ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ 9 ರಹಸ್ಯ ಸ್ಥಳಗಳನ್ನು ಬಹಿರಂಗ ಪಡಿಸಿದ ಅಮೇರಿಕಾ

ಇಸ್ಲಾಮಾಬಾದ್ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ವೇಗವಾಗಿ ವಿಸ್ತರಿಸುತ್ತಿದೆ- ಯು.ಎಸ್. ವಿಜ್ಞಾನಿಗಳು

Last Updated : Sep 25, 2017, 11:39 AM IST
ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ 9 ರಹಸ್ಯ ಸ್ಥಳಗಳನ್ನು ಬಹಿರಂಗ ಪಡಿಸಿದ ಅಮೇರಿಕಾ title=
ಸಾಂದರ್ಭಿಕ ಚಿತ್ರ

ನವದೆಹಲಿ: ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಕನಿಷ್ಠ ಒಂಬತ್ತು ಸ್ಥಳಗಳಲ್ಲಿ ಸಂಗ್ರಹಿಸಿದೆ ಎಂದು ಅಮೆರಿಕಾದ ವಿಜ್ಞಾನಿಗಳು ತಮ್ಮ ಇತ್ತೀಚಿನ ನಿರ್ಣಯದಲ್ಲಿ ಸೂಚಿಸಿದ್ದಾರೆ. ನೆರೆಯ ರಾಷ್ಟ್ರವಾದ ಇಸ್ಲಾಮಾಬಾದ್ 130-140 ಪ್ರಮಾಣದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು  ಹೆಚ್ಚಿಸುತ್ತಿದೆ ಎಂದೂ ಸಹ ತಿಳಿದುಬಂದಿದೆ. 

ಪಾಕಿಸ್ತಾನವು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿರುವ ಒಂಭತ್ತು ಸ್ಥಳಗಳಲ್ಲಿ ನಾಲ್ಕು ಸ್ಥಳಗಳು ಪಾಕಿಸ್ತಾನ ಸಮೀಪದ ಪಂಜಾಬ್ ಸಮೀಪವಿದೆ, ಸಿಂಧ್ ಪ್ರಾಂತ್ಯದ ಹತ್ತಿರ ಮೂರು ಮತ್ತು ಬಲೂಚಿಸ್ತಾನ್ ಹಾಗೂ ಖೈಬರ್ ಪಖ್ತುಂಖ್ವ ಪ್ರದೇಶಗಳ ಸುತ್ತಲೂ ತಲಾ ಒಂದೊಂದು ಸ್ಥಳಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ.

ಫೆಡರೇಶನ್ ಆಫ್ ಅಮೇರಿಕನ್ ಸೈಂಟಿಸ್ಟ್ (FAS) ಪ್ರಕಟಿಸಿದ ವರದಿಯಲ್ಲಿ " ಇಸ್ಲಾಮಾಬಾದ್ ಪರಿಮಾನಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ತನ್ನ ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿದೆ ಮತ್ತು ಹೆಚ್ಚಿನ ಸ್ಥಳಗಳಲ್ಲಿ ಸಂಗ್ರಹಿಸುತ್ತಿದೆ. ಆದರೆ ಸ್ಥಳಗಳನ್ನು ಗುರುತಿಸುವುದು ಕಷ್ಟಕರವಾಗಿದೆ" ಎಂದು ತಿಳಿಸಿದೆ. 

ಹ್ಯಾನ್ಸ್ ಎಂ. ಕ್ರಿಸ್ತೆನ್ಸೇನ್  ಮತ್ತು ರಾಬರ್ಟ್ ಎಸ್. ನೋರ್ರಿಸ್ ರವರ ಈ ವರದಿಯು ಈ ಕೆಳಗಿನ ಒಂಭತ್ತು ಸ್ಥಳಗಳಲ್ಲಿ ಪಾಕಿಸ್ತಾನವು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಅದಗಿಸಿತ್ತಿರುವುದಾಗಿ ಅಂದಾಜಿಸಿದೆ: 

