ಧಾರವಾಡ: ಧಾರವಾಡ ಸತ್ತೂರಿನ ಶಿವಾನಂದ ಹೆರಕಲ್ ಅನ್ನುವವರು ಮನೆ ಕಟ್ಟಿಕೊಳ್ಳಲು ಸೈಟ್ ಹುಡುಕಾಟದಲ್ಲಿದ್ದರು. ಹುಬ್ಬಳ್ಳಿಯ ಅರವಿಂದ ನಗರದ ರಾಘವೇಂದ್ರ ಗಬ್ಬೂರರವರಿಗೆ ಧಾರವಾಡ ಸತ್ತೂರಿನ ಕೆ.ಎಚ್.ಬಿ. ಕಾಲನಿಯಲ್ಲಿ ಎಚ್.ಆಯ್.ಜಿ. 807 ಸೈಟ್ ಇತ್ತು. ಅದನ್ನು ರಾಘವೇಂದ್ರ ಮಾರಾಟ ಮಾಡುವ ಇರಾದೆಯಲ್ಲಿದ್ದರು.
ಈ ವಿಷಯ ದೂರುದಾರನಿಗೆ ಗೊತ್ತಾಗಿ ಎದುರುದಾರರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು. ರೂ. 13 ಲಕ್ಷ ರೂಪಾಯಿಗೆ ಸೈಟ್ ಖರೀದಿಗೆ ಕೊಡಲು ಎದುರುದಾರ ರಾಘವೇಂದ್ರ ಒಪ್ಪಿದನು. ಅದರಂತೆ ದಿ:27/06/2023 ರಂದು ದೂರುದಾರ ಶಿವಾನಂದ ಎದುರುದಾರನಿಗೆ ರೂ. 10 ಲಕ್ಷ ರೂಪಾಯಿ ಮುಂಗಡ ಹಣ ಕೊಟ್ಟನು. ಅಂದೇ ಎದುರುದಾರ ಆ ಸೈಟಿನ ಖರೀದಿ ಕರಾರು ಪತ್ರ ಧಾರವಾಡದ ಸಬ್ ರಜಿಸ್ಟರ್ ಕಛೇರಿಯಲ್ಲಿ ನೋಂದಣಿ ಮಾಡಿಕೊಟ್ಟರು. ಸ್ವಲ್ಪ ಸಮಯದ ನಂತರ ಆ ಬಗ್ಗೆ ಖರೀದಿ ಪತ್ರ ನೋಂದಣಿ ಮಾಡಿ ಕೊಡುವುದಾಗಿ ಎದುರುದಾರ ಹೇಳಿದ್ದರು.
ಆದರೆ ಸಾಕಷ್ಟು ಕಾಲಾವಕಾಶ ಕಳೆದರೂ ಎದುರುದಾರ ದೂರುದಾರರಿಗೆ ಸೈಟ್ ಮಾರಾಟ ಪತ್ರ ನೋಂದಣಿ ಮಾಡಿಕೊಡಲಿಲ್ಲ. ಅಂತಹ ಎದುರುದಾರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದಿ:04/10/2024 ರಂದು ಎದುರುದಾರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಆಯೋಗಕ್ಕೆ ಈ ದೂರು ಸಲ್ಲಿಸಿದ್ದರು.
ಇದನ್ನೂ ಓದಿ-ವಿದೇಶಿಗರಂತೆ 24 ಗಂಟೆಗಳಲ್ಲಿ 100 ಪುರುಷರ ಜೊತೆ ಸಂಭೋಗ ಘೋಷಣೆ..! ದೇಶದ ಪ್ರಸಿದ್ಧ ಮಾಡಲ್ ಬಂಧನ..
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ತಮ್ಮ ಸೈಟನ್ನು ರೂ. 13 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಎದುರುದಾರ ಒಪ್ಪಿದ್ದಾನೆ. ಆ ಬಗ್ಗೆ ಉಭಯತರ ಮಧ್ಯೆ ನೋಂದಾಯಿತ ಕರಾರು ಪತ್ರ ಆಗಿದೆ. ದೂರುದಾರರಿಂದ ರೂ. 10 ಲಕ್ಷ ರೂಪಾಯಿ ಮುಂಗಡ ಹಣವನ್ನು ಎದುರುದಾರ ಪಡೆದಿದ್ದಾನೆ. ಕರಾರಿನಂತೆ ಸದರಿ ಸೈಟಿನ ಮಾರಾಟ ಪತ್ರ ನೋಂದಣಿ ಮಾಡಿಕೊಡುವುದು ಎದುರುದಾರರ ಕರ್ತವ್ಯವಾಗಿದೆ. ಆದರೆ ಎದುರುದಾರ ಆ ರೀತಿ ನೋಂದಣಿ ಮಾಡಿಕೊಡಲು ತಯಾರಿಲ್ಲಿ. ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
ಕರಾರು ಪತ್ರದ ಒಪ್ಪಂದದಂತೆ ತೀರ್ಪು ನೀಡಿದ ಒಂದು ವಾರದೊಳಗಾಗಿ ದೂರುದಾರ ಬಾಕಿ ಇರುವ ರೂ. 3 ಲಕ್ಷ ಹಣವನ್ನು ಎದುರುದಾರರಿಗೆ ಕೊಡಬೇಕು. ಅಥವಾ ಈ ಆಯೋಗದಲ್ಲಿ ಡಿಪಾಜಿಟ್ ಮಾಡಬೇಕು. ಆ ನಂತರ ಒಂದು ತಿಂಗಳ ಒಳಗಾಗಿ ಎದುರುದಾರ ಒಪ್ಪಂದಂತೆ ಎಚ್.ಆಯ್.ಜಿ. 807 ಸೈಟಿನ ಮಾರಾಟ ಪತ್ರವನ್ನು ದೂರುದಾರರಿಗೆ ನೋಂದಣಿ ಮಾಡಿಸಿಕೊಡಬೇಕು ಅಂತಾ ನಿರ್ದೇಶಿಸಿದೆ. ಒಂದು ವೇಳೆ ಎದುರುದಾರ ಆ ರೀತಿ ಮಾಡಲು ವಿಫಲನಾದಲ್ಲಿ ನಂತರ ದೂರುದಾರರು ಈ ಆಯೋಗದಿಂದ ತನ್ನ ಖರ್ಚು ವೆಚ್ಚದಲ್ಲಿ ಕಮೀಷನರ್ ನೇಮಿಸಿಕೊಂಡು ಕ್ರಯಪತ್ರ ನೋಂದಣಿ ಮಾಡಿಸಿಕೊಳ್ಳಬೇಕು ಅಂತಾ ತೀರ್ಪಿತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.