Viral Girl Monalisa: ಮಹಾ ಕುಂಭದಲ್ಲಿ ಕಾಣಿಸಿಕೊಂಡಿದ್ದ ಸುಂದರಿ ಮೋನಾಲಿಸಾ ರಾತ್ರೋ ರಾತ್ರಿ ಫೇಮಸ್ ಆಗಿದ್ದರು. ಆದರೆ ಫೇಮಸ್ ಆಗಿದ್ದೆ ಆಗಿದ್ದು, ಅವರಿಗೆ ಜನರಿಂದ ಜನರಿಂದ ತಡೆಯಲಾರದ ಕಿರುಕುಳ ಎದುರಾಗಿದೆ, ನೆಮ್ಮದಿಯಿಂದ ತಿನ್ನುವುದಕ್ಕೂ, ಕೂರುವುದಕ್ಕೂ ಕೂಡ ಬಿಡದೆ ಕುಂಭ ಮೇಳಕ್ಕೆ ಬಂದ ಜನರು ಅವರನ್ನು ಪೀಡಿಸುತ್ತಿದ್ದಾರೆ.
ಈ ಭಾರಿ ಉತ್ತರ ಕರ್ನಾಟಕದ ಪ್ರಯಾಗ್ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಮೋನಾಲಿಸಾ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು, ಕ್ಯಾಮರಾ ಕಣ್ಣಿಗೆ ಬಿದ್ದಿದ್ದೆ ತಡ, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದೆ ತಡ, ಮೋನಾಲಿಸಾ ಅವರನ್ನು ನೋಡುವುದಕ್ಕಾಗಿಯೇ ಮಹಾಕುಂಭಕ್ಕೆ ಬಂದಿದ್ದ ಜನರೆಲ್ಲರು ಮುಗಿಬಿದ್ದಿದ್ದರು. ರಾತ್ರೋ ರಾತ್ರಿ ಫೇಮಸ್ ಆದ ಮೋನಾಲಿಸ ಅವರನ್ನು ನೋಡಲು ಜನ ಕಿಕ್ಕಿರಿಯುತ್ತಿದ್ದಂತೆ, ಮೋನಾಲಿಸಾ ಅವರಿಗೆ ದೊಡ್ಡ ಸಮಸ್ಯೆಯೇ ಎದುರಾಗಿದೆ.
ಮೋನಾಲಿಸಾ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆದಾಗಿನಿಂದ ಕುಂಭ ಮೇಳಕ್ಕೆ ಪುಣ್ಯ ಸ್ನಾನಕ್ಕೆ ಬಂದಿದ್ದ ಜನ, ಪುಣ್ಯ ಸ್ನಾನ ಮಾಡುವ ಬದಲು ಮೋನಾಲಿಸಾ ಅವರನ್ನು ನೋಡುವುದಕ್ಕೆ ಕಿಕ್ಕಿರಿಯುತ್ತಿದ್ದಾರೆ. ಇದು ಕುಂಭ ಮೇಳ ಸುಂದರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೆ ಮೋನಾಲಿಸಾ ಅವರನ್ನು ನೋಡಲು ಜನ ಮುಗಿಬಿದ್ದು, ಅವರಿಗೆ ತೊಂದರೆ ನೀಡುತ್ತಿದ್ದಾರೆ. ಹಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಮೋನಾಲಿಸಾ ಮಹಾ ಕುಂಭ ಮೇಲ ಬಿಟ್ಟು, ಇದೀಗ ಮನೆಗೆ ಮರಳಿದ್ದಾರೆ.
See what happened to Kumbh Mela Monalisa ?
అతి సర్వత్రా వర్జాయేత్!#MonalisaBhosle #KumbhMela2025 # pic.twitter.com/YVGuc7DjQR
— North East West South (@prawasitv) January 21, 2025
ಆದರೂ, ಸಹ ಜನರು ಮೋನಾಲಿಸಾ ಅವರನ್ನು ನೋಡಲು ಮುಗಿಬಿದ್ದಿದ್ದು, ಇತ್ತೀಚೆಗಷ್ಟೆ ಸೆಲ್ಫಿ ತೆಗೆದುಕೊಳ್ಳಲು ಬಂದ ಕಿಡಿಗೇಡಿಗಳು ಅವರ ಮೇಲೆ ಎರಗಿದ್ದಾರೆ. ಈ ಸಂದರ್ಭದಲ್ಲಿ ಮೋನಾಲಿಸಾ ಅವರ ಫೋನ್ ಕಿತ್ತು ಬಿಸಾಕಿ ಕೋಪಗೊಂಡಿದ್ದರು, ನಂತರ ಅವರು ಕೆಳಗೆ ಬಿದ್ದು ಅವರ ತಲೆಗೆ ಪೆಟ್ಟಾಗಿದ್ದು, ಅವರಿಗೆ 3 ಒಲಿಗೆ ಆಗಲಿದೆ ಎಂದು ಪ್ರತಕ್ಷ ಸಾಕ್ಷಿಗಳು ಹೇಳಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಮೋನಾಲಿಸಾ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಹಾರ ಮಾಡಿಕೊಂಡು ಮನೆಗೆ ಜೀವನ ನಡೆಸಲು ಬೇಕಾಗುವಷ್ಟು ಕೂಲಿ ಸಂಪಾದನೆ ಮಾಡುತ್ತಿದ್ದ ಮೋನಾಲಿಸಾ, ಅವರಿಗೆ ಇದೀಗ ಒಂದು ಕಡೆ ಸಂಪಾದನೆಯೂ ಇಲ್ಲ, ಮತ್ತೊಂದು ಕಡೆ ನೆಮ್ಮದಿಯೂ ಇಲ್ಲದಂತಾಗಿದೆ, ಮೋನಾಲಿಸಾ ಅವರನ್ನು ಕಾಪಾಡಲು ಅವರ ತಂದೆ ಹರಸಾಹಸ ಪಡುತ್ತಿದ್ದು, ಮೋನಾಲಿಸಾ ಅವರನ್ನು ರಕ್ಷಿಸಲು ಅವರ ಅಣ್ಣ ಕೂಡ ಸಾಹಸ ಮಾಡುತ್ತಿದ್ದು, ಅವರಿಗೂ ಕೂಡ ಕಿಡಿ ಗೇಡಿಗಳು ತಳಿಸಿದ್ದಾರೆ ಎನ್ನುವ ಸುದ್ದಿ ಇದೀಗ ಕೇಳಿ ಬರುತ್ತಿದೆ.
#MahaKumbh2025 | Monalisa from Indore has returned home from the Prayagraj Mahakumbh.
Her father reportedly stated that she came to sell garlands, but instead of buying, many people focused on taking photos and videos. Frustrated, he decided to send her back to Indore. pic.twitter.com/YQCSzMVrDx
— Organiser Weekly (@eOrganiser) January 19, 2025
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.