1. ಅಕ್ರೊ ಗ್ಯಾರಿಸನ್, ಸಿಂಧ್ (ಸಂಭಾವ್ಯ ಭೂಗತ ಆಯುಧಗಳ ಸಂಗ್ರಹ ಸೈಟ್)
2. ಗುಜ್ರಾನ್ವಾಲಾ ಗ್ಯಾರಿಸನ್, ಪಂಜಾಬ್ (ರಿಮೋಟ್ ಡಿಪೋದಲ್ಲಿ ಘಟಕಗಳೊಂದಿಗೆ ಸಂಭವನೀಯ ಶಸ್ತ್ರಾಸ್ತ್ರ ಸಂಗ್ರಹಣೆ)
3. ಖುಜ್ದಾರ್ ಗ್ಯಾರಿಸನ್, ಬಲೂಚಿಸ್ಥಾನ (ಸಾಧ್ಯವಿರುವ ಭೂಗತ ಶಸ್ತ್ರಾಸ್ತ್ರ ಸಂಗ್ರಹಣಾ ತಾಣ)
4. ಮಾಸ್ರೂರ್ ಡಿಪೋಟ್ (ಕರಾಚಿ), ಸಿಂಧ್ (ಮಸ್ರೂರ್ AB ನಲ್ಲಿ ಮಿರಾಜ್ vs ಬಾಂಬುಗಳ ಸಂಭಾವ್ಯ ಸಂಗ್ರಹ)
5. ರಾಷ್ಟ್ರೀಯ ಅಭಿವೃದ್ಧಿ ಕಾಂಪ್ಲೆಕ್ಸ್ (ಫತೇಜಾಂಗ್), ಪಂಜಾಬ್ (SSM ಲಾಂಚರ್ ಅಸೆಂಬ್ಲಿ ಮತ್ತು ಸಂಭಾವ್ಯ ವಾರ್ಹೆಡ್ ಘಟಕ ಸಂಗ್ರಹ)
6. ಪನೊ ಅಕಿಲ್ ಗ್ಯಾರಿಸನ್, ಸಿಂಧ್ (ದೂರಸ್ಥ ಡಿಪೋದಲ್ಲಿ ಘಟಕಗಳೊಂದಿಗೆ ಸಂಭವನೀಯ ಆಯುಧಗಳ ಸಂಗ್ರಹ)
7. ಸಾರ್ಗೋಧಾ ಡಿಪೋ, ಪಂಜಾಬ್ (ಸಮೀಪದ ಸಾರ್ಗೋಧಾ ಎಬಿ ಮತ್ತು ಎಫ್ -16 ಗಾಗಿ ಬಾಂಬುಗಳ ಸಂಭಾವ್ಯ ಶೇಖರಣಾ ಸ್ಥಳ)
8. ತಾರ್ಬಾಲಾ ಭೂಗತ ಡಿಪೋ, ಖೈಬರ್ ಪಖ್ತುನ್ಖ್ವಾ (ಸಂಭಾವ್ಯ ವಾರ್ಹೆಡ್ ಸ್ಟೋರೇಜ್)
9. ವಾ ಆರ್ಡನೆನ್ಸ್ ಫೆಸಿಲಿಟಿ, ಪಂಜಾಬ್ (ಸಂಭಾವ್ಯ ಕ್ಷಿಪಣಿ ಉತ್ಪಾದನೆ, ವಿಭಜನೆ ಮತ್ತು ವಿಲೇವಾರಿ ಸೌಲಭ್ಯ)

ಈ ಸ್ಥಳಗಳನ್ನು ಗುರುತಿಸಲು ವಿಜ್ಞಾನಿಗಳು ವಾಣಿಜ್ಯ ಉಪಗ್ರಹ ಚಿತ್ರಗಳು, ಪರಿಣಿತ ಅಧ್ಯಯನಗಳು ಸ್ಥಳೀಯ ಸುದ್ದಿ ವರದಿಗಳು ಮತ್ತು ಸ್ಥಳೀಯ ಲೇಖನಗಳನ್ನು ಬಳಸಿದ್ದಾರೆ. 

ಸೆಪ್ಟೆಂಬರ್ 20 ರಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಶಾಹೀದ್ ಖಹಾನ್ ಅಬ್ಬಾಸಿ ಭಾರತದ ಮೇಲೆ ಧಾಳಿ ಮಾಡುವುದಾಗಿ ಬೆದರಿಕೆ ಹಾಕಿದರು. ಜೊತೆಗೆ ಇಸ್ಲಾಮಾಬಾದ್ ನಿಂದ ಅಲ್ಪ ಪ್ರಮಾಣದ ಶಸ್ತ್ರಾಸ್ತ್ರಗಳು ದೊರೆಯುವುದು. ಇದರಿಂದಾಗಿ ಭಾರತೀಯ ಸೈನ್ಯದ ವಿರುದ್ಧ ಅದನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದರು.

ಉತ್ತರ ಕೊರಿಯಾದ ಪರಮಾಣು ಯುದ್ಧದ ಬೆದರಿಕೆಗಳ ನಡುವೆ ಪಾಕಿಸ್ತಾನದ ಹೇಳಿಕೆ.                                                           
ಪಾಕ್ ಪ್ರಧಾನಿ ಅಬ್ಬಾಸಿ ದೇಶದ ಪರಮಾಣು ಶಸ್ತ್ರಾಸ್ತ್ರಗಳು ಭದ್ರ ಮತ್ತು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ. ತಮ್ಮ ಆಯಕಟ್ಟಿನ ಪರಮಾಣು ಸ್ವತ್ತುಗಳ ಮೇಲೆ ನಾವು ಬಹಳ ದೃಢವಾದ ಮತ್ತು ಸುರಕ್ಷಿತವಾದ ನಿಯಂತ್ರಣವನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. 

Trending News