LACಯಲ್ಲಿ ಚೀನಾ-ಭಾರತೀಯ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆ ಬಗ್ಗೆ ಯುಎನ್ ಹೇಳಿದ್ದೇನು?

ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತ  (India) ಮತ್ತು ಚೀನಾ (China) ನಡುವಿನ ಹಿಂಸಾಚಾರ ಮತ್ತು ಸಾವಿನ ವರದಿಗಳ ಬಗ್ಗೆ ವಿಶ್ವಸಂಸ್ಥೆಯ (ಯುಎನ್) ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟಾರೆಸ್ ಕಳವಳ ವ್ಯಕ್ತಪಡಿಸಿದರು.  

Last Updated : Jun 17, 2020, 09:40 AM IST
LACಯಲ್ಲಿ ಚೀನಾ-ಭಾರತೀಯ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆ ಬಗ್ಗೆ ಯುಎನ್ ಹೇಳಿದ್ದೇನು? title=

ವಿಶ್ವಸಂಸ್ಥೆ: ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC) ಭಾರತ  (India) ಮತ್ತು ಚೀನಾ (China)ನಡುವಿನ ಹಿಂಸಾಚಾರ ಮತ್ತು ಸಾವಿನ ವರದಿಗಳ ಬಗ್ಗೆ ವಿಶ್ವಸಂಸ್ಥೆಯ (UN) ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟಾರೆಸ್ ಕಳವಳ ವ್ಯಕ್ತಪಡಿಸಿದ್ದು 'ಗರಿಷ್ಠ ಸಂಯಮ' ಕಾಯ್ದುಕೊಳ್ಳಬೇಕೆಂದು ಎರಡೂ ಕಡೆಯವರನ್ನು ಒತ್ತಾಯಿಸಿದರು.  

ಚೀನಾಕ್ಕೆ ಪಾಠ ಕಲಿಸಲು ಭಾರತದ ಮುಂದಿವೆ 5 ಆಯ್ಕೆಗಳು

ಭಾರತೀಯ ಸೇನೆಯು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ ಪೂರ್ವ ಲಡಾಖ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೇನೆಯ ಒಟ್ಟು 20 ಸೈನಿಕರು ಸಾವನ್ನಪ್ಪಿದ್ದಾರೆ. ಈಗಾಗಲೇ ನಡೆಯುತ್ತಿರುವ ನಿಲುಗಡೆಯ ಪರಿಸ್ಥಿತಿ ಹೆಚ್ಚು ಗಂಭೀರವಾಗಿದೆ ಎಂದು ಗುಟಾರೆಸ್ ವಕ್ತಾರರು ತಿಳಿಸಿದ್ದಾರೆ.

ಚೀನಾ- ಪಾಕ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು! ಆದರೂ ಭಾರತಕ್ಕಿಲ್ಲ ಹೆದರಿಕೆ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರಿ ಕನೆಕೊ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ನೀಡಿದರು. "ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಹಿಂಸಾಚಾರ ಮತ್ತು ಸಾವಿನ ವರದಿಗಳು ಕಳವಳಕಾರಿಯಾಗಿವೆ. ಈ ಸಂದರ್ಭದಲ್ಲಿ ಉಭಯ ದೇಶಗಳು ಸಂಯಮ ಕಾಯ್ದುಕೊಳ್ಳಬೇಕು ಎಂದು ಕನೆಕೊ ಹೇಳಿದರು.

ಲಡಾಖ್ ಹಿಂಸಾಚಾರದ ನಂತರ ಪರಿಸ್ಥಿತಿ ನಿರ್ಣಾಯಕ, LAC ಬಳಿ ಚೀನೀ ಹೆಲಿಕಾಪ್ಟರ್‌ಗಳು

ಲಡಾಖ್‌ನ (Ladakh) ಗಾಲ್ವಾನ್ ಕಣಿವೆಯಲ್ಲಿ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಸೈನಿಕರ ಹುತಾತ್ಮತೆಯ ಪ್ರಶ್ನೆಗೆ ಸಂಬಂಧಿಸಿದಂತೆ ಕನೆಕೊ ಈ ಪ್ರತಿಕ್ರಿಯೆಯನ್ನು ನೀಡಿದರು.

Trending News