Income Tax News: 2025ನೇ ಸಾಲಿನ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದ್ದು ಮುಂಬರುವ ಈ ಬಜೆಟ್ನಲ್ಲಿ ಹಳೆಯ ತೆರಿಗೆ ಪದ್ದತಿಯನ್ನು ರದ್ದು ಮಾಡಲಾಗುತ್ತದೆ ಎನ್ನುವ ಚರ್ಚೆ ಹುಟ್ಟುಕೊಂಡಿದೆ. ಜೊತೆಗೆ ಹಳೆಯ ತೆರಿಗೆ ಪದ್ಧತಿ ರದ್ದು ಮಾಡಿದರೆ ಆದಾಯ ತೆರಿಗೆ ಪಾವತಿಸುವ ಮಧ್ಯಮ ವರ್ಗದವರ ಮೇಲೆ ಅದು ಯಾವ ಪರಿಣಾಮ ಬೀರಲಿದೆ? ಇದು ಲಾಭವೋ, ನಷ್ಟವೋ ಎನ್ನುವ ಚರ್ಚೆಗಳೂ ಹುಟ್ಟಿಕೊಂಡಿವೆ.
ಹಲವು ಕಾರಣಗಳಿಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡಿಸುವ 2025ನೇ ಸಾಲಿನ ಬಜೆಟ್ ಬಗ್ಗೆ ತೀವ್ರವಾದ ಕುತೂಹಲ ಮನೆಮಾಡಿದೆ. ಕೇಂದ್ರ ಸರ್ಕಾರ ಹಳೆಯ ತೆರಿಗೆ ಪದ್ದತಿಯನ್ನು ರದ್ದು ಮಾಡುವ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೂ ಹಳೆಯ ತೆರಿಗೆ ಪದ್ಧತಿ ರದ್ದಾಗಬಹುದು ಎನ್ನುವ ಚರ್ಚೆಗಳು ನಡೆಯುತ್ತಿವೆ. ಸಹಜವಾಗಿ ಇದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ.
ಇದನ್ನೂ ಓದಿ- ತೆರಿಗೆ ಮಿತಿ ಹೆಚ್ಚಳ: ಆದಾಯ ತೆರಿಗೆ ಕಟ್ಟುವವರಿಗೆ ಗುಡ್ ನ್ಯೂಸ್, ಮಧ್ಯಮ ವರ್ಗದವರಿಗೆ ಜಾಕ್ ಪಾಟ್
ಹಳೆಯ ತೆರಿಗೆ ಪದ್ದತಿಯಲ್ಲಿ ಕೆಲವೊಂದು ಕಡಿತಗಳು ಮತ್ತು ವಿನಾಯಿತಿಗಳು ಇದ್ದವು. ಹಾಗಾಗಿ ಮಧ್ಯಮ ವರ್ಗದವರು, ಸಂಬಳದಾರರು ಹೆಚ್ಚಾಗಿ ಹಳೆಯ ಪದ್ಧತಿಯನ್ನೇ ಅನುಸರಿಸುತ್ತಿದ್ದರು. ಆದರೀಗ ತೆರಿಗೆ ಮಿತಿ ಸಡಿಲಿಸಲು ಭಾರೀ ಒತ್ತಡ ಇರುವುದರಿಂದ ಒಂದೆಡೆ ತೆರಿಗೆ ಮಿತಿ ಸಡಿಲಿಸಿ ಅದರಿಂದಾಗುವ ನಷ್ಟವನ್ನು ಭರಿಸಿಕೊಳ್ಳಲು ಹೊಸ ತೆರಿಗೆ ಪದ್ಧತಿ ಪರಿಚಯಿಸಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇತ್ತೀಚಿಗೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರ ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಲು ಯೋಚಿಸುತ್ತಿದೆ ಎಂದಿದ್ದರು. ಹಾಗಾಗಿ ಹಳೆಯ ತೆರಿಗೆ ಪದ್ದತಿಯನ್ನು ರದ್ದು ಮಾಡಿ ಹೊಸ ಆದಾಯ ತೆರಿಗೆ ಪದ್ದತಿಯನ್ನು ಜಾರಿ ಮಾಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ- ಮೋದಿ ಸರ್ಕಾರದಿಂದ ರೈತರಿಗೆ ಪ್ರತಿ ತಿಂಗಳು ಸಿಗುತ್ತೆ 3 ಸಾವಿರ ರೂ.: ಈ ಯೋಜನೆಗೆ ಈಗಲೇ ಅಪ್ಲೇ ಮಾಡಿ
ಹಳೆಯ ತೆರಿಗೆ ಪದ್ದತಿಯಲ್ಲಿ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80C ಅಡಿ 1.5 ಲಕ್ಷ ರೂಪಾಯಿವರೆಗಿನ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಸಿಗುತ್ತಿದೆ. ಸೆಕ್ಷನ್ 80D ಅಡಿ ಅರೋಗ್ಯ, ವಿಮಾ ಪ್ರೀಮಿಯಂ ಮೇಲೆ ವಿನಾಯಿತಿ ಸಿಗುತ್ತದೆ. ಇದರಿಂದ ಆದಾಯದ ಮೊತ್ತ ಕಡಿಮೆ ಎಂದು ಪ್ರತಿಪಾದಿಸಬಹುದಾಗಿದೆ. ಈ ಸೌಲಭ್ಯಗಳಿಲ್ಲದೆ ಹೊಸ ತೆರಿಗೆ ಪದ್ಧತಿ ಘೋಷಿಸಿದರೆ ಖಂಡಿತಕ್ಕೂ ಅದು ತೆರಿಗೆದಾರರಿಗೆ ಹೊರೆಯಾಗಲಿದೆ ಎನ್ನುವ ಅಭಿಪ್ರಾಯಗಳಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.