗುವುದರ ವಿರುದ್ಧ ಎಚ್ಚರಿಕೆ ನೀಡುವ ಪತ್ರಿಕೆಯಲ್ಲಿ ಅನಾಮಧೇಯವಾಗಿ ಸ್ವಯಂ ವಿಮರ್ಶಾತ್ಮಕ ತುಣುಕು ಬರೆದಿದ್ದಾರೆ. ಅದು ನಿಜವಾದ ಕಾಂಗ್ರೆಸ್; ಪ್ರಜಾಪ್ರಭುತ್ವ, ಉದಾರವಾದಿ, ಸಹಿಷ್ಣು, ಅಂತರ್ಗತ. ನಾವು ಆ ಮೌಲ್ಯಗಳಿಂದ ದೂರ ಸರಿದಿದ್ದೇವೆ. ಏಕೆ?" ಎಂದು ಜಾ ಅವರು ಜೂನ್ 18 ರಂದು ಟ್ವೀಟ್ ಮಾಡಿದ್ದಾರೆ.ಆದಾಗ್ಯೂ, ಅವರು ಪಕ್ಷದ "ಬದ್ಧ, ನಿರ್ಭೀತ ಸೈದ್ಧಾಂತಿಕ ಸೈನಿಕ" ಆಗಿ ಉಳಿದಿದ್ದಾರೆ ಎಂದು ಅವರು ಒತ್ತಿ ಹೇಳಿದರು.
ಸಚಿನ್ ಪೈಲಟ್ ಅವರ ಬಂಡಾಯದ ನಂತರ ಅಶೋಕ್ ಗೆಹ್ಲೋಟ್ ಸರ್ಕಾರವು ಕುಸಿತದ ಅಂಚಿನಲ್ಲಿರುವ ರಾಜಸ್ಥಾನದಲ್ಲಿನ ಅವ್ಯವಸ್ಥೆಯ ಮಧ್ಯೆ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ.